ಸುಂಟಿಕೊಪ್ಪ,ಜ.6: ಮಡಿಕೇರಿ ನಗರದಲ್ಲಿ ಭಿಕ್ಷಾಟನೆ ಮಾಡುತ್ತಾ ಅಲೆಯುತ್ತಿದ್ದ ನಾಲ್ವರು ನಿರಾಶ್ರಿತರನ್ನು 7ನೇ ಹೊಸಕೋಟೆ ಗ್ರಾ.ಪಂ ವ್ಯಾಪ್ತಿಯ ತೊಂಡೂರು ಗ್ರಾಮದ ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಆಶ್ರಮದ ಅಧ್ಯಕ್ಷ ರಮೇಶ್ ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿನ ಈಸ್ಟ್ ಪಾಯಿಂಟ್ ವಿದ್ಯಾಸಂಸ್ಥೆಯ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.
ಮಡಿಕೇರಿ ನಗರದಲ್ಲಿದ್ದ ಗೋಪಿ, ಕಿರಣ್, ದಲಾಯಿ ಹಾಗೂ ಸರಸಮ್ಮ ರಕ್ಷಿಸಲ್ಪಟ್ಟವರು. ಇವರು ಗುಣಮುಖರಾಗಿ ಚೇತರಿಸಿ ಕೊಂಡ ನಂತರ ತೊಂಡೂರು ಗ್ರಾಮದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಆಶ್ರಮದಲ್ಲಿ ಆಶ್ರಯ ನೀಡುವುದಾಗಿ ರಮೇಶ್ ತಿಳಿಸಿದರು.
ಈ ಸಂದರ್ಭ ಆಶ್ರಮದ ಜಯಂತಿ, ಶಿವು ಹಾಗೂ ಮಾಹಿತಿ ನೀಡಿದ ಪೊಲೀಸ್ ಇಲಾಖೆಯವರು ಹಾಜರಿದ್ದರು. ಸಾರ್ವಜನಿಕರು ಇವರ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.












