ಮಡಿಕೇರಿ ಫೆ.1 : ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಮೈಸೂರು-ಕೊಡಗು ಲೊಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಪ್ರಥಮ ಸ್ಥಾನ ಗಳಿಸುವ ಮೂಲಕ ಸರ್ಕಾರದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರದೇಶಾಭಿವೃದ್ಧಿ ನಿಧಿಯಡಿ 12.14 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ ರೂ.11.87 ಕೋಟಿ ವೆಚ್ಚದ ಕಾಮಗಾರಿಗಳನ್ನು ಶಿಫಾರಸ್ಸು ಮಾಡಿದ್ದರು. ರೂ.11.74 ಕೋಟಿ ವೆಚ್ಚವಾಗಿದ್ದು, ರೂ.40 ಲಕ್ಷ ಮಾತ್ರ ಉಳಿಕೆಯಾಗಿದೆ. ಪ್ರತಾಪ್ ಸಿಂಹ ಅವರ ಅನುದಾನ ಬಳಕೆ ಪ್ರಮಾಣ ಶೇ.121.60 ರಷ್ಟಿದೆ.
ಇವರು ಕೋವಿಡ್ ಪೂರ್ವದಲ್ಲೂ ಅನುದಾನ ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರು. ಸಂಸದರ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ ಅನುದಾನ ಬಿಡುಗಡೆಯಾಗುತ್ತದೆ. ಆಯಾ ಕ್ಷೇತ್ರದ ಸಂಸದರು ವಿವಿಧ ಕಾಮಗಾರಿಗಳಿಗೆ ಅನುದಾನ ಶಿಫಾರಸು ಮಾಡಬಹುದು.










