ಸೋಮವಾರಪೇಟೆ ಜ.3 : ಕರ್ನಾಟಕ ಸ್ಟೇಟ್ ಡ್ರೈವರ್ಸ್ ಆರ್ಗನೈಸೇಷನ್(ಕೆಟಿಡಿಒ) ಸಂಘದ ವತಿಯಿಂದ ಜ.26ರಂದು ಅದ್ಧೂರಿ ಗಣರಾಜ್ಯೋತ್ಸವ ಮತ್ತು ರಾಜ್ಯ ಮಟ್ಟದ ಮುಕ್ತ ನೃತ್ಯ ಸ್ಪರ್ಧೆ ನಡೆಸಲಾಗುವುದು ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿ. ರವಿ ತಿಳಿಸಿದರು.
ಅಂದು ಬೆಳಿಗ್ಗೆ ಜಿಲ್ಲಾ ಸಮಿತಿಯ ಸಮಾವೇಶ ನಡೆಸಲಾಗುವುದು. ನಂತರ ಖಾಸಗಿ ಬಸ್ ನಿಲ್ದಾಣದಲ್ಲಿನ ಬೃಹತ್ ವೇದಿಕೆಯಲ್ಲಿ ಮಧ್ಯಾಹ್ನ 2ಕ್ಕೆ ಪುರುಷೋತ್ತಮ್ ಮತ್ತು ತಂಡದದವರಿAದ ದೇಶ ಭಕ್ತಿ ಗೀತೆ ಕಾರ್ಯಕ್ರಮ ನಡೆಸಲಾಗುವುದು. ನಂತರ 12 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಹಾಗೂ 12 ವರ್ಷ ವಯೋಮಾನದ ನಂತರದವರಿಗೆ ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯುವುದು ಎಂದರು. ನೃತ್ಯ ಸ್ಪರ್ಧೆಯ ವಿಜೇತರಿಗೆ ಮೊದಲ ಬಹುಮಾನ ರೂ. 25ಸಾವಿರ, ದ್ವಿತೀಯ ಬಹುಮಾನ ರೂ. 15 ಹಾಗೂ ತೃತೀಯ ಬಹುಮಾನ ರೂ. 10ನ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ನಡೆಸಲಾಗುವುದು. ರಾಮನಗರ ಜಿಲ್ಲೆಯ ಗೆಜ್ಜೆಗಾಲುಕೊಪ್ಪದ ಮುರಾರಿ ಸ್ವಾಮಿಗಳ ಪುಣ್ಯ ಕ್ಷೇತ್ರದ ಪೀಠಾಧಿಪತಿ ಡಾ. ಕುಮಾರಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ, ನಗರೂರು ಕಾಫಿ ಎಸ್ಟೇಟ್ ಮಾಲಿಕ ಡಾ|| ಮಂಥರ್ ಗೌಡ, ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕಾಳಪ್ಪ, ಸುಲೈಮಾನ್, ಪವನ್ ದೇವಯ್ಯ, ಕೆಟಿಡಿಒ ಸಮಿತಿಯ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ. ರೋಡ್, ಯುವ ಘಟಕದ ಅಧ್ಯಕ್ಷ ಅವಿನಾಶ್ ಕೇಸರಿ, ಆರ್‌ಟಿಓ ಎಂ. ಶಿವಕುಮಾರ್ ಮತ್ತಿತರರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವುದು. ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ನಂತರ ಸಂಘದ ಸಾಧನೆ ಕುರಿತು ಸಾಕ್ಷö್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ 9449273010 ಅಥವಾ 9945285364 ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಸ್.ಆರ್. ಪ್ರಸನ್ನ, ಸಂಘಟನಾ ಕಾರ್ಯದರ್ಶಿ ಪಿ.ವಿ. ಕೃಷ್ಣ(ಮಣಿ)ಖಜಾಂಚಿ ಕೆ.ಎನ್. ದೀಪಕ್ ಇದ್ದರು.












