ಲೇಖಕ: admin

ಮಡಿಕೇರಿ ನ.23 NEWS DESK : ಭಾರತ ದೇಶದ ಆಸ್ತಿಯಾಗಿರುವ ಭಾರತೀಯ ಸೇನೆಯ ಪಿತಾಮಹ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಕಿಡಿಗೇಡಿಯನ್ನು ತಕ್ಷಣ ಗಡಿಪಾರು ಮಾಡಬೇಕು. ತಪ್ಪಿದಲ್ಲಿ ಕೊಡಗು ಬಂದ್ ಗೆ ಕರೆ ನೀಡುವುದಾಗಿ ಜಬ್ಬೂಮಿ ಸಂಘಟನೆಯ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀವತ್ಸ ಭಟ್ ಎಂಬ ಖಾತೆಯ ಮೂಲಕ ವೀರ ಸೇನಾನಿಗಳನ್ನು ಅವಮಾನಿಸಿದ ಆರೋಪಿಯನ್ನು ಬಂಧಿಸಿರುವ ಕುರಿತು ಈಗಾಗಲೇ ಮಾಹಿತಿ ಲಭ್ಯವಾಗಿದೆ. ಆದರೆ ಈತನನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರು ಜಾತಿ, ಮತ ಬೇಧ, ಧರ್ಮಗಳನ್ನು ಮೀರಿದ ಅಪ್ರತಿಮ ವ್ಯಕ್ತಿತ್ವದ ವೀರ ಸೇನಾಧಿಕಾರಿಗಳಾಗಿದ್ದಾರೆ. ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣೆಗೆ ಇವರಿಬ್ಬರು ನೀಡಿದ ಕೊಡುಗೆ ಅಪಾರವಾಗಿದೆ. ಇವರನ್ನು ಅವಹೇಳನ ಮಾಡಿರುವುದು ದೇಶದ್ರೋಹದ ಕೃತ್ಯವಾಗಿದೆ. ಇಡೀ ದೇಶದ…

Read More

ಮಡಿಕೇರಿ ನ.23 NEWS DESK : ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಂಸ್ಥೆಯ ಪ್ರಮುಖರು, ಹೊದ್ದೂರು ಗ್ರಾಮಸ್ಥರು ಹಾಗೂ ರೈತರು ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಕೃಷಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಕಟ್ಟಡ ಪಾಳುಬಿದ್ದಿದೆ. ಕಟ್ಟಡದ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಗ್ರಾಮಸ್ಥರು ಹಾಗೂ ರೈತರು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಈ ಸಂದರ್ಭ ಮಾತನಾಡಿದ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ, ಹೊದ್ದೂರು ಗ್ರಾಮದ ಕಬಡಕೇರಿ ಗ್ರಾಮದಲ್ಲಿ ಗ್ರಾಮ ಸೇವಕರಿಗಾಗಿ ಹಲವು ವರ್ಷಗಳ ಹಿಂದೆ ಕೃಷಿ ಇಲಾಖೆಯಿಂದ ಕಚೇರಿ ನಿರ್ಮಿಸಲಾಗಿದ್ದು, ಇದೀಗ ಅದರ ನಿರ್ವಹಣೆ ಇಲ್ಲದೆ ಕಟ್ಟಡ ಪಾಳು ಬಿದ್ದಿದೆ. ಕಟ್ಟಡದ ಸುತ್ತಮುತ್ತ ಕಾಡು ಬೆಳೆದಿದ್ದು, ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಹಯೋಗದಲ್ಲಿ ಗ್ರಾಮಸ್ಥರು, ರೈತರು ಸೇರಿ ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತಾಪಿ ವರ್ಗಕ್ಕೆ ಕಟ್ಟಡ ನೆರವಾಗುವ ನಿಟ್ಟಿನಲ್ಲಿ ಇಲಾಖೆಯ…

Read More

ಮಡಿಕೇರಿ ನ.23 NEWS DESK : ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ ಅಂಗವಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನ.26 ರಂದು ರೈತ ಮೇಳವನ್ನು ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಡಾ.ಸಿ.ಜಿ.ಕುಶಾಲಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಕೃಷಿ ವಿಜ್ಞಾನ ವೇದಿಕೆ 25 ವರ್ಷ ಪೂರೈಸಿದೆ. ಬೆಳ್ಳಿ ಮಹೋತ್ಸವ ಅಂಗವಾಗಿ ಅನವ್ರತ ಘೋಷವಾಕ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭತ್ತದ ಕೃಷಿ ಪುನಶ್ಚೇತನ, ಸುಸ್ಥಿರಢ ಕಾಫಿ ಕೃಷಿ, ಕೃಷಿ ವ್ಯವಸ್ಥೆಯ ವೈವಿಧ್ಯೀಕರಣ, ಕೃಷಿ ಅರಣ್ಯ, ಕೃಷಿ ವ್ಯಾಪರ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ರೈತ ಮೇಳವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ವಿಚಾರಗಳ ಕುರಿತು ವಿಚಾರ ಮಂಡನೆ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಲಿದೆ ಎಂದು ತಿಳಿಸಿದರು. ಯುವಜನತೆಯನ್ನು ಕೃಷಿಯತ್ತ ಸೆಳೆಯುವ ದೃಷ್ಠಿಯಿಂದ ಪೊನ್ನಂಪೇಟೆ ವ್ಯಾಪ್ತಿಯ 5 ಪದವಿ ಕಾಲೇಜಿನಿಂದ 10 ವಿದ್ಯಾರ್ಥಿಗಳಂತೆ 60 ವಿದ್ಯಾರ್ಥಿಗಳನ್ನು ಮೇಳಕ್ಕೆ ಆಹ್ವಾನಿಸಲಾಗಿದೆ. ಅಲ್ಲದೇ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸೋಮೆಯಂಗಡ ಗಣೇಶ್ ತಿಮ್ಮಯ್ಯ ಅವರ ಜಮೀನಿಗೆ…

Read More

ಮಡಿಕೇರಿ ನ.23 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗಾಳಿಬೀಡು ಗೌಡ ಜನಾಂಗ ಬಾಂಧವರ ಸಹಯೋಗದಲ್ಲಿ 10 ಕುಟುಂಬ 18 ಗ್ರೋತ್ರದ ಗೌಡ ಜನಾಂಗ ಬಾಂಧವರಿಗೆ ಡಿ.1 ರಂದು ಗಾಳಿಬೀಡು ಬಾಣೆ ಹಬ್ಬ ಏರ್ಪಡಿಸಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ತಿಳಿಸಿದರು. ನಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30 ಗಂಟೆಗೆ ಗಾಳಿಬೀಡು ಶಾಲಾ ಮೈದಾನದಲ್ಲಿ 8 ಕಿ.ಮೀ ಕ್ರಾಸ್ ಕಂಟ್ರಿ ಪೈಪೋಟಿ ಆರಂಭವಾಗಲಿದೆ. ಗಾಳಿಬೀಡಿನ 8 ಗೌಡ ಮನೆತನದ ಮಾರ್ಗವಾಗಿ ಸಾಗಿ ಹೋಗುವುದು ಕ್ರಾಸ್ ಕಂಟ್ರಿ ವಿಶೇಷತೆಯಾಗಿದೆ. ಕೋಚನ ಮನೆತನದ ಮಾರ್ಗವಾಗಿ ಆರಂಭಗೊಂಡು ಪೂಜಾರಿರ, ಉಡುದೋಳಿ, ಕರಕರನ, ಕೋಳುಮುಡಿಯನ, ಕೊಂಬಾರನ, ಯಾಲದಾಳು, ಅಚ್ಚಪಟ್ಟೀರ ಮನೆತನಗಳ ಮಾರ್ಗವಾಗಿ ಸಾಗಿ ಶಾಲಾ ಮೈದಾನ ತಲುಪಲಿದೆ ಎಂದು ಮಾಹಿತಿ ನೀಡಿದರು. ಬಾಣೆ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ವಿವಿಧ ವಿಭಾಗದಲ್ಲಿ ಶೂಟಿಂಗ್ ಸ್ಫರ್ಧೆ ಪ್ರಾರಂಭವಾಗಲಿದೆ. ಅಂದು .22 ರೈಫಲ್, 12 ಬೋರ್, ಏರ್ ರೈಫಲ್…

Read More

ಮಡಿಕೇರಿ ನ.23 NEWS DESK :  ಭಾರತೀಯ ವಿದ್ಯಾಭವನ -ಸ್ಪಿಕ್ ಮೆಕೆ ಕೊಡಗು ವತಿಯಿಂದ ಪ್ರಸಿದ್ಧ ಕಲಾವಿದ ಬಾಬುಲ್ ಅಲಿ ಅವರಿಂದ “ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ ಕಾರ್ಯಕ್ರಮವನ್ನು ನ.26 ರಂದು ಸಂಜೆ 6.30ಕ್ಕೆ ಮಡಿಕೇರಿಯ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.  ಪ್ರಸಿದ್ಧ ಗಾಯಕ ಬಾಬುಲ್ ಅಲಿ ಅವರು ಭಾರತದ ಅನನ್ಯ ಭಕ್ತಿಗೀತೆಗಳ ರೂಪವಾದ ಜಿಕೀರ್, ಜಾರಿ, ಮತ್ತು ನಾತೆ-ರಸುಲ್ ಪ್ರಕಾರಗಳನ್ನು ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಈ ಅಧ್ಯಾತ್ಮ ಚಿಂತನೆಯ ಗೀತೆಗಳು ನಂಬಿಕೆ, ಭ್ರಾತೃತ್ವ, ಮತ್ತು ಸಹಬಾಳ್ವೆಯಂತಹ ವಿಶ್ವಮೌಲ್ಯಗಳನ್ನು ನೆನಪಿಸುವ ಅಪೂರ್ವ ಕಲೆಯ ರೂಪಗಳು. ಬಾಬುಲ್ ಅಲಿ ಅವರು 1980 ರಿಂದ 1985ರ ಅವಧಿಯಲ್ಲಿ ಗುರು ರೇಕಿಬುಡಿನ್ ಅಹ್ಮೆದ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿರುವ ಅವರು ತಮ್ಮ ಹುಟ್ಟೂರು ಅಸ್ಸಾಂನಲ್ಲಿ ಮಾತ್ರವಲ್ಲ, ದೇಶದ ಹಲವೆಡೆ, ವಿಶೇಷವಾಗಿ ರವೀಂದ್ರ ಭವನ (ಗುವಾಹಟಿ), ಸಂಗೀತ ನಾಟಕ ಅಕಾಡೆಮಿ, ಮತ್ತು ತೆಲಂಗಾಣ ರಾಜ್ಯೋತ್ಸವ (2015) ಕಾರ್ಯಕ್ರಮಗಳಲ್ಲಿ…

Read More

ಮಡಿಕೇರಿ ನ.23 NEWS DESK : ಮೈಸೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಜಿ.ಆರ್.ವಿಶ್ವಾಸ್ ವೆಂಕಟ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ವಿಶ್ವಾಸ್ ವೆಂಕಟ್ ಮೂಲತಃ ಮಡಿಕೇರಿಯವನಾಗಿದ್ದು, ಮೈಸೂರಿನ ಡಿಎವಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ವಿಶ್ವಾಸ್ ಮಡಿಕೇರಿ ಗೌಳಿಬೀದಿಯ ಜಿ.ವಿ.ರವಿಕುಮಾರ್ ಹಾಗೂ ಸಿ.ಜೆ.ಪ್ರಿಯಾ ದಂಪತಿಯ ಪುತ್ರ.

Read More

ಮಡಿಕೇರಿ ನ.23 NEWS DESK : ಕೊಡಗಿನ ಹೆಮ್ಮೆಯ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಹಾಕಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಸಿ, ದೇಶ ದ್ರೋಹದ ಪ್ರಕರಣ ದಾಖಲಿಸಬೇಕೆಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲ ವೃತ್ತಿ ಎನ್ನುವುದು ಅತ್ಯಂತ ಘನತೆ ಗೌರವಗಳನ್ನು ಹೊಂದಿರುವ ವೃತ್ತಿ. ಇಂತಹ ವೃತ್ತಿಯಲ್ಲಿರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ವೀರ ಸೇನಾನಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಬಗ್ಗೆ ಮಡಿಕೇರಿ ವಕೀಲರ ಸಂಘ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ಫೀ.ಮಾ. ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಇಡೀ ರಾಷ್ಟ್ರ ಅತ್ಯಂತ ಗೌರವದಿಂದ ಕಾಣುತ್ತದಲ್ಲದೆ, ವಿಶ್ವದಾದ್ಯಂತ ಗೌರವಾದರಗಳಿವೆ. ಇಂತಹವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೇಳಿಕೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆರೋಪಿಯ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಿ ದೇಶದ ಭದ್ರತಾ ಕಾಯ್ದೆಯ ಅನ್ವಯ…

Read More

ಮಡಿಕೇರಿ NEWS DESK ನ.23 : ಬಹುಮತ ಪಡೆದು ಜನಹಿತ ಕಾಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಪಪ್ರಚಾರದ ಮೂಲಕ ಅಸ್ಥಿರಗೊಳಿಸಲು ಯತ್ನಿಸಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಉಪ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ತಿಳಿಸಿದ್ದಾರೆ.  ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಗೆಲುವು ತಂದುಕೊಡುವ ಮೂಲಕ ಜನ ಗ್ಯಾರಂಟಿ ಸರ್ಕಾರದ ಪರ ನಾವಿದ್ದೇವೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಜನ ಮನ್ನಣೆ ಗಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹತಾಶೆಗೊಂಡ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿದರು. ಮುಡಾ ಆಸ್ತಿ ಗೊಂದಲ, ವಾಲ್ಮೀಕಿ ಅಭಿವೃಧ್ಧಿ ನಿಗಮದ ಅನುದಾನ, ವಕ್ಫ್ ಆಸ್ತಿ ವಿವಾದ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳ ಕುರಿತು ತಪ್ಪು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡಲಾಯಿತು. ಅಲ್ಲದೆ…

Read More

ಮಡಿಕೇರಿ ನ.23 NEWS DESK :  ಎನ್‌ಸಿಸಿ ದಿನಾಚರಣೆ ಅಂಗವಾಗಿ ಕೊಡಗು ವಿದ್ಯಾಲಯದ ಎನ್‌ಸಿಸಿ ಕೆಡೆಟ್ ಗಳು ನಗರದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಪ್ರತಿಮೆಯನ್ನು ಸ್ವಚ್ಚಗೊಳಿಸಿದರು. ನಗರದ ಮೈಸೂರು ರಸ್ತೆಯಲ್ಲಿನ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ವೃತ್ತದ ಬಳಿಯಿರುವ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಪ್ರತಿಮೆಯನ್ನು ಶುಚಿಗೊಳಿಸಿ, ಈ ವ್ಯಾಪ್ತಿಯಲ್ಲಿದ್ದ ಕಾಡು ಗಿಡಗಳನ್ನು ಕಡಿದು, ಕುರಚಲು ಗಿಡಗಳನ್ನು ತೆರವುಗೊಳಿಸಲಾಯಿತು. 40 ಕೆಡೆಟ್ ಗಳು ಪಾಲ್ಗೊಂಡಿದ್ದ ಈ ಸ್ವಚ್ಚತಾ ಅಭಿಯಾನದಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ ಆಡಳಿತಾಧಿಕಾರಿ  ಪಿ.ರವಿ, ಎನ್ ಸಿಸಿ ಅಧಿಕಾರಿ ದಾಮೋದರ ಪಾಲ್ಗೊಂಡಿದ್ದರು.

Read More

ಮಡಿಕೇರಿ ನ.23 NEWS DESK : ಕರ್ನಾಟಕ ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಸವಣೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಯಿತು. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ್, ಕೆ.ಪಿ.ಸಿ.ಸಿ. ಸದಸ್ಯರಾದ ಯಾಕೂಬ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯೇಂದ್ರ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸುನೀಲ್, ಸುಜೀತ್, ಉಪಾಧ್ಯಕ್ಷರಾದ ಬಸವರಾಜು, ವಕ್ತಾರ ರಜಾಕ್ ಬಜೆಗುಂಡಿ, ನಗರ ಕಾಂಗ್ರೆಸ್ ಕಾರ್ಯಾಧ್ಯಕ್ಷ ಭುವನೇಶ್, ಉಪಾಧ್ಯಕ್ಷರಾದ ಜಮೀರ್, ಜಾಕೋಬ್ ಸೈಮನ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫೀ, ಬ್ಲಾಕ್ ಕಾಂಗ್ರೆಸ್ ಎಸ್ಪಿ ಘಟಕದ ಅಧ್ಯಕ್ಷ ರಾಜಪ್ಪ ಹಾಗೂ ಬ್ಲಾಕ್ ಮತ್ತು ನಗರ…

Read More