ಮಡಿಕೇರಿ ಸೆ.9 : ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಸ್.ಸರೋಜ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಐ.ಎ.ಅಕ್ಕಮ್ಮ, ಕಾರ್ಯದರ್ಶಿಯಾಗಿ ಕೆ.ಸಿ.ಇಂದಿರಾ, ಸಹ ಕಾರ್ಯದರ್ಶಿ ಕೆ.ಆರ್.ಸುಜಾತ, ಖಜಾಂಚಿ ಹೆಚ್.ಕೆ.ಉಮಾವತಿ, ವೃತ್ತದ ನಾಯಕಿಯರಾಗಿ ಬಿ.ಬಿ.ಜಯಂತಿ, ಹೆಚ್.ಎಸ್.ಸವಿತ, ಕೆ.ಎಸ್.ಮುತ್ತಮ್ಮ, ಕೆ.ಬಿ.ಧರಣಿ ಹಾಗೂ ಕೆ.ಆರ್.ಅನಿಲ ನೇಮಕಗೊಂಡಿದ್ದಾರೆ.
ಈ ಹಿಂದೆ ಇದ್ದ ಸಂಘಟನೆಯಿಂದ ಹೊರ ಬಂದ ಸದಸ್ಯರು ನೂತನ ಸಂಘವನ್ನು ರಚಿಸಿಕೊಂಡಿರುವುದಾಗಿ ಅಧ್ಯಕ್ಷೆ ಡಿ.ಎಸ್.ಸರೋಜ ತಿಳಿಸಿದ್ದಾರೆ.












