ಮಡಿಕೇರಿ ಮೇ 30 : ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಅರಣ್ಯ ಕಾಲೇಜಿನ ಸಹಯೋಗದಲ್ಲಿ ರೈತರು ಮತ್ತು ಕಾಫಿ ಬೆಳೆಗಾರರಿಗೆ ಕೃಷಿ ಮತ್ತು ಕಾಫಿ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಬನ್ ಕ್ರೆಡಿಟ್‍ಗೆ ಭವಿಷ್ಯ ಮತ್ತು ಅದರಿಂದ ಆರ್ಥಿಕ ಲಾಭ ಗಳಿಸಲು ಇರುವ ಅವಕಾಶಗಳ ಕುರಿತು ಕಾರ್ಯಾಗಾರ ನಡೆಯಿತು.
ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಎಸ್‍ಇಸಿಯ ವಿಜ್ಞಾನಿಗಳಾದ ಡಾ.ಎಮ್.ಬಾಲಸುಬ್ರಮಣಿಯನ್, ಡಾ.ಜೇಮ್ಸ್ ಜೇಕಬ್ ಮತ್ತು ಡಾ.ಅಜ್ಜಿಕುಟ್ಟೀರ ಅದೀತ್ ಕಾರ್ಯಪ್ಪ ತಾಂತ್ರಿಕ ಭಾಷಣ ಮಾಡಿದರು.
ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಪಿ.ಜಿ.ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಕಾಲೇಜಿನ ಮುಖ್ಯಸ್ಥ ಡಾ.ಸಿ.ಜಿ.ಕುಶಾಲಪ್ಪ ಕಾರ್ಯಗಾರದ ಮುಖ್ಯ ಉದ್ದೇಶವನ್ನು ವಿವರಿಸಿದರು.
ಅರಣ್ಯ ಕಾಲೇಜಿನ ಉಪನ್ಯಾಸಕ ಮತ್ತು ವಿಭಾಗದ ಮುಖ್ಯಸ್ಥ ಡಾ. ಜಿ.ಎಮ್.ದೇವಗಿರಿ ಕಾರ್ಬನ್ ಕ್ರೆಡಿಟ್ ನಿಂದ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರು ಆರ್ಥಿಕ ಲಾಭ ಗಳಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ವಿವಿಧ ಭಾಗಗಳ ರೈತರು ಮತ್ತು ಬೆಳೆಗಾರರು ಅಧಿಕ ಸಂಖ್ಯೆಯಲ್ಲಿ ಪಲ್ಗೊಂಡು ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಂಡರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು.ಅಶೋಕ್ ಸ್ವಾಗತ ಕೋರಿದರು ಮತ್ತು ಉಪಾಧ್ಯಕ್ಷ ಎ.ನಂದಾ ಬೆಳ್ಳಿಯಪ್ಪ ಸರ್ವರನ್ನು ವಂದಿಸಿದರು.









