




ಮಡಿಕೇರಿ ಏ.3 NEWS DESK : ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ-2024ನ್ನು ವಿರೋಧಿಸಿ ಮುಸ್ಲಿಂ ಜಮಾತ್ ಗಳ ಒಕ್ಕೂಟ ಮಡಿಕೇರಿಯಲ್ಲಿ ಸಭೆ ನಡೆಸಿತು. ಮುಂದಿನ ದಿನಗಳಲ್ಲಿ ಒಕ್ಕೂಟ ನಡೆಸುವ ಹೋರಾಟದ ಕುರಿತು ಪ್ರಮುಖರು ಚರ್ಚಿಸಿದರು. ವಕ್ಫ್ ವಿಚಾರವಾಗಿ ದೇಶವ್ಯಾಪಿ ನಡೆಯುವ ಸಂಯುಕ್ತ ಹೋರಾಟಕ್ಕೆ ಪೂರ್ಣ ಬೆಂಬಲವನ್ನು ನೀಡಲು ಸಭೆ ನಿರ್ಧರಿಸಿತು. ಮುಸ್ಲಿಂ ಜಮಾತ್ ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಮಿನ್ ಮೊಹಿಸಿನ್ ಮಾತನಾಡಿ ಪ್ರಥಮ ಹಂತದಲ್ಲಿ ಶುಕ್ರವಾರ ಪ್ರಾರ್ಥನೆಯ ನಂತರ ಎಲ್ಲಾ ಮುಸ್ಲಿಂ ಬಾಂಧವರು ತೋಳಿಗೆ ಕಪ್ಪುಪಟ್ಟಿ ಧರಿಸಿ ರಾತ್ರಿ 9 ಗಂಟೆಯವರೆಗೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೋರಾಟದಲ್ಲಿ ಬಾಗಿದಾರರಾಗಬೇಕು ಎಂಬ ಕರೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲೂ ಇತರ ಸಂಘ ಸಂಸ್ಥೆಯೊಂದಿಗೆ ಸೇರಿಕೊಂಡು ಬೃಹತ್ ಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಒಕ್ಕೂಟದ ಅಧ್ಯಕ್ಷ ನಜೀರ್, ಉಪಾಧ್ಯಕ್ಷ ಮುಕ್ತಾರ್, ಕಾರ್ಯದರ್ಶಿ ಇಮ್ರಾನ್, ಖಜಾಂಚಿ ಇಸ್ಮಾಯಿಲ್, 10 ಮಸೀದಿಗಳ ಅಧ್ಯಕ್ಷರು, ಧಾರ್ಮಿಕ ಪಂಡಿತರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅಮಿನ್ ಮೊಹಿಸಿನ್ ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ತೊಡಕುಗಳ ಕುರಿತು ವಿವರಿಸಿದರು. ತಮ್ಲಿಕ್ ದಾರಿಮಿ ಪ್ರಾಸ್ತಾವಿಕ ನುಡಿಯಾಡಿದರು, ಇಮ್ರಾನ್ ವಂದಿಸಿದರು.