ಮಡಿಕೇರಿ ಜ.09 : ವಿರಾಜಪೇಟೆ ವಲಯ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿರುವ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ 4 ವಾಹನಗಳನ್ನು ಎಲ್ಲಿದೆಯೋ, ಹೇಗಿದೆಯೋ ಹಾಗೆ ಟೆಂಡರ್ ಕಂ ಹರಾಜು ಮೂಲಕ ಜನವರಿ, 16 ರಂದು ಬೆಳಗ್ಗೆ 11 ಗಂಟೆಗೆ ವಿಲೇವಾರಿ ಮಾಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಅಬಕಾರಿ ನಿರೀಕ್ಷಕರು, ವಿರಾಜಪೇಟೆ ವಲಯ, ವಿರಾಜಪೇಟೆ ಇವರನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.









