ಮಡಿಕೇರಿ ನ.6 : ರಾಜ್ಯದ ಬೇರೆ ಜಿಲ್ಲೆಗಳಲ್ಲಿರುವಂತೆ ಕೊಡಗಿನಲ್ಲಿಯೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಮತ್ತೆ ಜಿಲ್ಲಾಡಳಿತ ಜಾರಿಗೆ ತರಬೇಕೆಂದು ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ, ಅಂಕಣಕಾರ ಆರ್.ಕೆ.ಬಾಲಚಂದ್ರ ಮನವಿ ಮಾಡಿದ್ದಾರೆ.
ಸಮಥ೯ ಕನ್ನಡಿಗರು ಸಂಸ್ಥೆಯಿಂದ ನಗರದ ಓಂಕಾರ ಸದನದಲ್ಲಿ ಆಯೋಜಿತ ಕನ್ನಡ ಹಬ್ಬ ದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾಷಿ೯ಕ ಪ್ರಶಸ್ತಿ ಪ್ರಧಾನ ಮತ್ತು ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಾಲಚಂದ್ರ, ಪ್ರತೀ ಜಿಲ್ಲೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ನವಂಬರ್ ನಲ್ಲಿ ಆಯಾ ಜಿಲ್ಲಾಡಳಿತ ಅಂಥ ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಾ ಬರುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ರಾಜ್ಯೋತ್ಸವ ಸಂದಭ೯ ಇಂಥ ಸನ್ಮಾನ, ಗೌರವಾಪ೯ಣೆ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸಿ ಸಾಧಕರನ್ನು ಗೌರವಿಸಿ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕೆಂದು ಕೋರಿದರು.
ಕನ್ನಡ ಸಂಬಂಧಿತ ಆಚರಣೆಗಳು ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ವಷ೯ಪೂತಿ೯ ಕನ್ನಡ ಪರ ಚಟುವಟಿಕೆಗಳು ನಡೆಯುತ್ತಾ ಇದ್ದರೆ ಕನ್ನಡ ಭಾಷೆ ಮತ್ತು ಸಂಸ್ಕೖತಿ ಸಂರಕ್ಷಣೆ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ಬಾಲಚಂದ್ರ, ಸಮಥ೯ ಕನ್ನಡಿಗರು ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳ ಸಮಥ೯ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ಆಯಾ ಸಾಧಕರಿಗೆ ಮಾತ್ರವಲ್ಲದೇ ಇವರ ಸಾಧನೆಯನ್ನು ಆದಶ೯ವಾಗಿಸಿಕೊಂಡ ಇತರರಿಗೂ ಸ್ಪೂತಿ೯ ನೀಡಿದಂತಾಗುತ್ತದೆ ಎಂದು ಶ್ಲಾಘಿಸಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಕನ್ನಡ ಭಾಷಾ ಸಾಹಿತ್ಯ ಸಂರಕ್ಷಣೆ ನಿಟ್ಟಿನಲ್ಲಿ ಶಾಲಾಕಾಲೇಜುಗಳು ಮತ್ತು ಗ್ರಾಮಪಂಚಾಯತ್ ಮಟ್ಟದಲ್ಲಿನ ಗ್ರಂಥಾಲಯಗಳನ್ನು ಮತ್ತಷ್ಟು ಓದುಗ ಸ್ನೇಹಿಯಾಗಿಸಬೇಕು. ವಿದ್ಯಾಥಿ೯ಗಳು ಹಾಗೂ ಗ್ರಾಮಸ್ಥರಲ್ಲಿ ಓದಿನ ಮಹತ್ವ ತಿಳಿಸುವಂತ ಕೆಲಸವಾಗಬೇಕು. ಕೊಡಗಿನಲ್ಲಿ ಗ್ರಾ.ಪಂ. ಗಳಲ್ಲಿರುವ ಡಿಜಿಟಲ್ ಲೈಬ್ರರಿಗಳಲ್ಲಿರುವ ಸಹಸ್ರಾರು ಸಾಹಿತ್ಯ ಬರಹಗಳು ಓದುಗರ ಗಮನಕ್ಕೆ ಬರುವಂಥ ಪ್ರಚಾರ ಕೈಗೊಳ್ಳಬೇಕಾಗಿದೆ ಎಂದರು. ಸಮಥ೯ ಕನ್ನಡಿಗರು ಸಂಸ್ಥೆಯನ್ನು ಕೊಡಗು ಜಿಲ್ಲೆಯಲ್ಲಿ 7 ವಷ೯ಗಳಿಂದ ಸಕಾ೯ರದ ಅನುದಾನವಿಲ್ಲದೇ ಮಹಿಳೆಯರೇ ನಿವ೯ಹಿಸುತ್ತಾ ಬರುವ ಮೂಲಕ ತಾವು ಸಮಥ೯ ಕನ್ನಡತಿಯರು ಎಂದು ನಿರೂಪಿಸಿದ್ದಾರೆ ಎಂದೂ ಅನಿಲ್ ಹಷ೯ ವ್ಯಕ್ತಪಡಿಸಿದರು. ಮಡಿಕೇರಿ ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ನಡೆಯುವ ಕನ್ನಡ ಪರ ಕಾಯ೯ಕ್ರಮಗಳಿಗೆ ಅನುದಾನ ನೀಡುವ ಮೂಲಕ ನಗರಸಭೆ ಕೂಡ ಕನ್ನಡಕ್ಕೆ ಸಂಬಂಧಿಸಿದ ಕಾಯ೯ಕ್ರಮಗಳಿಗೆ ಉತ್ತೇಜನ ನೀಡಬೇಕೆಂದು ಅನಿಲ್ ಸಲಹೆ ನೀಡಿದರು.
ಸಮಥ೯ ಕನ್ನಡಿದ ಸಂಸ್ಥೆಯ ಪ್ರಧಾನ ಸಂಚಾಲಕ ಆನಂದ ದಗ್ಗನಹಳ್ಳಿ ಮಾತನಾಡಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಮಥ೯ ಕನ್ನಡಿಗರು ಸಂಸ್ಥೆ 7 ವಷ೯ಗಳಿಂದ ವೈವಿಧ್ಯಮಯ ಕಾಯ೯ಕ್ರಮಗಳು ಮತ್ತು ಸಮಾಜಸೇವೆಯ ಮೂಲಕ ಜನಪರ ಚಟುವಟಿಕೆ ಹಮ್ಮಿಕೊಂಡು ಬಂದಿದೆ. ಕೊಡಗಿನಲ್ಲಿ ಸಮಥ೯ ಕನ್ನಡಿಗರು ಸಂಸ್ಥೆ ಅತ್ಯಂತ ಸಕ್ರಿಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಯುವದಂತವೈದ್ಯೆ ಡಾ.ಅನುಶ್ರೀ ಅನಂತಶಯನ ಮಾತನಾಡಿ, ಸಮಥ೯ ಕನ್ನಡಿಗರು ಸಂಸ್ಥೆಯು ಹಲವಾರು ಕಾಯ೯ಕ್ರಮಗಳ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪಣ ತೊಟ್ಟಿರುವುದು ಶ್ಲಾಘನೀಯ ಎಂದರು.
ಸಮಾಜಸೇವಕಿ ಕಲ್ಲುಮಾಡಂಡ ಶಶಿಮೊಣ್ಣಪ್ಪ, ಸಮಥ೯ ಕನ್ನಡಿಗರು ಸಂಸ್ಥೆಯ ಕೆ.ಆರ್. ನಗರ ತಾಲೂಕು ಘಟಕದ ಸಂಚಾಲಕ ಹೇಮಂತ್, ಕಲ್ಲಹಳ್ಳಿ ವೇದಿಕೆಯಲ್ಲಿದ್ದರು. ಸಮಥ೯ ಕನ್ನಡಿಗರು ಸಂಸ್ಥೆಯ ಕೊಡಗು ಸಂಚಾಲಕಿ ಕೆ.ಜಯಲಕ್ಷ್ಮಿ ಸ್ವಾಗತಿಸಿದ ಕಾಯ೯ಕ್ರಮವನ್ನು ಪ್ರತಿಮಾ ಹರೀಶ್ ರೈ ನಿರೂಪಿಸಿ ಅಪಿ೯ತಾ ಸಂದೀಪ್ ಪ್ರಾಥಿ೯ಸಿದರು.
ಕವಿತೆ ಓದು – ಕವಿಗೋಷ್ಟಿ :: ಸಮಥ೯ ಕನ್ನಡಿಗರು ಸಂಸ್ಥೆಯ ವತಿಯಿಂದ ಕವಿತೆ ಓದು – ಕವಿಗೋಷ್ಟಿಯಲ್ಲಿ ಆನಂದ್ ದೆಗ್ಗನಹಳ್ಳಿ, ಗಿರೀಶ್ ಕಿಗ್ಗಾಲು, ರಜಿತಾ ಕಾಯ೯ಪ್ಪ, ಸುನೀತಾ ಕುಶಾಲನಗರ, ಹೇಮಂತ್ ಕಲ್ಲಹಳ್ಳಿ, ಕೖಪಾದೇವರಾಜ್, ಹೇಮಂತ್ ಪಾರೇರ, ರಂಜಿತ್ ಕವಲಪಾರ, ಡಾ.ಸತೀಶ್ ಎಸ್.ವಿ. ಕವನ ವಾಚಿಸಿದರು. ಶ್ರೀರಕ್ಷಾ ಪ್ರಭಾಕರ್ ಪ್ರಾಥಿ೯ಸಿದ ಕಾಯ೯ಕ್ರಮವನ್ನು ಅಬ್ದುಲ್ ಕೌಸರ್ ನಿರೂಪಿಸಿದರು.
ಸಮಥ೯ ಕನ್ನಡಿಗರು ಪ್ರಶಸ್ತಿಗೆ ಭಾಜನರಾದವರು :: ಈ ವಷ೯ ಸಮಥ೯ ಕನ್ನಡಿಗರು ಸಂಸ್ಥೆ ನೀಡುವ ವಾಷಿ೯ಕ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 9 ಸಾಧಕರು ಭಾಜನರಾದರು.
ಡಾ.ಕೆ.ಬಿ.ಸೂಯ೯ಕುಮಾರ್ (ವೈದ್ಯಕೀಯ), ಕುಂತಿಬೋಪಯ್ಯ (ಶಿಕ್ಷಣ), ಎಂ.ಎನ್.ಚಂದ್ರಮೋಹನ್ (ಪರಿಸರ ) , ಎಚ್.ಎಸ್.ತಿಮ್ಮಪ್ಪಯ್ಯ (ಕೖಷಿ), ಸ್ಮಿತಾ ಅಮೖತರಾಜ್ (ಸಾಹಿತ್ಯ), ಬೊಳ್ಳಜಿರ ಅಯ್ಯಪ್ಪ ( ಪ್ರಕಾಶನ), ಲಕ್ಷ್ಮೀಶ್ ( ಮಾಧ್ಯಮ ಛಾಯಾಗ್ರಹಣ), ಪ್ರೀತಾ ಕೖಷ್ಣ (ನೖತ್ಯ) ಧೖತಿ ಪೂಜಾರಿ (ಬಾಲ ಪ್ರತಿಭೆ) ಇವರಿಗೆ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರಾದ ಆರ್.ಕೆ.ಬಾಲಚಂದ್ರ, ಅನಿಲ್ ಎಚ್.ಟಿ., ಕಲ್ಲುಮಾಡಂಡ ಶಶಿಮೊಣ್ಣಪ್ಪ, ಕೆ.ಜಯಲಕ್ಷ್ಮಿ, ಆನಂದ್ ದೆಗ್ಗನಹಳ್ಳಿ , ಡಾ.ಅನುಶ್ರೀ ಪ್ರಶಸ್ತಿ ವಿತರಿಸಿದರು. ಸಮಥ೯ ಕನ್ನಡಿಗ ಗೌರವ ಸ್ವೀಕರಿಸಿ ಮಾತನಾಡಿದ ಕುಂತಿಬೋಪಯ್ಯ, ಯಾವುದೇ ವೖತ್ತಿಯಾದರೂ ವೖತ್ತಿ ಪ್ರೇಮವನ್ನು ಉಳಿಸಿಕೊಂಡು ಕಾಯೋ೯ನ್ಮುಖರಾಗಬೇಕು. ಆಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.