ಬೆಂಗಳೂರು: ಪಿಯುಸಿ ನಂತರ ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದು (KCET Results 2023)ಅದರ ಫಲಿತಾಂಶ ಪ್ರಕಟವಾಗಿದೆ.
ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಈ ಬಾರಿ ರಾಜ್ಯದ 592 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 592 ಕೇಂದ್ರಗಳಲ್ಲಿ 2,61,610 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸರಿ ಉತ್ತರಗಳನ್ನು ಪ್ರಾಧಿಕಾರದ kea.nic.in ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಿದೆ ಎಂದು ಹೇಳಿದರು.
ಬಾಲಕಿಯರು ಮೇಲುಗೈ: ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ. ಇಂಜಿನಿಯರಿಂಗ್ ವಿಭಾಗದಲ್ಲಿ, ವಿಘ್ನೇಶ್ ನಟರಾಜು ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಕಳಿಸಿದ್ದು, ಸಿಟಿಇಯಲ್ಲಿ 96.111 ಅಂಕ ಪಡೆದಿದ್ದು. ಒಟ್ಟು 97.111 ಪರ್ಸೆಂಟೇಜ್ ಪಡೆದಿದ್ದಾರೆ.
ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ, ಸಮೃದ್ಧ್ ಶೆಟ್ಟಿ ತೃತೀಯ ಸ್ಥಾನ, ಎಸ್.ಸುಮೇಧ್ಗೆ 4ನೇ ಸ್ಥಾನ, ಮಾಧವ ಸೂರ್ಯಗೆ 5ನೇ ಸ್ಥಾನ ಗಳಿಸಿದ್ದಾರೆ.
ಇಂಜಿನಿಯರಿಂಗ್ ಕೋರ್ಸಿಗೆ- 2,03,381, ಕೃಷಿ ವಿಜ್ಞಾನ ಕೋರ್ಸಿಗೆ- 1,64,187, ಪಶುಸಂಗೋಪನೆ- 166756, ಯೋಗ ಮತ್ತು ನ್ಯಾಚುರೋಪತಿ ಗೆ- 2,06191, ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340, ನರ್ಸಿಂಗ್ ಕೋರ್ಸಿಗೆ – 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾಗೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು 98.661 ಅಂಕ ಪಡೆದು ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಕೃಷಿ ವಿಭಾಗದಲ್ಲಿ ಬೈರೇಶ್ ಎಸ್.ಎಚ್ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ಎಕ್ಸ್ಪರ್ಟ್ ಯುನಿವರ್ಸಿಟಿ ಕಾಲೇಜ್ ವಿಧ್ಯಾರ್ಥಿಯಾದ ಬೈರೇಶ್, ಕ್ವಾಲಿಫಿಕೇಷನ್ನಲ್ಲಿ 99.75 ಅಂಕ ಪಡೆದಿದ್ದು, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ರ‍್ಯಾಂಕ್ ಪಡೆದಿದ್ದಾರೆ.
ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್ ಮೊದಲ ರ‍್ಯಾಂಕ್ ಪಡೆದಿದ್ದು, ಸಿಇಟಿಯಲ್ಲಿ ಒಟ್ಟು 97.222 ಅಂಕ ಪಡೆದಿದ್ದಾರೆ. ಇವರು ಚಾಮರಾಜಪೇಟೆಯ ಮಹೇಶ್ ಪಿಯು ಕಲೇಜಿನ ವಿಧ್ಯಾರ್ಥಿಯಾಗಿದ್ದಾರೆ.
ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾಗೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು 98.661 ಅಂಕ ಪಡೆದು ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಫಲಿತಾಂಶ ವೀಕ್ಷಣೆ: ಇಂದು ಬೆಳಗ್ಗೆ 11 ಗಂಟೆ ನಂತರ ಅಇಖಿ-2023 ಫಲಿತಾಂಶಗಳನ್ನು ಏಇಂ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಪರಿಶೀಲಿಸಬಹುದು. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಏಅಇಖಿ ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ kea.kar.nic.in, cetonline.karnataka.gov.in ಮತ್ತು karresults.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಕರ್ನಾಟಕ CET ಫಲಿತಾಂಶ 2023 ಅನ್ನು ಪ್ರವೇಶಿಸಲು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.