ನಾಪೋಕ್ಲು ಜೂ.12 : ನಿಸ್ವಾರ್ಥ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಿತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ವೃದ್ಧಾಶ್ರಮದಲ್ಲಿ ಶ್ರಮದಾನ ನಡೆಯಿತು.
ನಾಪೋಕ್ಲು, ಮಡಿಕೇರಿ, ಮರಗೋಡು ಘಟಕಗಳ ಸಹಯೋಗದಲ್ಲಿ ಮಡಿಕೇರಿಯ ತನಲ್ ಕೂರ್ಗ್ ನೆರಳಿನ ಮನೆ ವೃದ್ಧಾಶ್ರಮದಲ್ಲಿ ಘಟಕದ 26 ಸ್ವಯಂ ಸೇವಕರು ತಮ್ಮೆಲ್ಲಾ ವೈಯಕ್ತಿಕ ಕೈoಕರ್ಯಗಳನ್ನು ಬದಿಗೊತ್ತಿ ಮುಂಜಾನೆಯಿಂದ ಮುಸ್ಸಂಜೆವರೆಗೂ ಶ್ರಮದಾನ ಮಾಡಿದರು.
3 ತಂಡವನ್ನು ಮಾಡಿಕೊಂಡು ಒಂದು ತಂಡ ಮಳೆಗಾಲಕ್ಕೆ ಬೇಕಾಗುವ ಸೌದೆ ಕೆಲಸ, ಇನ್ನೊಂದು ತಂಡ ಆಶ್ರಮ ದ ಬದಿಯಲ್ಲಿ ಇದ್ದ ಬಿದಿರು ಮತ್ತು ಗಿಡಗಂಟಿ ಕಾಡುಗಳನ್ನು ಕಡಿದು ಮಳೆಗಾಲಕ್ಕೆ ಯಾವುದೇ ತೊಂದರೆ ಆಗದಂತಹ ಕೆಲಸ, ಮತ್ತೊಂದು ತಂಡ ಆಶ್ರಮದ ಸುತ್ತು ಹೂಗಿಡ ಮತ್ತು ಹಣ್ಣಿನ ಗಿಡ ನೆಟ್ಟು ಸೇವೆಯನ್ನ ಮಾಡಿದರು.
ಈ ಸಂದರ್ಭ 3 ಶೌರ್ಯ ತಂಡದ ಸಂಯೋಜಕೀಯರಾದ ಮಮತಾ, ದಿವ್ಯ, ರೋಹಿಣಿ, ಸದಸ್ಯರಾದ ಲತಾ, ಗೀತಾ, ರಮ್ಯಾ, ಹರೀಶ್, ಸುನೀತಾ, ಸುಂದರಿ,ಐತಪ್ಪ, ಧನಂಜಯ, ಕುಮಾರ್, ರಮೇಶ್, ಭಾಸ್ಕರ,,ತಾರಾಮಣಿ, ಲೀಲಾ ಸೇಸಮ್ಮ,ಪ್ರೇಮ,ಮುನೀರ್, ಹರಿಣಾಕ್ಷಿ, ದಿಲೀಶ್, ಶಂಕರ್, ಶರವಣ, ಉಮಾಲಕ್ಷ್ಮಿ, ಗೀತಾ, ಚಂದ್ರಕಲಾ, ಆಶಾ ಇನ್ನಿತರರು ಪಾಲ್ಗೊಂಡಿದ್ದರು.
ಶೌರ್ಯ ಸೇವೆಗೆ ತನಲ್ ಕೂರ್ಗ್ ನಾ ಅಧ್ಯಕ್ಷರು, ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ