ನಾಪೋಕ್ಲು ಜು.10 : ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ಮರಂದೋಡು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳು ಚಂಡೀರ ಗಪ್ಪುಗಣಪತಿಯವರ ಅಡಿಕೆ ತೋಟಕ್ಕೆಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ನಷ್ಟ ಉಂಟುಮಾಡಿವೆ.
ಇದೇ ರೀತಿಯಾಗಿ ಗ್ರಾಮದ ಕಾಫಿ ಬೆಳೆಗಾರರಾದ ಚಂಡೀರ ಜಗದೀಶ್, ರನ್ನು ಉತ್ತಪ್ಪ, ದೇವರಾಜ್, ಪೂಣಚ್ಚ ಸೇರಿದಂತೆ ಇತರರ ತೋಟಗಳಿಗೂ ಕಾಡಾನೆಗಳು ನುಗ್ಗಿ ಕಾಫಿ ,ಅಡಿಕೆ, ತೆಂಗು, ಕರಿಮೆಣಸು,ಬಾಳೆ ಸೇರಿದಂತೆ ಕೃಷಿ ಉತ್ಪನ್ನ ಗಿಡಗಳನ್ನು ಧ್ವಂಸ ಮಾಡಿ ಬೆಳೆಗಳನ್ನು ನಾಶ ಪಡಿಸಿ ನಷ್ಟ ಸಂಭವಿಸಿದೆ.
ಚೆಯ್ಯಂಡಾಣೆ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಾಡಾನೆಗಳ ಉಪಟಳ ದಿಂದ ಗ್ರಾಮಸ್ಥರು ನಲುಗುವಂತಾಗಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕಾಡಾನೆಗಳ ಉಪಟಳದಿಂದ ಕಾರ್ಮಿಕರು ಕೆಲಸಕ್ಕೆ ತೆರಳು ಹಿಂದೇಟು ಹಾಕುತ್ತಿದ್ದು, ಮನೆಯಲ್ಲಿ ಕೂರುವ ಪ್ಪರಿಸ್ಥಿತಿ ಉದ್ಭವಿಸಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳ ಸ್ಥಳಾಂತರ ಅಥವಾ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಪ್ಪಿದಲ್ಲಿ ಕಕ್ಕಬೆ ಪಟ್ಟಣದಲ್ಲಿ ಹುಣಸೂರು – ಭಾಗಮಂಡಲ ರಸ್ತೆತಡೆ ಮಾಡಿ ತೀವ್ರತರದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಗ್ರಾಮಸ್ಥರಾದ ಚಂಡೀರ ಜಗದೀಶ್, ರನ್ನು ಉತ್ತಪ್ಪ, ದೇವರಾಜ್, ಪೂಣಚ್ಚ ,ದೇವಯ್ಯ, ಸುಂದರ, ರ್ಯಾ ಲಿ ಗಣಪತಿ ಎಚ್ಚರಿಕೆ ನೀಡಿದ್ದಾರೆ.
ವರದಿ : ದುಗ್ಗಳ ಸದಾನಂದ