ವಿರಾಜಪೇಟೆ ಜ.11 : ಬೈತೂರಪ್ಪ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ಉತ್ಸವ ಸಂದರ್ಭದಲ್ಲಿ ಕೇರಳದಿಂದ ಕಾಲ್ನಡಿಗೆಯಲ್ಲಿ ಆಗಮಿಸುವ “ಕೋರತಚ್ಛ” ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯಕ್ಕೆ ಆಗಮಿಸಿ ಹಬ್ಬದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಊರಿನವರು ಕೋರತಚ್ಛ ತಂಡವನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.
ಕೇರಳದ ಉಳಿಕಲ್ಲ್ ತಾಲ್ಲೂಕಿನ ಬಯತೂರ್ ಎಂಬ ಜಾಗದಲ್ಲಿ ವರ್ಷಂಪ್ರತಿ ಹಬ್ಬ ನಡೆಯಲಿದ್ದು, ಕೊಡಗಿನಲ್ಲಿ ಮೈಮೇಲೆ ಬರುವ ಬಹುತೇಕ ದೇವಾನುದೇವತೆಗಳು ಈ ಹಬ್ಬದಲ್ಲಿ ಭಾಗಿಯಾಗಿ ದರ್ಶನ ಪಡೆಯುತ್ತಾರೆ. ಇದರ ದೊಡ್ಡ ಹಬ್ಬ ಜ.24 ಹಾಗೂ 25ರಂದು ನಡೆಯುತ್ತದೆ. 25ರಂದು ಕೊಡಗಿನ ದೇವರುಗಳ ದರ್ಶನ ಕಾಣಸಿಗುತ್ತದೆ.













