ಸುಂಟಿಕೊಪ್ಪ ಅ.5 : ಗಾಂಧಿಜಯಂತಿಯ ಅಂಗವಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಸ್ವಚ್ಛತಾ ಕಾರ್ಯ ಹಾಗೂ ಬಡಾವಣೆಯ ನಿವಾಸಿಗಳಿಗೆ ಕ್ರೀಡಾಕೂಟ ನಡೆಯಿತು.
ಶ್ರೀ ವಿನಾಯಕ ಮಿತ್ರ ಮಂಡಳಿಯ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯ, ಪುಟಾಣಿ ಮಕ್ಕಳು, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಯಿತು.
ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಓಟ ಹಾಗೂ ಬಕೆಟಿಗೆ ಬಾಲ್, 1ನೇ ತರಗತಿ ಯಿಂದ 3ನೇ ತರಗತಿ ವರೆಗಿನ ಮಕ್ಕಳಿಗೆ ಬಕೆಟಿ ಗೆ ಬಾಲ್ ಹಾಕುವುದು, ಮತ್ತು ನೀರು ತುಂಬಿಸುವ ಕ್ರೀಡಾಕೂಟ, 4ನೇ ತರಗತಿ ಯಿಂದ 7ನೇ ತರಗತಿ ಮಕ್ಕಳಿಗೆ ಪಾಸಿಂಗ್ ಬಾಲ್ ಮತ್ತು ನೀರು ತುಂಬಿಸುವ ಆಟ, 8ನೇ ತರಗತಿ ಯಿಂದ 10ನೇ ತರಗತಿ ಮಕ್ಳಳಿಗೆ ಗೋಣಿಚೀಲ ಓಟ ಮತ್ತು ಪಾಸಿಂಗ್ ಬಾಲ್, ಪಿಯುಸಿ ಯಿಂದ ಡಿಗ್ರಿ ಮಕ್ಕಳಿಗೆ ಸುಪ್ರ್ರೈಸ್, ಮಹಿಳೆಯರಿಗೆ ಇಟ್ಟಿಗೆ ಹಿಡಿತ, ಹಿರಿಯ ಮಹಿಳೆಯರಿಗೆ ಸೂಜಿಗೆ ಧಾರ ಹಾಕುವ ಸ್ಪರ್ಧೆ, ಪುರುಷರಿಗೆ ಗೋಣಿಚೀಲ ಓಟ, ತೆಂಗಿನಕಾಯಿಗೆ ಕಲ್ಲು ಒಡೆಯುವುದು ಹಾಗೂ ಬಕಾಸುರ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.







