ಚೆಂಬೆ ಬೆಳ್ಳೂರ್ ಏ.24 : ವಿರಾಜಪೇಟೆಯ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್‍ನಮ್ಮೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ತಾಲಿಪಾಟ್, ಹುಲಿವೇಷಧಾರಿಗಳು, ಬಂಡ್‍ಕಳಿ, ಪಿಲ್ಲ್ ಭೂತ, ಹೆಣ್ಣಿನ ವೇಷದಾರಿಗಳ ಕುಣಿತ ಗಮನ ಸೆಳೆಯಿತು.
ಪಟ್ಟಣಿ ಹಬ್ಬದೊಂದಿಗೆ ಆರಂಭವಾದ ಬೋಡ್‍ನಮ್ಮೆಯು ಪಣಿಕರಡೋಲಿನಕೊಟ್ಟು ಹಾಗೂ ಕೊಂಬಿನ ಊದಿದ ನಂತರ ಊರಿನವರು ಸಂಪ್ರದಾಯದಂತೆ ಪಟ್ಟಣಿ ಮುರಿಯಲಾಯಿತು.
ಹಬ್ಬದ ಅಂಗವಾಗಿ ಭದ್ರಕಾಳಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಚೀರುಳಿ ಅಂಬಲದಲ್ಲಿ ಭದ್ರಕಾಳಿಯ ಒಂದುಮುಡಿ ತೆರೆಕಟ್ಟಿ ಪೂಜಿಸಿ ದೇವರನೆಲೆಗೆ ಬಂದು ಕುಣಿಯಲಾಯಿತು.
ನಂತರ ಊರಿನ ಮೂರು ಕೇರಿಯಿಂದ ಬೆತ್ತದಿಂದ ಮಾಡಿ ಶೃಗಂರಿಸಿದ ಕೃತಕ ಮೂರು ಕುದುರೆಯೊಂದಿಗೆ ಊರಿನವರು ಅಂಬಲಕ್ಕೆ ಬಂದು ದೇವಾಲಯದಲ್ಲಿ ಸೇರುವ ಮೂಲಕ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ಬೊಳಕಾಟ್, ತೆಂಗಿನಕಾಯಿ ಎಳೆಯುವ ಸ್ಪರ್ಧೆ ನಂತರ ದೇವರಿಗೆ ವಿಶೇಷ ಪೂಜೆಸಲ್ಲಿಸಲಾಯಿತು. ರಾತ್ರಿ ಊರಿನವರು, ಹರಕ್ಕೆ ಹೊತ್ತವರು ಮೈ ಯಲ್ಲೆಲ್ಲ ಬಣ್ಣಬಳಿದು ವಿಧದ ವೇಶಕಟ್ಟಿ ಮನೆಮನೆಗೆ ತೆರಳಿದರು.
ಸಂಜೆ ವೇಷಧಾರಿಗಳು ಅಂಬಲದಲ್ಲಿ ಸೇರಿ ಊರಿನವರೊಂದಿಗೆ ಡೋಲನ್ನು ಕೊಟ್ಟುತ್ತಾ ದೋಳ್‍ಪಾಟ್ ನೊಂದಿಗೆ ಭದ್ರಕಾಳಿ, ಚಾಮುಂಡಿ ಹಾಗೂ ಮಕ್ಕಾಟ್ ಅಯ್ಯಪ್ಪ ಮೈಗೆ ಬಂದವರು ದೇವರ ಕಡತಲೆಯನ್ನು ಜಪಿಸುತ್ತ ಭದ್ರಕಾಳಿ ದೇವಾಲಯದೆಡೆಗೆ ನಡೆದರೆ, ಹಲವು ವೇಷಧಾರಿಗಳ ತಂಡ ಡೋಲಿನ ಕೊಟ್ಟಿಗೆ ಹೆಜ್ಜೆ ಹಾಕಿ ಕುಣಿಯತ್ತಾ ದೇವಾಲಯದೊಳಕ್ಕೆ ಪ್ರವೇಶಿಸಿ ದೇವರ ಗರ್ಭಗುಡಿಗೆ ಮೂರು ಪ್ರದಕ್ಷಿಣಿ ಹಾಕಿದರು.
:: ಏ.25ರಂದು :: ಕಾರಮಡ್‍ಕೋ ಎಂಬ ಸಂಪ್ರದಾಯದಂತೆ ದೇವರ ಭಂಡಾರದ ಲೆಕ್ಕಾಚಾರ, ಸಭೆಯೊಂದಿಗೆ ಹಬ್ಬದ ಆಚರಣೆಗೆ ಕೊನೆಯಾಗುವುದು.
ವರದಿ -ಪುತ್ತರಿರಕರುಣ್ ಕಾಳಯ್ಯ,