ಮಡಿಕೇರಿ ಮಾ.9 : ಮೈತಾಡಿ ಶ್ರೀ ಬೊಳ್ಳಿಬಿಲ್ಲಯ್ಯಪ್ಪ ದೇವರ ಉತ್ಸವವು ಮಾ.14, 15 ಮತ್ತು 16 ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು.
ಮಾ.14 ರಂದು ಪಟ್ಟಣಿ, ಅಂದಿ ಬೊಳಕು ತೂಚಂಬಲಿ, ಕ್ಷೇತ್ರಫಲ ಪೂಜೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಹಾಪೂಜೆ ಜರುಗಲಿದೆ.
ಮಾ.15 ರಂದು ಪ್ರಾತಕಾಲ 5 ಗಂಟೆಗೆ ಇರುಬೆಳಕು, ಪೂರ್ವಹ್ನ 9.30 ಗಂಟೆಗೆ ಭಕ್ತಾಧಿಗಳಿಂದ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅಪರಾಹ್ನ 2.30 ಗಂಟೆಗೆ ಎತ್ತು ಪೊರಾಟ, ಬೊಳಕಾಟು, ದೇವರ ಮೆರವಣಿಗೆ, ಅಪರಾಹ್ನ 3.30 ಗಂಟೆಗೆ ದೇವರ ಬನಕ್ಕೆ ಹೋಗುವುದು, ದೇವರ ನೃತ್ಯ, ಸುಬ್ರಮಣ್ಯ ದೇವರ ಗುಡಿಯಲ್ಲಿ ಪೂಜೆ, ನಂತರ ವಸಂತ ಪೂಜೆ ಜರುಗಲಿದೆ.
ಸಂಜೆ 7 ಗಂಟೆಗೆ ಭಕ್ತಾಧಿಗಳಿಂದ ಪೂಜೆ ಜರುಗಲಿದ್ದು, ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯಲಿದೆ.
ಮಾ.16 ರಿಂದ ಪ್ರಾತಕಾಲ 5 ಗಂಟೆಗೆ ಇರುಬೆಳಕು, ಪೂರ್ವಹ್ನ 9.30 ಗಂಟೆಗೆ ಭಕ್ತಾಧಿಗಳಿಂದ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅಪರಾಹ್ನ 3 ಗಂಟೆಗೆ ಬೊಳಕಾಟು, ಅಪರಾಹ್ನ 4 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, 4.30 ಗಂಟೆಗೆ ಶ್ರೀ ಕಾವೇರಿ ನದಿಯಲ್ಲಿ ದೇವರ ಅಮೃತ ಸ್ನಾನ, ರಾತ್ರಿ 10 ಗಂಟೆಗೆ ದೇವರ ನೃತ್ಯ, ಮಹಾಪೂಜೆ ಜರುಗಲಿದೆ.
ಮಾ.17 ರಂದು ಬೆಳಗ್ಗೆ 10 ಗಂಟೆಗೆ ಕಲಶ, ಅದೃಷ್ಟ ಪರೀಕ್ಷೆ, ಮಹಾ ಸಭೆ ಹಾಗೂ ಅನ್ನದಾನ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 9880044290, 9481883762 ಸಂಪರ್ಕಿಸಬಹುದಾಗಿದೆ.









