ಮಡಿಕೇರಿ ಆ.10 : ವಿಶ್ವ ಮುಸ್ಲಿಮರ ಪರಮೋಚ್ಚ ಪವಿತ್ರ ವಾಗಿರುವ ಕಅಬಾ ಸಂದರ್ಶನ ವಿಶ್ವಸಿಗಳನ್ನು ಸತ್ಕರ್ಮಗಳೆಡೆಗೆ ಪ್ರೇರೇಪಿಸುತ್ತದೆ ಪವಿತ್ರ ಮಕ್ಕ ಮತ್ತು ಮದೀನ ಮಣ್ಣಿನ ಸ್ಪರ್ಶ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೊಂಡಗೇರಿ ಹಾರಿಸ್ ಮದನಿ ಹೇಳಿದರು.
ವಿರಾಜಪೇಟೆ ಎನ್ ಸಿ ಟಿ ಸಂಸ್ಥೆ ವತಿಯಿಂದ ನಡೆದ ಉಮ್ರಾ ಯಾತ್ರಾರ್ಧಿಗಳ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಾಗಾರದಲ್ಲಿ ವಿಶೇಷ ತರಬೇತುದಾರರಾಗಿ ಪಾಲ್ಗೊಂಡಿದ್ದ ಯಾತ್ರೆಯ ಅಮೀರರಾದ ಹಮೀದ್ ಮದನಿ ಮಡಿಕೇರಿ ಅವರು ಉಮ್ರಾ ಯಾತ್ರೆಯ ಆರಂಭದಿಂದ ಅಂತ್ಯದವರೆಗಿನ ಕುರಿತ ಧಾರ್ಮಿಕ ವಿಧಿ ವಿಧಾನಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು ಅಲ್ಲದೆ ಎನ್ ಸಿ ಟಿ ಮೂಲಕ ಈ ಬಾರಿ ತೆರಳುತ್ತಿರುವ ಉಮ್ರಾ ಯಾತ್ರಾರ್ಥಿಗಳಿಗೆ ಉಮ್ರಾ ಕಿಟ್ ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಇದಕ್ಕೆ ಮೊದಲು ವಿರಾಜಪೇಟೆಯ ಎನ್ ಸಿ ಟಿ ವ್ಯವಸ್ಥಾಪಕ ಕೆ ಎ ಹನೀಫ್ ಸ್ವಾಗತಿಸಿದರು.
ವೇದಿಕೆಯಲ್ಲಿ ನಝೀರ್ ಸಖಾಫಿ ಕುಂಜಿಲ , ಎನ್ ಸಿ ಟಿ ಸಂಸ್ಧೆಯ ಮಸೂದ್ ಎಂ ಎ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಯಾತ್ರಾರ್ಧಿಗಳು ಪಾಲ್ಗೂಂಡಿದ್ದರು.