



ಮಡಿಕೇರಿ NEWS DESK ಏ.3 : ಮಡಿಕೇರಿ ನಗರದ ಶ್ರೀ ಕೋದಂಡರಾಮ ದೇವಾಲಯದ ರಾಮೋತ್ಸವ ಸಮಿತಿ ವತಿಯಿಂದ ಏ.5 ಮತ್ತು 6ರಂದು ರಾಮೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರಾಮೋತ್ಸವ ಸಮಿತಿಯ ಪ್ರಮುಖರೊಂದಿಗೆ ಸಭೆ ನಡೆಸಿತು. ಏ.5ರಂದು ಮಧ್ಯಾಹ್ನ 3 ಗಂಟೆಗೆ ಗಾಂಧಿ ಮೈದಾನದಿಂದ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಮೆರವಣಿಗೆಯು ಗಾಂಧಿ ಮೈದಾನದಿಂದ ಜಿ.ಟಿ ವೃತ್ತ, ನಗರ ಠಾಣೆಯ ಮಾರ್ಗವಾಗಿ ಚೌಕಿ ಮೂಲಕ ಮಹದೇವಪೇಟೆ, ಬನ್ನಿ ಮಂಟಪದಿಂದ ಅಬ್ಬಿಫಾಲ್ಸ್ ರಸ್ತೆಗಾಗಿ, ಮುತ್ತಪ್ಪ ದೇವಾಲಯದ ಮುಂಭಾಗವಾಗಿ ಕೋದಂಡ ರಾಮ ದೇವಾಲಯವನ್ನು ತಲುಪಲಿದೆ. ಮಡಿಕೇರಿ ನಗರದ ಬನ್ನಿ ಮಂಟಪದಿಂದ ಚೌಕಿ ವೃತ್ತದವರೆಗೆ ರಂಗೋಲಿ ಇರುವುದರಿಂದ ರಸ್ತೆಯ ಎರಡೂ ಬದಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ಉಳಿದಂತೆ ನಗರದ ಇತರ ಭಾಗಗಳಲ್ಲಿ ರಸ್ತೆಯ ಒಂದು ಬದಿ ಮಾತ್ರ ವಾಹನ ಪಾರ್ಕಿಂಗ್ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು, ನಗರ ಠಾಣಾ ಪಿ ಎಸ್ ಐ, ಸಿ.ವಿ.ಶ್ರೀಧರ್, ಸಂಚಾರಿ ಠಾಣಾ ಪಿ ಎಸ್ ಐ ತಮ್ಮಯ್ಯ, ಸಂಚಾರಿ ಠಾಣಾ ಎ.ಎಸ್ ಐ ನಂದ ಐ ಪಿ, ಗ್ರಾಮಾಂತರ ಠಾಣೆಯ ಎ ಎಸ್ ಐ ಶಿವಾನಂದ, ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್, ಕೋದಂಡರಾಮ ದೇವಾಲಯ ಟ್ರಸ್ಟ್ ನ ಮುಖ್ಯ ಸಲಹೆಗಾರ ಜಿ.ರಾಜೇಂದ್ರ, ಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಖಜಾಂಚಿ ಡಾ.ಮೋಹನ್ ಅಪ್ಪಾಜಿ, ರಾಮೋತ್ಸವ ಸಮಿತಿಯ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಜಯಂತಿ ಆರ್ ಶೆಟ್ಟಿ, ಕೋದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುಂಡ ಹೆಚ್.ಎನ್, ಕೋದಂಡರಾಮ ದೇವಾಲಯದ ಟ್ರಸ್ಟಿ ಹೆಚ್.ಮಂಜುನಾಥ್, ಟ್ರಸ್ಟ್ ಖಜಾಂಚಿ ಪರಮೇಶ್, ರಾಮೋತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಸ್.ವಿನೋದ್ ಕುಮಾರ್, ರಾಮೋತ್ಸವ ಸಮಿತಿಯ ಸಹ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಉಪಸ್ಥಿತರಿದ್ದರು.