ಲೇಖಕ: Lakshmish S K

ಕುಶಾಲನಗರ, NEWS DESK:  ಮಾ.02: ಕಾವೇರಿ ಕೇವಲ ನದಿಯಲ್ಲ. ಅದೊಂದು ಜನಕೋಟಿ ಹಾಗೂ ಜೀವ ರಾಶಿಯ ಪಾವನ ಗಂಗೆ. ನದಿಯನ್ನು ಸಂರಕ್ಷಿಸದೇ ನಿರ್ಲಕ್ಷ್ಯ ತೋರಿದರೆ ಸಂಸ್ಕ್ರತಿಯೇ ನಾಶವಾದಂತೆ ಎಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಭಿಪ್ರಾಯಪಟ್ಟರು. ಸೋಮವಾರ ಕಣಿವೆಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯ ಕಾವೇರಿ ನದಿಗೆ ಹೆಬ್ಬಾಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾವೇರಿ ಆರತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನದಿಯನ್ನು ಪ್ರತಿಯೊಬ್ಬರು ಮನೆಯ ದೇವರ ಗುಡಿಯಂತೆ ಕಾಣಬೇಕು. ಹೆತ್ತ ತಾಯಿಯಂತೆ ಪೂಜಿಸಬೇಕು. ಕಲುಷಿತ ತ್ಯಾಜ್ಯಗಳನ್ನು ನದಿಗೆ ಬಿಸಾಕದ ಹಾಗೆ ಎಚ್ಚರಿಕೆ ವಹಿಸಬೇಕೆಂದು ಅವರು ಕೋರಿದರು. ಸಂಘದ ಕೂಡಿಗೆ ವಲಯದ ಮೇಲ್ವಿಚಾರಕ ಅಚ್ಯುತ, ಹೆಬ್ಬಾಲೆ ಸೇವಾ ಪ್ರತಿನಿಧಿ ಕಲ್ಪನಾ ಪ್ರಕಾಶ್, ಮಂಜುಳಾ ಮಹದೇವ್, ಪವಿತ್ರ, ವಿಶಾಲಾಕ್ಷಿ, ಕಮಲಮ್ಮ, ರೂಪ, ಸುಶ್ಮಿತಾ, ಸವಿತಾ ಇದ್ದರು.

Read More

ಮಡಿಕೇರಿ, NEWS DESK ಮಾ.2 : ಭಾಷೆ, ಬರಹ ಮತ್ತು ಭಾವನೆಗಳ ಸಮ್ಮಿಲನವೇ ಶಿಕ್ಷಣ. ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ  ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಶಾಲನಗರದ ನಿವೃತ್ತ ಚಿತ್ರಕಲಾ ಶಿಕ್ಷಕ ಯು.ಆರ್.ನಾಗೇಶ್ ಕುಮಾರ್ ತಿಳಿಸಿದ್ದಾರೆ. ಮೂರ್ನಾಡು ಪ್ರೌಢ ಶಾಲೆ ಮತ್ತು ರೋಟರಿ ಮಡಿಕೇರಿ ವುಡ್ಸ್ ನ ಸಂಯುಕ್ತಾಶ್ರಯದಲ್ಲಿ ನಡೆದ “ಕಲೆಯ ಮೂಲಕ ಕಲಿಕೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ರೋಟರಿ ಮಡಿಕೇರಿ ವುಡ್ಸ್ ಶಿಕ್ಷಣ ಸಂಸ್ಥೆಗಳೊಡನೆ ಕೈಜೋಡಿಸಿ ವಿದ್ಯಾರ್ಥಿಗಳ ವಿಕಸನಕ್ಕೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯು.ಆರ್.ನಾಗೇಶ್ ಕುಮಾರ್ ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ವುಡ್ಸ್ ಅಧ್ಯಕ್ಷ ರೊ.ಕಿರಣ್ ಕುಂದರ್ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ಉದ್ದೇಶದಿಂದ ರೋಟರಿ ವುಡ್ಸ್  ಇಂತಹ  ಹಲವಾರು ಕಾರ್ಯಕ್ರಮಗಳನ್ನು  ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು…

Read More

ಕುಶಾಲನಗರ, NEWS DESK ಮಾ.02: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ  ವತಿಯಿಂದ  ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ರವರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕರ್ನಾಟಕ ವಿಕಾಸ ರಂಗ  ವಾಸವಿ ಕಲಾ ಮಂಡಳಿ  ಸಹಕಾರದೊಂದಿಗೆ ಮಾಸದ ನೆನಪು, ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮವು ಕುಶಾಲನಗರ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.        ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿವೆಯ ಸಾಹಿತಿ ಭಾರದ್ವಾಜ್   ನೆರವೇರಿಸಿದರು. ನಂತರ ಮಾತನಾಡಿದ ಅವರು, ಕವಿತೆಯ ರಚನೆಯ ಲೋಕದಲ್ಲಿ ಪರಿಶ್ರಮ ಬಹುಮುಖ್ಯ. ಹಿರಿಯ ಕವಿಗಳ ಸಾಧನೆ ಮುಂದಿನ ಯುವಕರಿಗೆ ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.   ಬದುಕಿನ ಭಾವೈಕ್ಯತೆಯಲ್ಲಿ ಕವಿಗಳ ಪಾತ್ರ ಹಿರಿದು. ಪ್ರತಿಯೊಬ್ಬ ನಾಗರಿಕನು ಸಮಾಜದಲ್ಲಿ ಭಾವೈಕ್ಯತೆಯಿಂದ  ಬದುಕಲು ನಮ್ಮ ಹಿರಿಯ ಕವಿಗಳು ತಮ್ಮ  ಕೃತಿಗಳ ಮುಖಾಂತರ ಜಗತ್ತಿಗೆ ಉತ್ತಮ ಸಂದೇಶ ಕೊಟ್ಟು ಹೋಗಿದ್ದಾರೆ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಪ್ರೋ ಕೆ ಎಸ್ ನಿಸಾರ್ ಅಹಮದ್,ಜಿ ಎಸ್ ಸಿದ್ದಲಿಂಗಯ್ಯ,ಹಾಗೂ ಚಿ ಉದಯಶಂಕರ್ ರವರು ತಮ್ಮ ಉತ್ತಮ ಕವನಗಳ ಮುಖಾಂತರ…

Read More

ಕುಶಾಲನಗರ, NEWS DESK ಮಾ.02: ಕುಶಾಲನಗರದ ಎಸ್ ಎಲ್ ಎನ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸುವಣ೯ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಅರವಿಂದ್ ಕೆಲವು ದೊಡ್ಡ ಸಂಗತಿಗಳು ಕ್ಲೀಷೆಯಾಗುವ ಈ ಕಾಲಘಟ್ಟದಲ್ಲಿ ಸಣ್ಣ ಚಿಂತನೆಗಳೇ ದೊಡ್ಡ ಪರಿಣಾಮ ಬೀರಬಲ್ಲವಾಗಿದೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದ್ದೇ ಆದಲ್ಲಿ ಅದ್ಬುತ ಯಶಸ್ಸು ಖಂಡಿತಾ ಸಾಧ್ಯವಿದೆ, ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ಕೆಲಸವನ್ನು ಜಗತ್ತು ಗಮನಿಸುತ್ತಿರುತ್ತದೆ ಎಂದುಕೊಂಡು ಮಾಡಿದಾಗ ಕೆಲಸ ಸುಲಭಸಾಧ್ಯವಾಗುತ್ತದೆ  ಎಂದರು. ಸಾಮಾಜಿಕ ಸೇವೆ ಮೂಲಕ  ಕುಶಾಲನಗರ ರೋಟರಿ ಸಂಸ್ಥೆಯು 50 ವಷ೯ಗಳನ್ನು ಕಳೆದಿರುವುದು ಗಮನಾಹ೯ವಾಗಿದೆ ಎಂದು ಶ್ಲಾಘಿಸಿದ ರಮೇಶ್ ಅರವಿಂದ್ ಖ್ಯಾತ ಕಲಾವಿದರು ಮೊದಲಿನಂತೆ ವಷ೯ಗಟ್ಟಲೆ ವಾರಗಟ್ಟಲೆ ಸೂಪರ್ ಸ್ಟಾರ್ ಗಳಾಗಿ ಮುಂದುವರೆಯುವ ಕಾಲದ ಬದಲಾಗಿ  ಸೂಪರ್ ಸ್ಟಾರ್ ಗಿರಿ ಗಂಟೆಗೆ ಸೀಮಿತವಾಗುವ ಕಾಲದಲ್ಲಿ ನಾವಿದ್ದೇವೆ . ಆದರೆ ರೋಟರಿ ಸಂಸ್ಥೆಯು ಕೈಗೊಳ್ಲುವ ಸೇವಾ ಕಾಯ೯ ಸಮಾಜದಲ್ಲಿ 50 ವಷಾ೯ನುಗಟ್ಟಲೆ ಕಾಲ ರೋಟರಿಯನ್ನು ಸೂಪರ್ ಸ್ಟಾರ್ ಆಗಿಯೇ ಇರುವಂತೆ…

Read More

ಮಡಿಕೇರಿ, NEWS DESK ಮಾ.02 : ಕಡಗದಾಳು ಮಂಡಲ ವ್ಯಾಪ್ತಿಯ ಹಿಂದು ಸಂಗಮ ಕಾರ್ಯಕ್ರಮ ಭಾನುವಾರ ವೈಭವದಿಂದ ಜರುಗಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಹಿಂದುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ರಚಿಸಲಾಗಿದ್ದ ಶ್ರೀ ವಿನಾಯಕ ವಸತಿ ಕತ್ತಲೆಕಾಡು-ಜೇನುಕೊಲ್ಲಿ, ಶೌರ್ಯ ವಸತಿ ಕಡಗದಾಳು, ಶಿವಾಜಿ ವಸತಿ ನೀರುಕೊಲ್ಲಿ, ಪರಶುರಾಮ ವಸತಿ ಬೋಯಿಕೇರಿ ಸದಸ್ಯರುಗಳು ತಮ್ಮ ಗ್ರಾಮಗಳಿಂದ ಮೆರವಣಿಗೆ ಮೂಲಕ ಕಡಗದಾಳು ಶಾಲೆ ಆವರಣಕ್ಕೆ ಆಗಮಿಸಿದರು. ಬಳಿಕ ಸ್ಥಳೀಯ ಶಾಲೆ ಆವರಣದಿಂದ ಸಾಮೂಹಿಕ ಶೋಭಾಯಾತ್ರೆ ಆರಂಭವಾಗಿ ತುರ್ಕರಟ್ಟಿವರೆಗೆ ಸಾಗಿ ಮರಳಿ ಶಾಲೆ ಆವರಣದಲ್ಲಿ ಸಂಪನ್ನಗೊಂಡಿತು. ಭಾರತ ಮಾತೆಯ ಬೃಹತ್‌ ಚಿತ್ರಪಟ, ವಿವಿಧ ಕಲಾಕೃತಿಗಳು, ಭಜನೆ, ಕುಣಿತ ಭಜನೆ ತಂಡಗಳು, ಸಾಂಪ್ರದಾಯಿಕ ವಾಲಗ, ಚಂಡೆ ಮೇಳ, ಐತಿಹಾಸಿಕ ವ್ಯಕ್ತಿಗಳು, ದೇವರುಗಳ ವೇಷ ಧರಿಸಿದ ಮಕ್ಕಳು ಮೆರವಣಿಗೆಗೆ ವಿಶೇಷ ಮೆರುಗು ತುಂಬಿದರು. ಮೆರವಣಿಗೆಯಲ್ಲಿ ಹಿಂದುತ್ವದ ಪರವಾದ ಜಯಘೋಷ ಮೊಳಗಿತು. ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ…

Read More

ಮಡಿಕೇರಿ, NEWS DESK  ಮಾಚ್೯ 2 – ರೋಟರಿ ಜಿಲ್ಲೆ 3181 ನ ರೋಟರ್ಯಾಕ್ಟ್ ಕ್ಲಬ್ ಗಳ ಮುಂದಿನ ಸಾಲಿನ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಪ್ರಬಾಕರ್ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ರೋಟರ್ಯಾಕ್ಟ್ ನ 56 ಕ್ಲಬ್ ಗಳ ಪ್ರತಿನಿಧಿಯ ಚುನಾವಣೆಯಲ್ಲಿ ಶ್ರೀರಕ್ಷಾ ಅತ್ಯಧಿಕ ಮತ ಗಳಿಸಿ ಜಿಲ್ಲಾ ರೋಟರ್ಯಾಕ್ಟ್ನ 11 ನೇ ಪ್ರತಿನಿಧಿಯಾಗಿ ವಿಜಯಿಯಾದರು. ಮೂಲತ ನಾಪೋಕ್ಲು ಗ್ರಾಮದ  ಪತ್ರಕತ೯  ಪಿ.ವಿ. ಪ್ರಭಾಕರ್ – ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ, ಮೂನಾ೯ಡುವಿನಲ್ಲಿ ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆಯು 4 ವಷ೯ಗಳ ಹಿಂದೆ ಪ್ರಾರಂಭಿಸಿದ್ದ ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷೆಯಾಗಿ ಅನೇಕ ಸಾಮಾಜಿಕ ಸೇವಾ ಕಾಯ೯ಗಳ ಮೂಲಕ ಜಿಲ್ಲಾ ರೋಟರ್ಯಾಕ್ಟ್ ಪ್ರಶಸ್ತಿಯನ್ನೂ ಪಡೆದಿದ್ದರು.ಪ್ರಸ್ತುತ, ಮೈಸೂರಿನ ಕಾವೇರಿ ಸ್ಕೂಲ್ ನಲ್ಲಿ ಉಪನ್ಯಾಸಕಿಯಾಗಿರುವ ಶ್ರೀರಕ್ಷಾ ಪ್ರಭಾಕರ್, 2026-27 ನೇ ಸಾಲಿಗೆ 4 ಕಂದಾಯ ಜಿಲ್ಲೆಗಳಿಗೆ ಸೇರಿದ 56 ರೋಟರ್ಯಾಕ್ಟ್ ಕ್ಲಬ್ ಗಳ ಪ್ರತಿನಿಧಿಯಾಗಿ ಕಾಯ೯ನಿವ೯ಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ಜಿಲ್ಲಾ ರೋಟರ್ಯಾಕ್ಟ್ ಗೆ ಪ್ರತಿನಿಧಿಯೋವ೯ರ…

Read More

ಮಡಿಕೇರಿ, NEWS DESK ಮಾಚ್೯ 2 – ಕೊಡಗು ಮೂಲದ ಯುವ ಮೋಟರ್ ರ್ಯಾಲಿ ಪಟು ಅಭಿನ್ ರೈ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಹ್ಯಾಟ್ರಿಕ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಫೆ.27 ರಿಂದ ಮಾಚ್೯ 1 ರವರೆಗೆ ಆಯೋಜಿತ ನ್ಯಾಷನಲ್ ಮೋಟರ್ ರ್ಯಾಲಿ ಸ್ಪಧೆ೯ಯಲ್ಲಿ ಅಭಿನ್ ರೈ ಗಣನೀಯ ಸಾಧನೆ ತೋರಿದ್ದು, 371 ಕಿ.ಮೀ. ಅಂತರದ ರ್ಯಾಲಿಯಲ್ಲಿ ಭಾರತದಾದ್ಯಂತಲಿನ 32 ಸ್ಪಧಿ೯ಗಳು ಪಾಲ್ಗೊಂಡಿದ್ದರು. ಈ ಸ್ಪಧೆ೯ಯ ಸವ೯ ವಿಭಾಗಗಳಲ್ಲಿ ಅಭಿನ್ 10 ನೇ ಸ್ಥಾನ ಗಳಿಸಿದ್ದು, ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ವಿಭಾಗದಲ್ಲಿ ಎರಡನೇ ಮತ್ತುು ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಮೂರನೇ ಬಾರಿಗೆ ಅಭಿನ್ ರೈ, ಇಂಡಿಯನ್ ನ್ಯಾಷನಲ್ ರ್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಅಭಿನ್ ರೈ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಮೇಕೇರಿ ಮೂಲದ ರತ್ನಾಕರ್ ರೈ ಮತ್ತು ನಮಿತಾ ರೈ ಅವರ ಪುತ್ರರಾಗಿದ್ದಾರೆ. ಚಿಕ್ಕಮಗಳೂರಿನ…

Read More

ಮಡಿಕೇರಿ NEWS DESK ಮಾ.2 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2025 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದೆ. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರ ಪುತ್ತೂರಿನ ಅನಂತರಾಜ ಗೌಡ,  ಅರೆಬಾಷಿಕ ಸಂಘಟನಾ ಕ್ಷೇತ್ರ ಬೆಳ್ತಂಗಡಿಯ ಲೋಕೇಶ್ವರಿ ವಿನಯಚಂದ್ರ, ಅರೆಭಾ಼ಷೆ ಸಾಹಿತ್ಯ ಕ್ಷೇತ್ರ ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಇದೇ ಮಾರ್ಚ್ 14 ರಂದು ಮಂಗಳೂರಿನ ಊರ್ವ ಸ್ಟೋರ್ ಸಮೀಪದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವ ಪ್ರಶಸ್ತಿಯನ್ನುಪ್ರದಾನ ಮಾಡಲಾಗುವುದು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಂದು ನಡೆಯುವ ಸಮಾರಂಭದಲ್ಲಿ ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳ ವಿತರಣೆ ಹಾಗೂ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಮಡಿಕೇರಿ NEWS DESK ಮಾ.2 : ನಾಪೋಕ್ಲುವಿನಲ್ಲಿ ನಡೆದ ಅಪ್ಪಚ್ಚಿರ ಗೌತಮ್ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಡಿಕೇರಿ ಕೊಡವ ಸಮಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರಿಗೆ ದೂರು ನೀಡಿದ್ದಾರೆ. ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಿದ ಕೊಡವ ಸಮಾಜದ ನಿಯೋಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ದುಷ್ಕರ್ಮಿಗಳಿಂದ ಅಮಾಯಕ ಯುವಕ ಗೌತಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಸಮಾಜದ ಶಾಂತಿ ಕದಡುವ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ಯಾವುದೇ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಗೌತಮ್ ಮೇಲೆ ಹಲ್ಲೆ ಮಾಡಿದವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಕಠಿಣ ಕಾನೂನು ಕ್ರಮ ಕೈಗೊಂಡು ಶಿಕ್ಷಗೆ ಗುರಿ ಪಡಿಸಬೇಕು. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಮುಖರು ಒತ್ತಾಯಿಸಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಕನ್ನಂಡ…

Read More

ಮಡಿಕೇರಿ NEWS DESK ಮಾ.2 : ಕೊಡವ ಹಾಕಿ ಅಕಾಡೆಮಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಈ ಬಾರಿಯ ಹಾಕಿ ಉತ್ಸವ ಆಯೋಜಕ ಚೇನಂಡ ಕುಟುಂಬ ಸಂಯುಕ್ತವಾಗಿ ಸಭೆ ನಡೆಸಿ ಪ್ರಮುಖ ನಿರ್ಣಯಗಳನ್ನು ಕೈಗೊಂಡಿವೆ. ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಾಪೋಕ್ಲುವಿನಲ್ಲಿ ನಡೆಯುವ ಚೇನಂಡ ಕಪ್ ಕೊಡವ ಹಾಕಿ ಉತ್ಸವಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಘೋಷಿಸಲಾಯಿತು. ಹಾಕಿ ಕೂರ್ಗ್ ಸಂಸ್ಥೆ ತಾಂತ್ರಿಕ ಸಹಕಾರ ನೀಡಲು ಒಪ್ಪಿಗೆ ಸೂಚಿಸಿತು. ಹಾಕಿ ಅಂಪೈರ್ ಗಳಿಗೆ ನೀಡಲಾಗುವ ವೃತ್ತಿಪರ ಶುಲ್ಕಗಳು ಮತ್ತು ತಾಂತ್ರಿಕತೆಯ ಕುರಿತು ಚರ್ಚಿಸಲಾಯಿತು. ತಾಂತ್ರಿಕ ಸಿಬ್ಬಂದಿಯ ಪ್ರಯಾಣ ಭತ್ಯೆಯ ಬಗ್ಗೆ ನಿರ್ಧರಿಸಲಾಯಿತು. ಚೇನಂಡ ಕುಟುಂಬಸ್ಥರು ಹಾಕಿ ಉತ್ಸವದ ಸಿದ್ಧತೆಯನ್ನು ವಿವರಿಸಿದರು. ಕಳೆದ ಬಾರಿ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಪರಿಚಯಿಸಿದಂತೆ ಮಹಿಳಾ ಹಾಕಿ 5ಎ ತಂಡವನ್ನು ಮುಂದುವರಿಸಲಾಗುವುದು ಎಂದು…

Read More