ಮಡಿಕೇರಿ ಮೇ 29 : ನಿಟ್ಟೂರು ಕಾರ್ಮಾಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡ ವ್ಯವಸ್ಥಾಪಕ ಸಂದೀಪ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಕೊಟ್ಟರು.
ಕಾರ್ಮಾಡು ಶಾಖೆಯಲ್ಲಿ ಶಾಖೆಗೆ ಆಗಮಿಸಿದ 60ಕ್ಕಿಂತಲೂ ಹೆಚ್ಚಿನ ಗ್ರಾಮಸ್ಥರು, ಬ್ಯಾಂಕ್ ವ್ಯವಸ್ಥಾಪಕ ಸಂದೀಪ್ ಕೊನೆಯ ದಿನದ ಕರ್ತವ್ಯವನ್ನು ಗಮನಿಸಿ ಶ್ಲಾಘಿಸಿದರು.
ಇದೇ ಸಂದರ್ಭ ನೂತನ ವ್ಯವಸ್ಥಾಪಕ ಟೋನಿ ಅವರನ್ನು ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, ಈ ಪುಟ್ಟ ಗ್ರಾಮಕ್ಕೆ ಗ್ರಾಮೀಣ ಬ್ಯಾಂಕ್ ಅಗತ್ಯವಿಲ್ಲ ವಹಿವಾಟು ಕಡಿಮೆ ಎಂಬ ಅನಿಸಿಕೆಯನ್ನು ಈ ಹಿಂದಿನ ವ್ಯವಸ್ಥಪಕರು ವ್ಯಕ್ತಪಡಿಸಿದರು. ಆದರೆ 2019 ರಲ್ಲಿ ಈ ಬ್ಯಾಂಕ್ ಗೆ ವ್ಯವಸ್ಥಾಪಕ ಬಂದ ಸಂದೀಪ್, ಮೊದಲು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು. ಆದಾಯ ಮತ್ತು ವ್ಯವಹಾರಗಳ ದೃಷ್ಠಿಯಿಂದ ಎಲ್ಲಾ ಪ್ಯರಾಮೀಟರ್ ಗಳಲ್ಲೂ ಈ ಬ್ಯಾಂಕ್ ಇಂದು ಕೊಡಗಿನ ಗ್ರಾಮಾಂತರ ಪ್ರದೇಶದಲ್ಲಿ ಪ್ರಥಮ ಸ್ಥಾನ ಪಡೆದು. ಗ್ರಾಮಕ್ಕೆ ಹಾಗೂ ಬ್ಯಾಂಕ್ ಗೆ ಉತ್ತಮ ಹೆಸರು ತಂದುಕೊಟ್ಟಿದ್ದು 2022-23ನೇ ಸಾಲಿನಲ್ಲಿ ಬ್ಯಾಂಕ್ ವೈವಾಟು ದಾಖಲೆಯ 2 ಕೊಟಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರಲ್ಲದೇ ವ್ಯವಸ್ಥಾಪಕರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.