ಮಡಿಕೇರಿ ಫೆ.2 NEWS DESK : ಭಾರತವನ್ನು ಒಟ್ಟುಗೂಡಿಸುವುದು ಭಾರತೀಯ ಜನತಾ ಪಕ್ಷದ ನಿಲುವು, ಭಾರತವನ್ನು ತುಂಡು ಮಾಡುತ್ತೇವೆ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಎನ್ನುತ್ತಾರೆ, ಮತ್ತೊಂದೆಡೆ ಡಿ.ಕೆ.ಸುರೇಶ್ ಅವರು ಭಾರತವನ್ನು ತುಂಡು ಮಾಡಬೇಕು ಎನ್ನುತ್ತಾರೆ. ಕಾಂಗ್ರೆಸ್‌ನ ಒಟ್ಟು ಸಂಸ್ಕೃತಿಯೇ ಅಂತಹದ್ದು, ನರೇಂದ್ರ ಮೋದಿ ಅಧಿಕಾರಿಕ್ಕೆ ಬರುವ ಮುಂಚೆ ಕೆಲವು ಭಯೋತ್ಪಾದಕರು ಭಾರತವನ್ನು ತುಂಡು ತುಂಡು ಮಾಡುವುದಾಗಿ ಹೇಳಿದ್ದರು. ಆ ಮಾದರಿಯ ಮಾತುಗಳನ್ನು ಹೇಳಿರುವುದು ಖಂಡನೀಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಕಠಿಣವಾದ ಶಬ್ದಗಳಲ್ಲಿ ಖಂಡಿಸುತ್ತಾರೆ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದುಕೊಂಡಿದ್ದೆ ಆದರೆ, ಅವರು ಅತ್ಯಂತ ಮೃದುವಾದ ಧೋರಣೆ ತೋರಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.
ಅಪೂರ್ವವಾದ ಮಧ್ಯಂತರ ಬಜೆಟ್ :: ನಿರ್ಮಲ ಸೀತಾರಂ ಅವರು ಘೋಷಿಸಿದ ಮಧ್ಯಂತರ ಬಜೆಟ್ ಚುನಾವಣೆಗೆ ಸಮೀಪ ಇರುವ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಿಮಿಕ್ ಮಾಡದೆ ಮುಂದಿನ ತಲೆಮಾರಿಗೆ ಬೇಕಾದ ಯೋಜನೆ ಹಾಗೂ ಯೋಚನೆಯನ್ನು ರೂಪಿಸಿರುವುದು. ಪ್ರವಾಸೋದ್ಯಮಕ್ಕೆ ನೀಡಿದ ಶಕ್ತಿ, ಮೀನುಗಾರಿಕೆಗೆ ನೀಡಿದ ಯೋಜನೆ ಇವೆಲ್ಲ ಇಡೀ ದೇಶವಾಸಿಗಳ ಮೇಲೆ ಅತ್ಯಂತ ಪರಿಣಾಮ ಬಿರುವಂತಹ, ಪ್ರಗತಿಯೆಡೆಗೆ ಭಾರತವನ್ನು ಕೊಂಡೊಯ್ಯುವಂತಹ ಅಪೂರ್ವವಾದ ಮಧ್ಯಂತರ ಬಜೆಟ್ ಮಂಡಿಸಿದ್ದು, ಟಿಕೆಗಾಗಿ ಕಾಂಗ್ರೆಸ್ ಅವರು ಟೀಕೆ ಮಾಡುತ್ತಿದ್ದಾರೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*