ಮಡಿಕೇರಿ ಜು.4 : ಜೆಸಿಐ ಭಾರತದ ವಲಯ 14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕವು ವಿವಿಧ ವಿಭಾಗಗಳಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜೆಸಿಐ ಬೀರೂರು ಘಟಕದ ಆತಿಥ್ಯದಲ್ಲಿ ಬೀರೂರಿನ ಶ್ರೀ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಜೆಸಿಐ ಭಾರತದ ವಲಯ 14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾಂತ್ಯ ಬಿ ವಿಭಾಗದ, ವೈಯಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಘಟಕಾಧಿಕಾರಿ ಪ್ರಶಸ್ತಿಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಪಡೆದುಕೊಂಡರು. ಅತ್ಯುತ್ತಮ ಘಟಕ ವಿಭಾಗದಲ್ಲಿ ವಿಜೇತರಾದರು, ಅತ್ಯುತ್ತಮ ಕಾರ್ಯಕ್ರಮ ವಿಭಾಗದಲ್ಲಿ ರನ್ನರ್ ಪ್ರಶಸ್ತಿ ಪಡೆದುಕೊಂಡರು, ,
ವಲಯ ವಿಭಾಗದಲ್ಲಿ ಘಟಕ ಅಧ್ಯಕ್ಷ ನೀತ್ ಅಯ್ಯಪ್ಪ ಗೆ ವಿದ್ಯರತ್ತ ಪುರಸ್ಕಾರ್ ನೀಡಿ ಸನ್ಮಾನಿಸಲಾಯಿತು.
2ನೇ ವಲಯ ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಿದಕ್ಕೆ ಘಟಕಕ್ಕೆ ವಿಶೇಷ ಮನ್ನಣೆ ಪ್ರಶಸ್ತಿಯನ್ನು ನೀಡಿದರು. ಘಟಕ ಅಧ್ಯಕ್ಷರಿಗೆ ವಿಶೇಷ ಮನ್ನಣೆ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿಯನ್ನು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕವು ಪಡೆದುಕೊಂಡಿತು. ಪ್ರಶಸ್ತಿಯನ್ನು ವಲಯಾಧ್ಯಕ್ಷೆ ಯಶಸ್ವಿನಿ, ವಲಯ ಉಪಾಧ್ಯಕ್ಷೆ ಆಶಾ ಜೈನ್ ಹಾಗೂ ವಲಯ ಘಟಕ ಆಡಳಿತ ಮಂಡಳಿಯವರಿಂದ ನೀಡಲಾಯಿತು.
ವಲಯ 14ರ ಪ್ರಾಂತ್ಯ ಡಿ ಉಪಾಧ್ಯಕ್ಷ ಕಳಸ ಘಟಕದ ಹೆಚ್.ಆರ್.ಪ್ರಶಾಂತ್ ಮಧ್ಯವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ನೀತ್ ಅಯ್ಯಪ್ಪ, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಖಜಾಂಚಿ ಬಿ.ಎಂ.ಚಂಗಪ್ಪ, ಸದಸ್ಯರಾದ ಹೆಚ್.ಆರ್. ಸತೀಶ್, ಜೆ.ಪಿ.ಸ್ವಾಮಿ, ಎಲ್.ಎನ್. ಅಣ್ಣಪ್ಪ, ಟಿ.ಎಸ್. ಅಕ್ಷಯ್ , ಎಸ್‌ಎಂಎ ಸದಸ್ಯರಾದ ಬಿ.ಇ. ಕಿರಣ್ ಹಾಗೂ ಎನ್.ಜಿ,ಸುರೇಶ್ ಇತರರು ಹಾಜರಿದ್ದರು.