ಮಡಿಕೇರಿ ಜೂ.17 : ನಾಪೋಕ್ಲು-ವಿರಾಜಪೇಟೆ ಮುಖ್ಯ ರಸ್ತೆಯ ಪೊದ್ದಮಾನಿ ತಿರುವಿನಲ್ಲಿ ಬೃಹತ್ ಮರ ರಸ್ತೆಗೆ ಉರುಳಿಬಿದ್ದ ಪರಿಣಾಮ ಸ್ವಲ್ಪ ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ನಂತರ ಗ್ರಾಮಸ್ಥರು ಮರವನ್ನು ತೆರವು ಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಮೀಪದಲ್ಲೇ ಕಡಂಗ, ಕರಡ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ಹಾನಿಯಾಗಿದೆ.