ಮಡಿಕೇರಿ ಏ.8 : ಕಾಡಾನೆಯೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ದಾಳಿ ಮಾಡಿರುವ ಘಟನೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಮೆಟ್ಟಳ್ಳದಲ್ಲಿ ನಡೆದಿದೆ.
ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರಿನ ಮೇಲೆ ದಾಳಿ ಮಾಡಿದ ಕಾಡಾನೆ ಸಾನಿಫ್ ಎಂಬುವವರ ಸ್ವಿಫ್ಟ್ ಕಾರನ್ನು ಪಕ್ಕದಲ್ಲೇ ಇದ್ದ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ನಂತರ ಅಲ್ಲಿಂದ ಕಾಡಾನೆ ಕಾಲ್ಕಿತ್ತಿದ್ದು, ಕಾರಿಗೆ ಹಾನಿಯಾಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.










