ಮಡಿಕೇರಿ ಜು.17 : ವಿರಾಜಪೇಟೆಯ ಅರಸು ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಿಎರವರ ಕಾಳಿ (24) ಜು.14 ರಂದು ಹಾಲು ಕರೆದು ಅಂಗಡಿ ಹಾಗೂ ಹೊಟೇಲ್‍ಗೆ ನೀಡಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋದವಳು ವಾಪಾಸ್ಸು ಮನೆಗೆ ಬಂದಿಲ್ಲ ಎಂದು ಮನೆಯ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.
ಕನ್ನಡ, ಕೊಡವ ಮತ್ತು ಎರವ ಭಾಷೆ ಮಾತನಾಡುವ ಪಣಿಎರವರ ಕಾಳಿ 5.1 ಅಡಿ ಎತ್ತರವಿದ್ದು, ದುಂಡು ಮುಖ, ಕಪ್ಪು ಮೈಬಣ್ಣ, ಕಪ್ಪು ಕೂದಲು, ತೆಳ್ಳನೆಯ ಶರೀರ ಹೊಂದಿದ್ದಾರೆ. ಮಹಿಳೆಯನ್ನು ಕಂಡವರು ವಿರಾಜಪೇಟೆ ನಗರ ಪೊಲೀಸ್ ಠಾಣೆ-08274-257333 ಸಂಪರ್ಕಿಸುವಂತೆ ಕೋರಿದೆ.