ಮಡಿಕೇರಿ NEWS DESK ಮಾ.3 : ಸ್ತ್ರೀ-ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದು ತಂಡವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಮತ್ತು ಅಮೋಘವಾದ ಕ್ರೀಡಾಸ್ಫೂರ್ತಿಯನ್ನು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯವೆಂದು ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಕ್ರೀಡಾಪಟು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯಪಟ್ಟಿದ್ದಾರೆ. ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಕೊಡವ ಕುಟುಂಬಗಳ ನಡುವೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮೂರ್ನಾಡು ಹಾಗೂ ಅರಮೇರಿಯಲ್ಲಿ ನಡೆಸಲಿರುವ 24ನೇ ವರ್ಷದ ‘ಮುಕ್ಕಾಟಿರ ಕ್ರಿಕೆಟ್ ನಮ್ಮೆ-2026’ರ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶಿಷ್ಟ ಮತ್ತು ಹೊಂದಾಣಿಕೆಯ ಕ್ರೀಡಾಕೂಟಗಳು ಕೊಡಗು ಹೊರತು ಪಡಿಸಿದರೆ ದೇಶದ ಬೇರೆ ಯಾವ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ. ದೇಶ ಸೇರಿದಂತೆ ಪ್ರಪಂಚದ ಎಲ್ಲಾ ಕಡೆಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ತಂಡಗಳಿರುತ್ತವೆ. ಒಂದಾಗಿ ಪಾಲ್ಗೊಳ್ಳಲು ಯಾವುದೇ ಕ್ರೀಡೆಯಲ್ಲಿಯೂ…
ಲೇಖಕ: Lakshmish S K
ಹೊಸದಿಲ್ಲಿ, ಮಾರ್ಚ್ 2, 2026: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಜಾಗತಿಕ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿದ್ದು, ಭಾರತದ ಮೇಲೆ ಇದರ ನೇರ ಮತ್ತು ಗಂಭೀರ ಪರಿಣಾಮಗಳು ಗೋಚರಿಸಲಾರಂಭಿಸಿವೆ. ತೈಲ ಪೂರೈಕೆಯಲ್ಲಿ ವ್ಯತ್ಯಯ, ಹಡಗು ಸಂಚಾರದ ಮಾರ್ಗ ಬದಲಾವಣೆ ಮತ್ತು ಷೇರು ಮಾರುಕಟ್ಟೆಯ ಕುಸಿತವು ದೇಶದ ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. 1. ತೈಲ ಬೆಲೆ ಏರಿಕೆ ತೂಗುಗತ್ತಿ ಭಾರತವು ತನ್ನ ಕಚ್ಚಾ ತೈಲದ ಬಹುಪಾಲನ್ನು ಮಧ್ಯಪ್ರಾಚ್ಯದಿಂದಲೇ ಆಮದು ಮಾಡಿಕೊಳ್ಳುತ್ತದೆ. ಬೆಲೆ ಏರಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ತೈಲ ಬೆಲೆ ಶೇ.10ರಷ್ಟು ಏರಿಕೆಯಾಗಿದೆ. ಪ್ರಸ್ತುತ ಬ್ಯಾರಲ್‌ಗೆ 73 ಡಾಲರ್ ಇರುವ ಬೆಲೆಯು ಸಂಘರ್ಷ ಮುಂದುವರಿದರೆ 100 ಡಾಲರ್ ತಲುಪುವ ಭೀತಿ ಇದೆ. ಪೂರೈಕೆ ಅಡ್ಡಿ: ಹೋರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಪೂರೈಕೆಗೆ ಅಡ್ಡಿಯಾಗುತ್ತಿರುವುದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ದಾರಿ ಮಾಡಿಕೊಡಲಿದೆ. 2. ಷೇರುಪೇಟೆ ಮತ್ತು ರೂಪಾಯಿ ಮೌಲ್ಯ ಧರಾಶಾಹಿ ಯುದ್ಧದ ಭೀತಿಯಿಂದ ಹೂಡಿಕೆದಾರರು ತಮ್ಮ ಹಣವನ್ನು ಹಿಂಪಡೆಯುತ್ತಿದ್ದು, ಭಾರತೀಯ ಮಾರುಕಟ್ಟೆ…
ಮಡಿಕೇರಿ, NEWS DESK ಮಾ.2:-ಮಡಿಕೇರಿ ತಾಲೂಕಿನ ಕೆ.ನಿಡುಗಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕಚೇರಿ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರು ನಿರ್ದೇಶನ ನೀಡಿದ್ದಾರೆ. ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಮೊಟ್ಟೆ ಜಹಂಗೀರ್ ಪರಿಶಿಷ್ಟ ಜಾತಿ ಕಾಲೋನಿ ಜನರ ಮನೆಗೆ ಹೋಗುವ 10 ಲಕ್ಷ ರೂಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೆ.ನಿಡುಗಣೆ ಪಂಚಾಯತ್ ಜಿಲ್ಲೆಯಲ್ಲಿ ಅತ್ಯಂತ ಆದಾಯ ಹೊಂದಿರುವ ಪಂಚಾಯತ್ ಆಗಿದ್ದು, ಸುಮಾರು 2.5 ಕೋಟಿ ವಾರ್ಷಿಕ ಆದಾಯ ಗಳಿಸುತ್ತಿದ್ದು ಒಂದು ಸುಸಜ್ಜಿತ ಸ್ವಂತ ಕಟ್ಟಡ ಹೊಂದಿಲ್ಲದೆ ಇರುವುದು ವಿμÁದನೀಯ ಎಂದು ಹೇಳಿದರು. ಈ ಹಿನ್ನಲೆಯಲ್ಲಿ ಸ್ಥಳ ಗುರುತಿಸಿ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಕಾರ್ಯಸೂಚಿ ತಯಾರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ರವರಿಗೆ ಸೂಚನೆ ನೀಡುವುದರ ಜೊತೆಗೆ ತಮ್ಮ ಶಾಸಕರ ಅನುದಾನದಲ್ಲಿ ಹಣ ಒದಗಿಸುತ್ತಿದ್ದು ಜೊತೆಗೆ ಪಂಚಾಯತ್ ಸಂಪನ್ಮೂಲ ಗಳನ್ನು ಬಳಕೆ ಮಾಡುವಂತೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ…
ಮಡಿಕೇರಿ, NEWS DESK ಮಾ.2:-ಇದೇ ಮಾರ್ಚ್ 3 ರಂದು ಮಂಗಳವಾರ ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ದೇವಾಲಯ ಹಾಗೂ ಶ್ರೀ ಕೋಟೆ ಗಣಪತಿ ದೇವಾಲಯದಲ್ಲಿ ದೇವರ ದರ್ಶನ ಹಾಗೂ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು, ಗ್ರಹಣದ ಹಿನ್ನಲೆ ದೇವಾಲಯದಲ್ಲಿ ಧಾರ್ಮಿಕ ಕ್ರಮ ಹಾಗೂ ವಿಧಿ ವಿಧಾನವನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ಓಂಕಾರೇಶ್ವರ ದೆವಾಲಯದ ವ್ಯವಸ್ಥಾಪನಾ ಸಮಿತಿ ಕೋರಿದೆ. ಮಾ.3 ರಂದು ಬೆಳಗ್ಗೆ 7.30 ರಿಂದ ಬೆಳಗ್ಗೆ 9 ಗಂಟೆಯ ವರೆಗೆ ಮಾತ್ರ ದೇವಾಲಯ ಭಕ್ತರ ದರ್ಶನಕ್ಕೆ ತೆರೆದಿರಲಿದೆ. ಬೆಳಗ್ಗೆ 9 ಗಂಟೆಗೆ ಮಹಾ ಪೂಜೆ ನಡೆಯಲಿದ್ದು, ನಂತರ ದೇವಾಲಯವನ್ನು ಗ್ರಹಣ ಪ್ರಯುಕ್ತ ತೆರೆದಿರುವುದಿಲ್ಲ. ಸಂಜೆ 6.48ರ ಗ್ರಹಣ ಮೋಕ್ಷ ಕಳೆದ ನಂತರ ದೇವಾಲಯವನ್ನು ತೆರೆಯಲಾಗುವುದು. ಆದರೆ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ರಾತ್ರಿ 8 ಗಂಟೆಗೆ ನಡೆಯುವ ಮಹಾ ಪೂಜೆಗೆ ಪಾಲ್ಗೊಳ್ಳಲು ಭಕ್ತಾದಿಗಳಿಗೆ ಅವಕಾಶವಿದೆ. ವಿಶೇಷ ಸೂಚನೆ: ಗ್ರಹಣ (ಗ್ರಹ) ದೋಷ…
ಮಡಿಕೇರಿ, NEWS DESK ಮಾ.02:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್, 06 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಿನಿ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಅಪೋಲೋ ಫಾರ್ಮಸಿ ಮೈಸೂರು, ಜಾಯ್ ಆಲುಕಾಸ್ ಜ್ಯುವೆಲ್ಲರಿ ಮೈಸೂರು, ಕಲ್ಯಾಣಿ ಮೋಟಾರ್ಸ್ ಕಾರ್ ಶೋರೂಂ, ಮಡಿಕೇರಿ, ಕೂರ್ಗ್ ಕ್ಲಿಪ್ಸ್ ರೆಸಾರ್ಟ್ ಸಿದ್ದಾಪುರ, ಕ್ಲಬ್ ಮಹೀಂದ್ರ ರೆಸಾರ್ಟ್, ಮಡಿಕೇರಿ, ಆಲ್ಫಾ ಟೆಕ್ನಾಲಜಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಉದ್ಯೋಗಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ(ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ…
ಮಡಿಕೇರಿ, NEWS DESK ಮಾ.02:-ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೆÇನ್ನಣ್ಣ ಅವರು ಭೇಟಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಲ್ಲಿನ ಕುಮ್ಮೆಹೊಳೆಗೆ ಚೆಕ್ ಡ್ಯಾಮ್ ನಿರ್ವಹಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು ಈ ಕಾಮಗಾರಿಯು 1.50 ಕೋಟಿ ರೂ ವೆಚ್ಚದಲ್ಲಿ ನಡೆಯಲಿದ್ದು, ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯುವ ಕಾಮಗಾರಿಯು ಸುತ್ತಮುತ್ತಲಿನ ಜಮೀನಿಗೆ ನೀರಾವರಿ ಸೌಲಭ್ಯ ಒದಗುವುದರೊಂದಿಗೆ ಅಂತರ್ಜಲ ಸಹ ವೃದ್ಧಿಯಾಗಲಿದೆ ಎಂದು ತಿಳಿಸಿದರು. ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಲ್ಲಿ ಹಾಗೂ ಅತಿ ಶೀಘ್ರವಾಗಿ ನಿರ್ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಗುತ್ತಿಗೆದಾರರಿಗೆ ಮಾನ್ಯ ಶಾಸಕರು ಸೂಚಿಸಿದರು. ಬಳಿಕ ಇಲ್ಲಿಯ ಚಾಮುಂಡಿ ಪೈಸಾರಿಗೆ ಭೇಟಿ ನೀಡಿದ ಶಾಸಕರು, ತಮ್ಮ ಅನುದಾನದ 15 ಲಕ್ಷ ರೂ.ಗಳಲ್ಲಿ ನಿರ್ಮಿಸಿದ ರಸ್ತೆಯನ್ನು ಸಾರ್ವಜನಿಕರ ಬಳಕೆಗಾಗಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪಟ್ಟಡ ರಂಜಿ ಪೂಣಚ್ಚ,…
ಮಡಿಕೇರಿ, NEWS DESK ಮಾ.2:-ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ರಿಕ್ಷಾ ನಿಲ್ದಾಣ ಹಾಗೂ ಕಾವೇರಿ ಕಾರು ಚಾಲಕ ಮಾಲೀಕರ ಸಂಘದ ಕಾರು ನಿಲ್ದಾಣಗಳಿಗೆ 11 ಲಕ್ಷ ರೂ ವೆಚ್ಚದ ಸುಸಜ್ಜಿತ ಮೇಲ್ಚಾವಣಿ ಹಾಗೂ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ 16 ಲಕ್ಷ ರೂ ವೆಚ್ಚದ ಸುಸಜ್ಜಿತ ಶೌಚಾಲಯದೊಂದಿಗೆ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕ್ಷೇತ್ರದ ಜನರ ಕೋರಿಕೆಯನ್ನು ಈಡೇರಿಸುವ ಜೊತೆಗೆ ಕ್ಷೇತ್ರದ ಜನರ ಒಳಿತಿಗಾಗಿ ಅಭಿವೃದ್ಧಿ ಕಾರ್ಯ ಮಾಡುವುದು ಜನಪ್ರತಿನಿಧಿಯ ಕರ್ತವ್ಯ ವಾಗಿದೆ. ಈ ನಿಟ್ಟಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾದ ಮಡಿಕೇರಿ ನಗರದ ಜನರ ಬವಣೆಯನ್ನು ಗಮನಿಸಿ ಈ ಎರಡು ಕಾಮಗಾರಿಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲಾಗಿದೆ ಎಂದು…
ನವದೆಹಲಿ/ಮಸ್ಕತ್, ಮಾರ್ಚ್ 2, 2026: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಗೆ ಪ್ರತಿರೋಧ ಒಡ್ಡುತ್ತಿರುವ ಇರಾನ್, ಈಗ ಒಮನ್ ಕರಾವಳಿಯಲ್ಲೂ ತನ್ನ ಆಕ್ರಮಣಕಾರಿ ಮುಖ ಪ್ರದರ್ಶಿಸಿದೆ. ಇರಾನ್‌ನ ಮಾನವರಹಿತ ಡ್ರೋನ್ ಹಡಗು (Unmanned Drone Ship) ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಸ್ಫೋಟದಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದು ಪ್ರಸ್ತುತ ಸಂಘರ್ಷದಲ್ಲಿ ವರದಿಯಾದ ಮೊದಲ ಭಾರತೀಯ ಪ್ರಜೆಯ ಸಾವಾಗಿದೆ. ಘಟನೆಯ ಭೀಕರತೆ: ಎಂಜಿನ್ ಕೋಣೆಯಲ್ಲಿ ಸ್ಫೋಟ: ಇರಾನ್‌ನ ಆತ್ಮಹತ್ಯಾ ಡ್ರೋನ್ ಹಡಗು ನೇರವಾಗಿ ತೈಲ ಟ್ಯಾಂಕರ್‌ನ ಮುಖ್ಯ ಎಂಜಿನ್ ಕೋಣೆಗೆ ಅಪ್ಪಳಿಸಿದೆ. ಇದರಿಂದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದೆ. ಸಿಬ್ಬಂದಿ ವಿವರ: ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದರು. ಇವರಲ್ಲಿ 16 ಮಂದಿ ಭಾರತೀಯರು, ನಾಲ್ವರು ಬಾಂಗ್ಲಾದೇಶಿಯರು ಹಾಗೂ ಒಬ್ಬ ಉಕ್ರೇನಿಯನ್ ಪ್ರಜೆ ಇದ್ದರು. ರಕ್ಷಣಾ ಕಾರ್ಯಾಚರಣೆ: ಘಟನೆ ನಡೆದ ತಕ್ಷಣ ಪಕ್ಕದಲ್ಲೇ ಇದ್ದ ಪನಾಮ ಧ್ವಜದ ವ್ಯಾಪಾರಿ ಹಡಗು ರಕ್ಷಣೆಗೆ ಧಾವಿಸಿದ್ದು, ಬದುಕುಳಿದ…
ಕುವೈತ್ ಸಿಟಿ/ವಾಷಿಂಗ್ಟನ್, ಮಾರ್ಚ್ 2, 2026: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕದ ಮಿಲಿಟರಿ ಪಡೆಗಳಿಗೆ ಆಘಾತಕಾರಿ ಘಟನೆಯೊಂದು ಎದುರಾಗಿದೆ. ತನ್ನದೇ ಮಿತ್ರ ರಾಷ್ಟ್ರವಾದ ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ ಮೂರು ಎಫ್-15 (F-15E Strike Eagle) ಫೈಟರ್ ಜೆಟ್‌ಗಳನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ದೃಢಪಡಿಸಿದೆ. ಘಟನೆಯ ವಿವರ: ಆಕಸ್ಮಿಕ ದಾಳಿ: ಮಾರ್ಚ್ 1ರಂದು ರಾತ್ರಿ 11:03ಕ್ಕೆ ‘ಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಜೆಟ್‌ಗಳನ್ನು ಶತ್ರು ವಿಮಾನಗಳೆಂದು ತಪ್ಪಾಗಿ ಭಾವಿಸಿದ ಕುವೈತ್ ಏರ್ ಡಿಫೆನ್ಸ್ ದಾಳಿ ನಡೆಸಿದೆ. ಪೈಲಟ್‌ಗಳು ಸುರಕ್ಷಿತ: ಅದೃಷ್ಟವಶಾತ್, ವಿಮಾನಗಳು ಪತನಗೊಳ್ಳುವ ಮುನ್ನವೇ ಪೈಲಟ್‌ಗಳು ಇಜೆಕ್ಟ್ (Eject) ಆಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ. ಕುವೈತ್ ಒಪ್ಪಿಗೆ: ಕುವೈತ್ ಸರ್ಕಾರವು ಈ ಗಂಭೀರ ಪ್ರಮಾದವನ್ನು ಒಪ್ಪಿಕೊಂಡಿದ್ದು, ತನಿಖೆಗೆ ಆದೇಶಿಸಿದೆ. ಈ ಆಕಸ್ಮಿಕ ಘಟನೆಯ ಹೊರತಾಗಿಯೂ ಅಮೆರಿಕವು ಕಾರ್ಯಾಚರಣೆಯಲ್ಲಿ ಕುವೈತ್ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ. ಇರಾನ್‌ನ…






