ನಾಪೋಕ್ಲು 26 : ಒಡಿಶಾದಲ್ಲಿ ಜೂ.27 ರಿಂದ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಗೋಲ್ ಕೀಪರ್ ಆಗಿ ಕುಂಜಿಲ-ಕಕ್ಕಬ್ಬೆಯ ಪಿ.ಡಿ.ಶ್ರಾವ್ಯ ಆಯ್ಕೆಯಾಗಿದ್ದಾರೆ.
ಈಕೆ ಮಡಿಕೇರಿಯ ಸಾಯಿ ಬಾಲಕಿಯರ ಕ್ರೀಡಾ ವಸತಿ ನಿಲಯದಲ್ಲಿ ಇದ್ದು, ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕುಂಜಿಲ ಗ್ರಾಮದ ದೇವಯ್ಯ-ಚಿತ್ರಾ ದಂಪತಿಗಳ ಪುತ್ರಿ.
ವರದಿ : ದುಗ್ಗಳ ಸದಾನಂದ