ಸೋಮವಾರಪೇಟೆ ಜು.2 : ಅವಿರತ ಸಂಸ್ಥೆ ವತಿಯಿಂದ ಕಿರಗಂದೂರು ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು.
ಸಂಸ್ಥೆಯ ಸದಸ್ಯರಾದ ಸಾಹಿತಿ ಹಾಗು ವೈದ್ಯ ಶಾಲಿನಿ ಹಾಗು ನಿವೃತ್ತ ಶಿಕ್ಷಕ ಲಕ್ಷö್ಮಪ್ಪ ಅವರುಗಳು ನೋಟ್‌ಬುಕ್ ವಿತರಿಸಿದರು. ನಂತರ ನಿವೃತ್ತ ಶಿಕ್ಷಕ ಲಕ್ಷ್ಮಪ್ಪ ಮಾತನಾಡಿ, ಪಠ್ಯ ಪುಸ್ತಕಗಳನ್ನು ಸರ್ಕಾರ ವಿತರಿಸುತ್ತದೆ. ಬರೆಯುವ ಪುಸ್ತಕಗಳನ್ನು ನೀಡುತ್ತಿಲ್ಲ. ಇಂದಿಗೂ ಸಾಕಷ್ಟು ಬಡ ಮಕ್ಕಳಿಗೆ ಮಸ್ತಕಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ನೀಡುತ್ತಿದ್ದೇವೆ ಎಂದರು.
ಇತ್ತಿಚಿನ ದಿನಗಳಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತಹ ಸ್ಥಿತಿಯಲ್ಲಿವೆ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಸಾಕಷ್ಟು ವಿದ್ಯಾರ್ಥಿಗಳು ಒಳ್ಳೆಯ ಹುದ್ದೆಗಳನ್ನು ಆಲಂಕರಿಸಿದ್ದಾರೆ. ವಿದ್ಯಾವಂತರಾದ ನಾವುಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಮತ್ತು ಆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಅವಿರತ ಸಂಸ್ಥೆ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಾಚಾರಿ, ಶಿಕ್ಷಕರುಗಳಾದ ಧರ್ಮಪ್ಪ, ರಶ್ಮಿ, ಬಿ.ವಿಜಯಕುಮಾರ್, ಯಲ್ಲಪ್ಪ ಪೂಜಾರಿ, ಶ್ರೀಲೇಖಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ, ಶಿಕ್ಷಕರಾದ ವಿನೋದ, ಕೆಂಪರಾಜು, ಸ್ಮಿತಾ, ಅವಿರತ ಸಂಸ್ಥೆಯ ಪುನೀತ್ ಇದ್ದರು.











