ಮಡಿಕೇರಿ ಆ.11 : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ಆ. 15 ರಂದು ತೆರೆಯಲಾಗಿರುತ್ತದೆ.
ಪ್ರತೀ ಮಂಗಳವಾರ ಮ್ಯೂಸಿಯಂಗೆ ರಜೆ ಇದ್ದು, ಆದರೆ ಆ.15 ರಂದು ಮಂಗಳವಾರದ ರಜೆಯನ್ನು ರದ್ದುಗೊಳಿಸಿ ಸಾರ್ವಜನಿಕರಿಗೆ ಎಂದಿನಂತೆ ಮ್ಯೂಸಿಯಂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮ್ಯೂಸಿಯಂ ವೀಕ್ಷಣೆಗೆ ಅವಕಾಶವಿದೆ.







