ಮಡಿಕೇರಿ ಜ.10 : ಪ್ರಸಕ್ತ (2022-23) ಸಾಲಿನ, 2 ವರ್ಷದ ಬಿ.ಇಡಿ ಕೋರ್ಸ್‍ಗೆ ಇಲಾಖಾ ವೆಬ್‍ಸೈಟ್ www.Schooleducation.nic.in ನಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, 2023 ರ ಜನವರಿ, 07 ರಿಂದ ಫೆಬ್ರವರಿ, 23 ರವರೆಗೆ ಕೂಡಿಗೆ ಡಯಟ್ ಇಲ್ಲಿ ಮೂಲ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ತಮಗೆ ಸೂಚಿಸಿದ ದಿನಾಂಕದಂದು ಹಾಜರಾಗಿ ದಾಖಲಾತಿ ಪರಿಶೀಲಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕೂಡಿಗೆಯ ಡಯಟ್ ಹಿರಿಯ ಉಪನ್ಯಾಸಕರಾದ ಸೋಮಲಿಂಗೇಗೌಡ(9902728234), ಉಪನ್ಯಾಸಕರಾದ ಹೇಮಂತ್ ಕುಮಾರ್ (9036365942), ವಿಜಯ್(8105360463) ರೇಣುಕಾ ಸಿ.ಎಲ್ (9740502601), ಗಾಯತ್ರಿ ಬಾಯಿ (9538649531) ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.













