ಮಡಿಕೇರಿ ಜು.23 : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಎಸ್ .ನಾಗೇಶ್ ಅವರನ್ನು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಆಯ್ಕೆ ಮಾಡಿದ್ದಾರೆ.
ಗೌರವ ಕಾರ್ಯದರ್ಶಿಗಳಾಗಿ ಎಸ್. ನಾಗರಾಜ್ ಮತ್ತು ಟಿ.ವಿ ಶೈಲಾ, ಗೌರವ ಕೋಶಾಧಿಕಾರಿಗಳಾಗಿ ಕೆ.ವಿ ಉಮೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ ಬಿ. ದೇವಿಪ್ರಸಾದ್ ಹಾಗೂ ರತ್ನಾವತಿ ಸೂದನ ಅವರನ್ನು ನೇಮಿಸಲಾಗಿದೆ.
ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪಿ ಎಫ್ ಸಬಾಸ್ಟಿನ್, ಶಿರಂಗಾಲ ಹೋಬಳಿ ಅಧ್ಯಕ್ಷ ಎಂ.ಎನ್. ಮೂರ್ತಿ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿರುತ್ತಾರೆ.
ಅಲ್ಲದೆ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ವಿ.ಪಿ ಶಶಿಧರ್, ಮಹಿಳಾ ಪ್ರತಿನಿಧಿಗಳಾಗಿ ಸಾವಿತ್ರಿ ಬಿ.ಬಿ, ಕುಮಾರಿ ಫಿಲೋಮಿನಾ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಹೆಚ್.ಎಂ ವೆಂಕಟೇಶ್, ಗೀತಾ ಬಸಪ್ಪ, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಪರಮೇಶ್ವರ್ ವೈ.ಟಿ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಪರಮೇಶ್ ಬಿ. ಎಸ್. ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಜಂಷಿರ್ ಅಹ್ಮದ್ ಖಾನ್, ಪದನಿಮಿತ್ತ ಸದಸ್ಯರುಗಳಾಗಿ ತಾಲ್ಲೂಕು ಶಿಕ್ಷಣಾಧಿಕಾರಿಗಳಾದ ಕೆ.ವಿ.ಸುರೇಶ್, ಉಪವಿಭಾಗದ ಸಹಕಾರ ಸಂಘದ ಸಹಾಯಕ ನಿಬಂಧಕರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಕೊಡಗು ವಿಶ್ವವಿದ್ಯಾಲಯದ ರಿಜಿಸ್ಟಾರ್ ರಾದ ಸೀನಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿಗಳಾದ ರೋಹಿತ್, ಸೋಮವಾರಪೇಟೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಧನಲಕ್ಷ್ಮಿ ,ಸೋಮವಾರಪೇಟೆ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಜಾನಕಿ ಅವರನ್ನು ನೇಮಿಸಲಾಗಿದೆ.
ಗೌರವ ಸಲಹೆಗಾರರಾಗಿ ಎಂ.ಎನ್ ಕಾಳಪ್ಪ, ಟಿ.ಕೆ ಬಸವರಾಜ್, ಎಚ್.ಬಿ. ಲಿಂಗಮೂರ್ತಿ, ಹೇಮಲತಾ ಬಿ.ಬಿ,ಹರೀಶ್ ಗುಡ್ಡೆಮನೆ, ಲೀಲಾವತಿ ತೊಡಿಕಾನ, ಬಿ.ಸಿ ಶಂಕರಯ್ಯ, ಮಾಲಾಮೂರ್ತಿ , ವಿಶೇಷ ಆಹ್ವಾನಿತರಾಗಿ ಕೆ.ಎಸ್ ರತೀಶ್, ಎನ್.ಕೆ.ಮೋಹನ್, ಡಿ ವಿ ರಾಜೇಶ್, ಟಿ.ಬಿ. ಮಂಜುನಾಥ್, ಬಿ.ಎನ್. ಪುಷ್ಪ, ಕೆ. ವಿ ಶ್ರೀನಿವಾಸ್ ಕೆ.ಕೆ ಹೇಮಂತ್ ಕುಮಾರ್, ವಸಂತ್ ಕುಮಾರ್ ಹೊಸಮನೆ , ಬಿ.ಸಿ ದಿನೇಶ್, ಹಾ.ತಿ.ಜಯಪ್ರಕಾಶ್, ಕೆ. ಪ್ರಕಾಶ್ ಇರಲಿದ್ದಾರೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ರೇವತಿ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.