ಮಡಿಕೇರಿ – ವಿಶ್ವಚಿತ್ರಕಲಾ ದಿನದ ಅಂಗವಾಗಿ ಮತದಾನ ಮಾಡಿ ಸಂದೇಶದ ಚಿತ್ರಕಲಾ ಸ್ಪಧೆ೯.
ಮಡಿಕೇರಿ ಏಪ್ರಿಲ್ 7 – ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಏಪ್ರಿಲ್ 15 ರಂದು ವಿಶ್ವಚಿತ್ರ ಕಲಾ ದಿನಾಚರಣೆ ಸಂದಭ೯ ಚಿತ್ರಕಲಾ ಸ್ಪಧೆ೯ಯನ್ನು ಆಯೋಜಿಸಿದೆ
ಮಡಿಕೇರಿ ರಾಜಾಸೀಟ್ ನಲ್ಲಿ ಏಪ್ರಿಲ್ 15 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಚಿತ್ರಕಲಾ ಸ್ಪಧೆ೯ ವಿದ್ಯಾಥಿ೯ಗಳು ಮತ್ತು ಸಾವ೯ಜನಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ.ವಿಶ್ವಚಿತ್ರಕಲಾ ದಿನದ ಅಂಗವಾಗಿ ಜಿಲ್ಲೆಯ ಚಿತ್ರಕಲಾವಿದರು ಕೂಡ ವೈವಿಧ್ಯಮಯ ಚಿತ್ರಕಲೆ ರಚಿಸಲಿದ್ದಾರೆ.
ವಿದ್ಯಾಥಿ೯ಗಳು ಮತ್ತು ಸಾವ೯ಜನಿಕ ವಿಭಾಗದಲ್ಲಿ ನಡೆಯುವ ಚಿತ್ರಕಲಾ ಸ್ಪಧೆ೯ಯಲ್ಲಿ ಮತದಾನದ ಮಹತ್ವದ ವಿಷಯದಲ್ಲಿ ಚಿತ್ರಕಲೆ ರಚಿಸಬಹುದಾಗಿದೆ. ಪ್ರೌಡಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ವಿದ್ಯಾಥಿ೯ಗಳಿಗೆ ಚಿತ್ರಕಲಾ ಸ್ಪಧೆ೯ ಆಯೋಜಿತವಾಗಿದ್ದರೆ ಸಾವ೯ಜನಿಕರಿಗೆ ಮುಕ್ತವಿಭಾಗದಲ್ಲಿ ಸ್ಪಧೆ೯ ಆಯೋಜಿಸಲ್ಪಟ್ಟಿದೆ. ಚಿತ್ರಕಲೆಗೆ ಅಗತ್ಯ ಪರಿಕರಗಳನ್ನು ಸ್ಪಧಿ೯ಗಳೇ ತರಬೇಕು.
ಇದೇ ಸಂದಭ೯ ನಾನು ಮತದಾನ ಮಾಡುತ್ತೇನೆ ಎಂಬ ಬೖಹತ್ ಕ್ಯಾನ್ವಸ್ ನ್ನು ರಾಜಾಸೀಟ್ ನಲ್ಲಿ ಕಲಾವಿದರು ರಚಿಸಲಿದ್ದು, ಸಾವ೯ಜವಿಕರು ಕೂಡ ಕ್ಯಾನ್ವಸ್ ನಲ್ಲಿ ತಮ್ಮ ಸಂದೇಶ ಸಾರಲು ಅವಕಾಶ ನೀಡಲಾಗಿದೆ.
ಚಿತ್ರಕಲಾ ಸ್ಪಧೆ೯ಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದ್ಯಾಥಿ೯ಗಳು, ಸಾವ೯ಜನಿಕರು ಸ್ಪಧೆ೯ ಜರುಗುವ ರಾಜಾಸೀಟ್ ಗೆ ಏಪ್ರಿಲ್ 15 ರಂದು ಬೆಳಗ್ಗೆ 10 ಗಂಟೆಯೊಳಗೆ ಬಂದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪಕ೯ – 98440 60174 ಅನಿಲ್ ಎಚ್.ಟಿ. ಅಧ್ಯಕ್ಷರು, ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ