ಮಡಿಕೇರಿ ಅ.20 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ಹಂತ ಕುಂದದಿಂದ ಪಾದಯಾತ್ರೆ ಆರಂಭಗೊಂಡಿತು.
ಬೊಟ್ಟಿಯತ್ನಾಡ್ (ಕುಂದ), ಕುತ್ನಾಡ್ (ಬಿ.ಶೆಟ್ಟಿಗೇರಿ) ಮತ್ತು ಬೆರಳಿನಾಡ್ (ಕಂಡಂಗಾಲ) ನ ಮೂರು ನಾಡುಗಳ ಮಂದ್ “ಕೈಮುಡಿಕೆ ಮಂದ್” ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಯಿತು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಭೆ ಆರಂಭಿಸಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಲ್ಯಾಂಡ್ ಸೇರಿದಂತೆ 9 ಬೇಡಿಕೆಗಳ ಹಕ್ಕೊತ್ತಾಯಗಳನ್ನು ವಿವರಿಸಿದರು.
ಕೊಡವರು ಕೊಡವ ನೆಲದ ಪ್ರಾಚೀನ ಬುಡಕಟ್ಟು ಜನರಾಗಿದ್ದು, ಕೊಡವ ಮಂದ್ ಗಳು, ಜಲದೇವತೆ ಕಾವೇರಿ, ಸೂರ್ಯ, ಚಂದ್ರ, ಭೂಮಿತಾಯಿಯಷ್ಟೇ ಪವಿತ್ರವೂ ಆಗಿದ್ದಾರೆ. ಪ್ರಾಚೀನ ಬುಡಕಟ್ಟು ಕೊಡವ ಜನಾಂಗವನ್ನು ಈ ದೇಶದ ಜನ ಹಾಗೂ ಸರ್ಕಾರ ಸಂವಿಧಾನದ 51 ಎ.ಎಫ್ ವಿಧಿ ಮತ್ತು ವಿಶ್ವ ರಾಷ್ಟ್ರ ಸಂಸ್ಥೆಯ ಸನದ್ ನ ಪ್ರಕಾರ ರಕ್ಷಿಸಿ ಪೋಷಿಸಿ ಕಾಪಾಡಬೇಕಾಗಿದೆ ಎಂದರು.
ಸಂವಿಧಾನದ ವಿಧಿಗಳಡಿಯಲ್ಲಿ ಕೊಡವ ಸಮುದಾಯಕ್ಕೆ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಡಿಯಲ್ಲಿ ಕೊಡವರಂತಹ ಸೂಕ್ಷ್ಮ ಬುಡಕಟ್ಟು ಜನಾಂಗಕ್ಕೆ ವಿಶೇಷ ರಕ್ಷಣೆ ನೀಡಬೇಕು. ಕೊಡವರಿಗೆ ಸೂಕ್ತ ರಕ್ಷಣೆ ಮತ್ತು ಸ್ಥಾನಮಾನ ಸಿಗಬೇಕಾದರೆ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸಿಗಬೇಕಾಗಿದೆ. ಇದಕ್ಕಾಗಿ ಹೋರಾಟ ನಡೆಸುತ್ತಿರುವ ಸಿಎನ್ಸಿಯೊಂದಿಗೆ ಸರ್ವ ಕೊಡವರು ಕೈಜೋಡಿಸಬೇಕೆಂದು ಕರೆ ನೀಡಿದರು.
ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ನಮ್ಮ ಭಾವನೆಗೆ ಸ್ಪಂದಿಸಿ ಕೊಡವರ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ನಮಗೆ ಜಯ ಸಿಗುತ್ತದೆ ಎನ್ನುವ ವಿಶ್ವಾಸವಿದ್ದು, ಸಿಎನ್ಸಿಯ ಶಾಂತಿಯುತ ಹೋರಾಟ ಮುಂದುವರೆಯಲಿದೆ ಎಂದರು.
ಈ ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ವಿಶಿಷ್ಟ ಜನಾಂಗವಾಗಿರುವ ಕೊಡವರಿಗೆ ಎಸ್ಟಿ ಟ್ಯಾಗ್ ನೀಡಿ ಸಂವಿಧಾನದ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮಾತ್ರ ಸೀಮಿತರಾಗಿ ಕಾಶ್ಮೀರದಲ್ಲಿ ತಾಯಿ ಬೇರನ್ನು ಹೊಂದಿದ್ದಾರೆ. ಕೊಡವರು ಕೂಡ ಕೊಡಗಿನ ಆದಿಮಸಂಜಾತರಾಗಿದ್ದು, ಕೊಡಗು ಹೊರತು ಪಡಿಸಿ ಕೊಡಗಿನ ಹೊರಗೆ ಕೊಡವರಿಗೆ ಎಲ್ಲೂ ತಾಯಿ ಬೇರಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವ ಬಾಹುಳ್ಯ ಜನ್ಮ ಭೂಮಿಯನ್ನು ಸಂವಿಧಾನದ 244 ವಿಧಿ ಹಾಗೂ 6 ಮತ್ತು 8 ನೇ ಶೆಡ್ಯೂಲ್ ಪ್ರಕಾರ ಕೊಡವರ ಸ್ವಯಂ ಶಾಸನದ ಜನ್ಮಭೂಮಿ ಎಂದು ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ಬೋಡೋ ಲ್ಯಾಂಡ್, ಕರ್ಬಿ ಹಾಂಗ್ ಲಾಂಗ್ ಲ್ಯಾಂಡ್, ಗಾರೊಲ್ಯಾಂಡ್, ಜಯಂತಿಯ ಲ್ಯಾಂಡ್, ಕಾಸಿ ಹಿಲ್ಸ್ ಲ್ಯಾಂಡ್ ಇತ್ಯಾದಿ ಭಾರತದ ಈಶಾನ್ಯ ರಾಜ್ಯಗಳ ಹತ್ತು ಸ್ವಾಯತ್ತ ಪ್ರದೇಶಗಳು ಮತ್ತು ಪರಿಷತ್ ಗಳು ಹಾಗೂ ಲಡಾಕ್ ನ ಲೇಹ್ ಮತ್ತು ಲಡಾಕ್ ಬುದ್ದಿಷ್ಠ್ ಅಟೋನಮಸ್ ಕೌನ್ಸಿಲ್ ಮಾದರಿಯಲ್ಲಿ ಘೋಷಿಸಿ ಶಾಸನಬದ್ಧಗೊಳಿಸಬೇಕು.
ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸಬೇಕು, ಕೊಡವರ ಸಾಂಪ್ರದಾಯಿಕ ಕೋವಿ ಹಕ್ಕಿಗೆ ಯಾವುದೇ ಅಡೆತಡೆಗಳಾಗದಂತೆ ಸಂವಿಧಾನಾತ್ಮಕ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಪಾದಯಾತ್ರೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗುತ್ತಿದೆ ಎಂದು ನಾಚಪ್ಪ ಹೇಳಿದರು.
::: ಅ.21 ರಂದು ಪಾದಯಾತ್ರೆ :::
ಅ.21 ರಂದು ಬೆಳಗ್ಗೆ 10 ಗಂಟೆಗೆ ಬಿಟ್ಟಂಗಾಲ ಜಂಕ್ಷನ್ ಬಳಿಯಿಂದ ಪಾದಯಾತ್ರೆ ಆರಂಭಗೊಳಲಿದೆ. ನಂತರ ಪಟ್ಟಿಬಾಣೆ ಮಂದ್ ಪೆರವನಾಡ್ (ಬುಟ್ಟಂಗಾಲ) ನಲ್ಲಿ ಮತ್ತು ಮಧ್ಯಾಹ್ನ 2.30 ಗಂಟೆಗೆ ಬೋಟೋಳಿನಾಡ್ (ವಿರಾಜಪೇಟೆ ತಾಲ್ಲೂಕಿನ ಆರ್ಜಿ ಬೊಟೋಳಿ,)ನಲ್ಲಿ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಕಡೆಮಾಡ ಕುಸುಮ್ ಜೋಯಪ್ಪ, ಅಜ್ಜಿನಿಕಂಡ ಇನಿತಾ ಮಾಚಯ್ಯ, ನಾಡ್ ತಕ್ಕರಾದ ಪಂದಿಮಾಡ ರಮೇಶ್, ನಾಡ್ ತಕ್ಕ ಅಡ್ಡಂಡ ಪ್ರಕಾಶ್, ತೀತಮಾಡ ವಾಸು, ಕೊಲ್ಲಿರ ಬೋಪಣ್ಣ, ಕಡೆಮಾಡ ಅನಿಲ್, ತೀತಮಾಡ ಪೂವಣ್ಣ, ತೀತಮಾಡ ಕರುಂಬಯ್ಯ, ತೀತಮಾಡ ಉಮೇಶ್, ತೀತಮಾಡ ಗಣೇಶ್, ತೀತಮಾಡ ಅಮಿತ್ ಉತ್ತಪ್ಪ, ನಾಮೇರಾ ಗಣೇಶ್, ಚೆಪ್ಪುಡಿರ ಸುನಿಲ್ ತಿಮ್ಮಯ್ಯ, ಕರ್ತಮಡ ಪವನ್ ಚೆಂಗಪ್ಪ, ತೀತಿಮಾಡ ಗಾಂಧಿ ಗಣೇಶ್, ಕಡೇಮಾಡ ಪೊನ್ನಪ್ಪ, ನಾಮೇರ ಕಾವೇರಪ್ಪ, ಮದ್ರಿರ ಗಿರೀಶ್ ಗಣಪತಿ, ಚೊಟ್ಟೇಪಂಡ ಶರತ್, ಅಪ್ಪೆಯಂಗಡ ಮಾಲೆ, ಕಾಂಡೇರ ಸುರೇಶ್, ಕಿರ್ಯಮಾಡ ಶರಿನ್, ಮದ್ರಿರ ಕರುಂಬಯ್ಯ, ಅಜ್ಜಿನಿಕಂಡ ಮಾಚಯ್ಯ, ಅರೆಯಡ ಗಿರೀಶ್, ಚಂಬಂಡ ಜನತ್, ಅಪ್ಪರಂಡ ತಿಮ್ಮಯ್ಯ, ಅರೆಯಡ ಸಾವನ್, ಗುಮ್ಮಟಿರ ಕಿಲನ್, ಕಡೆಮಾಡ ಅಕ್ಷಯ್, ಕಡೆಮಾಡ ದೇವಯ್ಯ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪು ಮತ್ತು ಕೋವಿಯೊಂದಿಗೆ ಪಾಲ್ಗೊಂಡರು. ಸಭೆಯಲ್ಲಿ 9 ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*