ಮಡಿಕೇರಿ ಜೂ.24 : ಲಯನ್ಸ್ ಜಿಲ್ಲೆ 317- ಡಿ ಇದರ 14 ಕ್ಲಬ್ ಗಳು ಕಾರ್ಯ ನಿರ್ವಹಿಸುವ ಪ್ರಾಂತೀಯ 8ರ ಅಧ್ಯಕ್ಷರಾಗಿ ನವೀನ್ ಅಂಬೆಕಲ್ಲು ನೇಮಕಗೊಂಡಿದ್ದಾರೆ.
ಮಡಿಕೇರಿ ಲಯನ್ಸ್ ಸಂಸ್ಥೆಯ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಇವರು 2006-07 ರಲ್ಲಿ ಲಯನ್ಸ್ ಅಧ್ಯಕ್ಷರಾಗಿದ್ದರಲ್ಲದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ 2023-24 ರ ಅವಧಿಗೆ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಜು.1 ರಿಂದ 2024 ಜೂನ್ ಅಂತ್ಯದವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಾಂತೀಯ ರಾಯಭಾರಿಯಾಗಿ ಧನು ಉತ್ತಯ್ಯ, ವಲಯಾಧ್ಯಕ್ಷರುಗಳಾಗಿ ರೋಹಿತ್ ಸಿ.ಕೆ, ಕಾನೆಹಿತ್ಲು ಸತೀಶ್ ಕುಮಾರ್, ಬಾಲಕೃಷ್ಣ ಎಂ.ಎ ಹಾಗೂ ವಿಶಾಲ್ ದೇವಯ್ಯ ನೇಮಕಗೊಂಡಿದ್ದಾರೆ.