ವಿರಾಜಪೇಟೆ ಜ.15 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಷಿಯೇಷನ್ ವತಿಯಿಂದ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿನಿ ಗಗನಶ್ರೀ ಹಾಗೂ ಆರ್.ವಿನಿಷ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಪಲ್ ಮತ್ತು ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಫೆ.5 ಮತ್ತು 6 ರಂದು ಸ್ಪರ್ಧೆ ನಡೆಯಲಿದೆ.
ಗಗನಶ್ರೀ ವಿರಾಜಪೇಟೆಯ ವಿಜಯನಗರದ ನಿವಾಸಿ ಶಶಿಕುಮಾರ್ ಮತ್ತು ದಿವ್ಯ ದಂಪತಿಗಳ ಪುತ್ರಿ.
ಆರ್.ವಿನಿಷ ವಿರಾಜಪೇಟೆ ಸುಭಾಷ್ ನಗರದ ನಿವಾಸಿ ಕೆ.ರಜನಿಕಾಂತ್ ಮತ್ತು ಆರ್.ಅರ್ಪಿತಾ ದಂಪತಿಗಳ ಪುತ್ರಿ.
ಈ ವಿದ್ಯಾರ್ಥಿಗಳು ವಿರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ಶಾಲೆಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು, ವಿಷ್ಣು ಅವರು ತರಬೇತಿ ನೀಡುತ್ತಿದ್ದಾರೆ.









