ಮಡಿಕೇರಿ ಆ.31 : ಗೋಣಿಕೊಪ್ಪಲಿನ ಲಯನ್ಸ್ ಪ್ರೌಢ ಶಾಲೆಯಲ್ಲಿ ನಡೆದ ಆಮ್ಮತಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾಗಿದ್ದಾರೆ.
ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯದಲ್ಲಿ ವಿದ್ಯಾರ್ಥಿಗಳಾದ 10ನೇ ತರಗತಿಯ ಆಕರ್ಶ್ ಕೊಂಗಂಡ,
ಎಂ.ಜಿ.ಅಯ್ಯಪ್ಪ, ಸಿ.ತಹಾನ್ ಪೂವಯ್ಯ, 9ನೇ ತರಗತಿಯ ಪಿ.ಎಸ್.ಅನಲ್, 8ನೇ ತರಗತಿಯ
ವೃಶಾಂಕ್ ದೇವಯ್ಯ ಭಾಗವಹಿಸಿ ವಿಜೇತರಾಗಿ ಮುಂಬರುವ ತಾಲೂಕು ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕಿಯರಾದ ಎಂ.ಪಿ.ಮೋನಿಕಾ ಕಾವೇರಿ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಾಲಾ ಸಂಯೋಜಕರು ಹಾಗೂ ಶಿಕ್ಷಕ ವೃಂದದವರು ಶಾಘಿಸಿ ಅಭಿನಂದಿಸಿದ್ದಾರೆ.












