ಮಡಿಕೇರಿ ಏ.7 : ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಬೃಹತ್ ಜಾಗತಿಕ ಧಾರ್ಮಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞದ ಕೊಡಗು ಜಿಲ್ಲಾ ಅಭಿಯಾನಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ಕುಶಾಲನಗರದ ಶ್ರೀ ವಾಸವಿ ಕನ್ಯಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಠದ ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಭಿಯಾನದ ಜಿಲ್ಲಾ ಗೌರವಾಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಸ್ ಕೆ ಸತೀಶ್ ಅವರನ್ನು ಜಿಲ್ಲಾ ಗೌರವ ಸಲಹೆಗಾರರಾಗಿ ಹಿರಿಯ ಪತ್ರಕರ್ತರಾದ ಜಿ. ಚಿದ್ವಿವಿಲಾಸ್ ಆಯ್ಕೆ ಮಾಡಲಾಯಿತು.
ಕೊಡಗು ಜಿಲ್ಲಾ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್ ಕೆ ಸತೀಶ್ ಅವರು ಜಿಲ್ಲಾ ತಾಲೂಕು ಮತ್ತು ಗ್ರಾಮವಾರು ಸಂಯೋಜಕರನ್ನು ಘೋಷಿಸಿದರು.
ಜಿಲ್ಲೆಯ ತಾಲೂಕುಗಳಿಗೆ ಹಾಗೂ ಗ್ರಾಮವಾರು ಸಂಯೋಜಕರುಗಳನ್ನು ನೇಮಕ ಮಾಡಲಾಯಿತು.
ಕೋಟಿಗೀತಾ ಲೇಖನ ಯಜ್ಞದ ಕೊಡಗು ಜಿಲ್ಲಾ ಮಹಿಳಾ ಘಟಕದ ಸಂಯೋಜಿಕಿಯಾಗಿ ಅಪೇಕ್ಷಿಸುವವರು ಕುಶಾಲನಗರದ ರಮಾ ವಿಜಯೇಂದ್ರ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಗೌರವಾಧ್ಯಕ್ಷರಾದ ಸತೀಶ್ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಉಡುಪಿ ಮಠದ ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯ, ಶ್ರೀ ಭಗವದ್ಗೀತೆಯನ್ನು ಸಂಪೂರ್ಣವಾಗಿ ಬರೆದು 2024 ಜನವರಿ 18 ರಿಂದ 2026 ಜನವರಿ 17ರ ವರೆಗಿನ ಶ್ರೀ ಪುತ್ತಿಗೆ ಶ್ರೀಗಳ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ, ಬರೆದ ಪುಸ್ತಕವನ್ನು ಯಾವಾಗ ಬೇಕಾದರೂ ಶ್ರೀಗಳ ಮೂಲಕ ಉಡುಪಿ ಶ್ರೀ ಕೃಷ್ಣನಿಗೆ ಸಮರ್ಪಿಸಿ ಪ್ರಸಾದ ರೂಪವಾಗಿ ಸ್ವೀಕರಿಸಬಹುದಾಗಿದೆ ಎಂದರು.
ಕೋಟಿಗೀತಾ ಯಜ್ಞದ ಸಂಪೂರ್ಣ ಮಾಹಿತಿ ನೀಡಿದ ವಿದ್ವಾನ್ ರಮಣಾಚಾರ್, ಆತ್ಮೋದ್ಧಾರ ಮತ್ತು ಲೋಕಕಲ್ಯಾಣಾರ್ಥದ ಜೀವಮಾನದಲ್ಲಿ ಒಂದೇ ಒಂದು ಬಾರಿ ಲಭಿಸಬಹುದಾದ ಅತ್ಯಪೂರ್ವವಾದ ಈ ಯಜ್ಞದಲ್ಲಿ ಜಾತಿ, ಮತ, ಧರ್ಮ, ಲಿಂಗ, ವಯೋ ಬೇಧಗಳಿಲ್ಲದೆ ಸರ್ವರೂ ದೀಕ್ಷ ಬದ್ಧರಾಗಬಹುದಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷರಾದ ಎಸ್ ಕೆ ಸತೀಶ್, ಆಸಕ್ತರು ಗೀತೆ ಬರೆಯುವ ಪುಸ್ತಕ ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಯಾವುದೇ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಅವರು ಕೋರಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ಸಂಯೋಜಕರಾಗಿ ಸೇವೆ ಸಲ್ಲಿಸುವುದಕ್ಕೂ ಮುಕ್ತ ಅವಕಾಶವಿದೆ ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗೆ ವಿದ್ವಾನ್ ರಮಣ ಆಚಾರ್ (8792258946),ಎಸ್ ಕೆ ಸತೀಶ್ (9845699508), ರಮಾ ವಿಜಯೇಂದ್ರ (9886448226), ಬಿ ಆರ್ ನಾಗೇಂದ್ರ ಪ್ರಸಾದ್ (9448074528), ಮಧುಸೂದನ್ (8495006857) ಅವರುಗಳನ್ನು ಸಂಪರ್ಕಿಸುವoತೆ ಕೋರಲಾಗಿದೆ.
ಕುಶಾಲನಗರ ತಾಲೂಕು ಸಂಚಾಲಕರಾಗಿ ಬಿ ಆರ್ ನಾಗೇಂದ್ರ ಪ್ರಸಾದ್, ಸಮರ್ ಪೇಟೆ ತಾಲೂಕು ಸಂಚಾಲಕರಾಗಿ ದಾಮೋದರ್, ವಿರಾಜಪೇಟೆ ತಾಲೂಕು ಸಂಚಾಲಕರಾಗಿ ಮಂಜುನಾಥ್ ಮಲ್ಯ, ಪೊನ್ನಂಪೆಟ್ಟಿ ತಾಲೂಕು ಸಂಚಾಲಕರಾಗಿ ಬೋಪಣ್ಣ, ಮಡಿಕೇರಿ ತಾಲೂಕು ಸಂಚಾಲಕರಾಗಿ ರಂಜಿತ್ ಅವರುಗಳನ್ನು ನೇಮಿಸಿ, ಪ್ರತಿ ತಾಲೂಕುಗಳಿಗೆ ಸಹ ಸಂಚಾಲಕರುಗಳನ್ನು ನಿಯೋಜಿಸಲಾಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ ಎಲ್ ಉದಯಕುಮಾರ್ ಸ್ವಾಗತಿಸಿದರು.
ರಶ್ಮಿ ಸಂಜಯ್ ಮತ್ತು ಲತಾ ರಮೇಶ್ ಪ್ರಾರ್ಥಿಸಿದರು, ಮಹೇಶ್ ಅಮೀನ್ ವೈಯಕ್ತಿಕ ಗೀತೆ ಹಾಡಿದರು. ಅಮೃತ ರಾಜ್ ವಂದಿಸಿದರು.
Breaking News
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*
- *ವಿರಾಜಪೇಟೆ : ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ ಉಪನ್ಯಾಸ ಕಾರ್ಯಕ್ರಮ*
- *ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ : ಶಿಕ್ಷಣ ನೀಡಿದ ಸರ್ಕಾರಿ ಶಾಲೆಗೆ ಆದಾಯದ ಒಂದು ಭಾಗ ಮೀಸಲಿಡಿ : ಹೆಚ್.ಎಲ್.ದಿವಾಕರ್ ಕರೆ*
- *ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೂತನ ಪದಾಧಿಕಾರಿಗಳ ನೇಮಕ : ಜಿಲ್ಲಾಧ್ಯಕ್ಷರಾಗಿ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆ*
- *ವಾರ ಭವಿಷ್ಯ : ಯಾರಿಗೆ ಈ ವಾರ ಶುಭ… : ನ.18 ರಿಂದ 24ರ ವರೆಗೆ*
- *ಬಿ.ಡಿ.ಮಂಜುನಾಥ್ “ಕೊಡಗು ಸಹಕಾರ ರತ್ನ” ಪ್ರಶಸ್ತಿಗೆ ಭಾಜನ : ನ.20 ರಂದು ಸಹಕಾರ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ*
- *ಭಾಗಮಂಡಲದಲ್ಲಿ ಕಾವೇರಿ ಆರತಿ*
- *ಬೊಳ್ಳಮ್ಮಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ*