ಮಡಿಕೇರಿ ಅ.31 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಎಂ.ಬಾಡಗ 1 ಅಂಗನವಾಡಿ ಕೇಂದ್ರದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನದ ಪ್ರಯುಕ್ತ “ರಾಷ್ಟ್ರೀಯ ಏಕತಾ ದಿವಸ’ವನ್ನು ಆಚರಿಸಲಲಾಯಿತು.
ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಜಯಂತಿ ಮಾತನಾಡಿ, ಈ ಬಾರಿ “ಮೇರಿ ಮಾಟಿ ಮೇರಿ ದೇಶ್” (ನನ್ನ ಮಣ್ಣು ನನ್ನ ದೇಶ) ಎಂಬ ವಿಶೇಷ ಅಭಿಯಾನದ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು.
ಹಲವು ದಿನಗಳಿಂದ ನಡೆದ ನನ್ನ ಮಣ್ಣು ನಮ್ಮ ದೇಶ ಕಾರ್ಯಕ್ರಮ ಕ್ಕೆ ನಾವುಗಳು ಕೈ ಜೋಡಿಸಿದ್ದು, ಈ ಅಭಿಯಾನ ಒಂದು ಮನೆಯಿಂದ ಸಂಗ್ರಹವಾದ ಒಂದು ಹಿಡಿ ಮಣ್ಣು ರಾಜಪತ್ತ್ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಉದ್ಯಾನವನಕ್ಕೆ ಕಳುಹಿಸಿ ಕೊಡುವ ಕಾರ್ಯಕ್ರಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಬಾಲವಿಕಾಸ ಸಮಿತಿ ಅಧ್ಯಕ್ಷರಾದ ದಿವ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ನಿಂಗಪ್ಪ, ಆಶಾ ಕಾರ್ಯಕರ್ತೆ ಚಂದ್ರಿಕಾ, ಅಂಗನವಾಡಿ ಸಹಾಯಕಿ ಎಚ್. ಪಿ.ಪ್ರೀತ, ಮಕ್ಕಳ ಪೋಷಕರಾದ ಲತೀಕ ಶುಭ, ಲತಾ, ಜಾಜಿ ಹಾಗೂ ಪುಟಾಣಿಗಳು ಹಾಜರಿದ್ದರು.