ಕೆಲವೊಂದು ಕಡೆಗಳಲ್ಲಿ ಈಗಲೂ ಮಕ್ಕಳನ್ನು ಸ್ನಾನ ಮಾಡಿಸಲು ಕಡಲೆ ಹಿಟ್ಟನ್ನು ಬಳಸುವುದು ಇದೆ. ಕಡಲೆ ಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು ಎನ್ನುವ ಕಾರಣಕ್ಕಾಗಿ ಇದನ್ನು ಬಳಸಲಾಗುತ್ತದೆ. ನಾವು ಬಳಸುವಂತಹ ಸೋಪಿಗಿಂತ ಕಡಲೆ ಹಿಟ್ಟು ಚರ್ಮಕ್ಕೆ ಒಳ್ಳೆಯದು. ಕಡಲೆಹಿಟ್ಟಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಇರುವುದಿಲ್ಲ. ನಮ್ಮ ಹಿರಿಯರು ಹಿಂದಿನಿಂದಲೂ ಕಡಲೆಹಿಟ್ಟನ್ನು ಚರ್ಮದ ಆರೈಕೆಗೆ ಬಳಸಿಕೊಂಡು ಬಂದಿದ್ದಾರೆ. ಕಡಲೆಹಿಟ್ಟನ್ನು ಬಳಸಿದರೆ ಚರ್ಮದ ಕಲೆಗಳನ್ನು ನಿವಾರಿಸಬಹುದು. ಕಡಲೆಹಿಟ್ಟಿನಿಂದ ಒಳ್ಳೆಯ ತ್ವಚೆಯನ್ನು ಕೂಡ ಪಡೆಯಬಹುದಾಗಿದೆ. ನಿಯಮಿತವಾಗಿ ದೇಹಕ್ಕೆ ಕಡಲೆಹಿಟ್ಟನ್ನು ಬಳಸುವುದರಿಂದ ಕಾಂತಿಯುತ ತ್ವಚೆಯು ನಮ್ಮದಾಗುತ್ತದೆ. ಕಡಲೆಹಿಟ್ಟನ್ನು ಬಳಸಿ ನಿವಾರಿಸಬಹುದಾದ ಕೆಲವೊಂದು ಸಮಸ್ಯೆಗಳು.
ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದ ಬಳಿಕ ಮುಖದ ಮೇಲೆ ಕಪ್ಪು ಕಲೆಗಳು ಬಿದ್ದಿದೆಯಾ? ಹಾಗಾದರೆ ಕಡಲೆಹಿಟ್ಟಿನಿಂದ ಇದನ್ನು ನಿವಾರಿಸಬಹುದು. ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಅರಶಿನ, ಕೆಲವು ಹನಿ ನಿಂಬೆರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ ಹೀಗೆ ಮಾಡಿ. ಕಲೆಗಳು ನಿಧಾನವಾಗಿ ಮಾಯವಾಗುವುದನ್ನು ಕಾಣಬಹುದು.
ಎಣ್ಣೆಯಂಶವಿರುವ ತ್ವಚೆಯ ಆರೈಕೆಯಲ್ಲಿ ಕಡಲೆಹಿಟ್ಟು ಪ್ರಮುಖಪಾತ್ರ ನಿರ್ವಹಿಸುತ್ತದೆ. ಸ್ವಲ್ಪ ಕಡಲೆಹಿಟ್ಟನ್ನು ರೋಸ್ ವಾಟರ್ ಜತೆ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಎಣ್ಣೆಯಂಶವಿರುವ ಚರ್ಮವು ಸಾಮಾನ್ಯವಾಗುವುದು.
ಮೊಡವೆ ನಿವಾರಿಸುವಲ್ಲಿ ಕಡಲೆಹಿಟ್ಟು ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ಚಮಚ ಕಡಲೆಹಿಟ್ಟು, ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿಕೊಳ್ಳಿ. ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಹಿಡಿಯಷ್ಟು ಅರಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಬಳಸಿಕೊಳ್ಳಿ.
Breaking News
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*
- *ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ : ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ : ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಆಗ್ರಹ*
- *ನ.29 ರಂದು ವಾಲ್ನೂರು-ತ್ಯಾಗತ್ತೂರು ಗ್ರಾಮ ಸಭೆ*
- *ಕೊಡಗು : ಗ್ರಾ.ಪಂ.ಉಪಚುನಾವಣೆ : ವಿವಿಧ ಸಂತೆ, ಜಾತ್ರೆಗಳ ನಿಷೇಧ*
- *ಕಂಚು ಗೆದ್ದ ಮರ್ಕರ ಟೆಕ್ವಾಂಡೋ ಕ್ಲಬ್ ವಿದ್ಯಾರ್ಥಿಗಳು*