Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ರೋಗ ಮುಕ್ತ»ಆಹಾರ ಅಗಿಯಿರಿ ಆರೋಗ್ಯ ಪಡೆಯಿರಿ
ರೋಗ ಮುಕ್ತ

ಆಹಾರ ಅಗಿಯಿರಿ ಆರೋಗ್ಯ ಪಡೆಯಿರಿ

ಫೆಬ್ರವರಿ 6, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಸುಲಲಿತ ಜೀರ್ಣಕ್ರಿಯೆ ಹಾಗೂ ಆಹಾರದ ಪೋಷಕಾಂಶಗಳ ಹೀರುವಿಕೆ ಆಹಾರ ಅಗಿಯುವಿಕೆಯಿಂದಲೇ ಪ್ರಾರಂಭ. ಹಾಗಾಗಿ ಚೆನ್ನಾಗಿ ಅಗಿಯುವಿಕೆ ಆಹಾರ ಜೀರ್ಣಕ್ರಿಯೆಯಲ್ಲಿ ಮೊದಲ ಅಂಶ ಹಾಗೂ ನಮ್ಮ ಆರೋಗ್ಯ ನಿರ್ಧರಿಸುವ ಅಂಶವೂ ಆಗಿದೆ.

ಚೆನ್ನಾಗಿ ಅಗಿಯುವುದರಿಂದ ಆಗುವ ಪ್ರಯೋಜನಗಳೇನು?
ಹೆಚ್ಚು ಪೋಷಕಾಂಶ ಹೀರುವಿಕೆ ಹಾಗೂ ಶಕ್ತಿಯ ಪ್ರಮಾಣ ಉಳಿತಾಯ- ಅಗಿಯುವಿಕೆ ಆಹಾರದ ದೊಡ್ಡ ತುಣುಕುಗಳನ್ನು ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಕಿಣ್ವಗಳು ಮತ್ತು ಜಠರಾಮ್ಲದ ಕಾರ್ಯನಿರ್ವಹಣೆ ಸುಲಭವಾಗಿ ಆಗಿ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಕಡಿಮೆ ಶಕ್ತಿ ವ್ಯಯವಾಗುತ್ತದೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ವ್ಯಯವಾಗುವ ಕ್ರಿಯೆಯಾದ ಜೀರ್ಣಕ್ರಿಯೆಗೆ ನಾವು ಅಗಿದು ಅಗಿದು ತಿಂದು ಸಹಾಯ ಮಾಡಿದಾಗ ಶಕ್ತಿಯ ವ್ಯಯವನ್ನು ಉಳಿಸಬಹುದಲ್ಲವೇ? ಇದಲ್ಲದೆ ಅಗಿ ಯುವಿಕೆಯು ಸಾಲಾಗಿ, ಸಲೀಸಾಗಿ ಗ್ರಂಥಿಗಳಿಂದ ಆಮ್ಲ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ.

ಶರೀರದ ಸಮತೂಕ ಕಾಯ್ದುಕೊಳ್ಳುವಿಕೆ- ಸಾಮಾನ್ಯವಾಗಿ ಆಹಾರ ಸೇವನೆಯ ಹೊತ್ತಿನಲ್ಲಿ ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎನ್ನುವ ಸಂದೇಶ ರವಾನೆಯಾಗಲು ಕನಿಷ್ಟ 20 ನಿಮಿಷಗಳಾದರೂ ಬೇಕು. ಆದರೆ ಚೆನ್ನಾಗಿ ಅಗಿದು ತಿನ್ನುವುದರಿಂದ ಮೆದುಳಿಗೆ ಬೇಗನೇ ಹೆಚ್ಚು ಸಂದೇಶಗಳು ರವಾನೆಯಾಗಿ ಕಡಿಮೆ ತಿನ್ನುವ ಹಾಗೆ ಪ್ರಚೋದನೆಯಾಗುತ್ತದೆ. ಹಾಗಾಗಿ ನಿಧಾನವಾಗಿ ಅಗಿದು ತಿಂದಾಗ ಮಾಮೂಲಿ ಸೇವನೆಗಿಂತ ಶೇಕಡಾ 10 ರಷ್ಟು ಕಡಿಮೆ ಆಹಾರ ಸೇವನೆ ಬೇಕಾಗುವುದು ಸಾಬೀತಾಗಿದೆ. ಆದ್ದರಿಂದ ಅನವಶ್ಯಕ ಆಹಾರ ಸೇವನೆಯಿಂದ ಆಹಾರ ಉಳಿತಾಯದ ಜೊತೆಗೆ ಅತಿ ಆಹಾರ ಸೇವನೆಯಿಂದ ಉಂಟಾಗುವ ಬೊಜ್ಜು, ಸಿಹಿಮೂತ್ರ ರೋಗ ಇನ್ನಿತರ ಅನೇಕ ರೋಗಗಳು ಬರದಂತೆ ತಡೆಯುತ್ತವೆ.

ಆಹಾರವು ಚೆನ್ನಾಗಿ ಅಗಿಯುವುದರಿಂದ ಲಾಲಾರಸದೊಡನೆ ಹೆಚ್ಚೆಚ್ಚು ಬೆರೆತು ನಂತರ ಅನ್ನನಾಳದಲ್ಲಿ ಚಲಿಸುವ ಕ್ರಿಯೆ ಸುಲಭವಾಗುತ್ತದೆ. ಆಹಾರ ನುಣ್ಣಗೂಆಗಿ ಜೀರ್ಣಕ್ರಿಯೆ ಉತ್ತೇಜನೆಗೊಂಡು ಹೊಟ್ಟೆ ಕರಳುಗಳು ಹಾಗೂ ಇತರ ಅಂಗಗಳ ಮೇಲೂ ಪರಿಣಾಮ ಬೀರಿ ಸಹಜ ಸುಲಲಿತ ಜೀರ್ಣ ಕ್ರಿಯೆಯನ್ನುಂಟು ಮಾಡುತ್ತದೆ. ದೈಹಿಕ, ಮಾನಸಿಕ ಉಲ್ಲಾಸವನ್ನು ನೀಡುತ್ತದೆ. ಸಣ್ಣ ಕರುಳಿನಿಂದ ಪೋಷಕಾಂಶಗಳು ಹೀರುವಿಕೆಯೂ ಚೆನ್ನಾಗಿ ಆಗುತ್ತದೆ. ಜೀರ್ಣಕ್ರಿಯೆ ಸುಲಭ, ಸರಳವಾದಾಗ ಶಕ್ತಿಯ ವ್ಯಯ ಕಡಿಮೆಯಾಗಿ ಶಕ್ತಿ ಉಳಿತಾಯವಾಗುತ್ತದೆ.

* ಹಲ್ಲು ಮತ್ತು ಒಸಡುಗಳು ಆಹಾರ ಚೆನ್ನಾಗಿ ಅಗಿಯುದರಿಂದ ಗಟ್ಟಿಯಾಗುತ್ತವೆ ಮತ್ತು ಅಗಿಯುವುದರಿಂದ ಲಾಲರಸವು (ಸಲೈವಾ) ಹೆಚ್ಚು ಉತ್ಪತ್ತಿಯಾಗಿ ಅದರಲ್ಲಿರುವ ಲೈಸೋಜೈಮ್ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ಅದರಲ್ಲಿರುವ ನೈಟ್ರಿಕ್ ಆಕ್ಸೈಡ್ ಕೂಡ ಆಂಟಿಸೆಪ್ಟಿಕ್ ಗುಣವನ್ನು ಹೊಂದಿದ್ದು ಇವೆಲ್ಲವೂ ದಂತಕ್ಷಯ ಹಾಗೂ ದಂತಕುಳಿಗಳಿಂದ ರಕ್ಷಣೆ ನೀಡಿ ಅಗಿಯುವುದರಿಂದ ಉತ್ತಮ ದಂತಾರೋಗ್ಯ ನಮ್ಮದಾಗುತ್ತದೆ. ಅದಕ್ಕೆ ಮ್ಯಾಕ್ ಫಾಡಲ್ ಹೇಳಿದ್ದು ‘ನೀವು ನಿಮ್ಮ ಆಹಾರವನ್ನು ಅಗಿಯಿರಿ ನಿಮ್ಮ ಹೊಟ್ಟೆಯೊಳಗೆ ಹಲ್ಲಿಲ್ಲ’ ಎಂದು ( Chew your food, your stomach has no teeth).

* ಆಹಾರ ಅಗಿಯದೇ ಇದ್ದರೆ ದೊಡ್ಡ ತುಣುಕುಗಳನ್ನು ನುಂಗಿದಾಗ ದೊಡ್ಡ ಕರುಳಿನಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳ ಹೆಚ್ಚಿದ ಚಟುವಟಿಕೆಯಿಂದ ಅಜೀರ್ಣ, ಗ್ಯಾಸ್ ಸಮಸ್ಯೆ, ಹೊಟ್ಟೆಯುಬ್ಬರ, ಬೇಧಿ, ಹೊಟ್ಟೆನೋವು, ಮಲಬದ್ಧತೆ ಮುಂತಾದ ಸಮಸೈಗಳು ಹೆಚ್ಚಾಗುತ್ತದೆ. ಮಲಬದ್ಧತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.

* ಆಹಾರವನ್ನು ನಿಧಾನವಾಗಿ ಅಗಿಯುವುದರಿಂದ ಹಂತ ಹಂತವಾಗಿ ಅನುಭವಿಸಿ ಸವಿಯನ್ನು ಸವಿಯಬಹುದು. ಅದನ್ನೇ ಮ್ಯಾಕ್ ಮಿಕಲ್ ಎನ್ನುವವರು ಹೇಳಿದ್ದು ‘ನಿಮ್ಮ ಆಹಾರವನ್ನು ಸವಿಯಿರಿ ಹೊಟ್ಟೆಯಲ್ಲಿ ರುಚಿಯ ಮೊಗ್ಗುಗಳಿಲ’ `Taste your food, your stomach has no taste buds’.

* ಇಂದು ಆಹಾರದ ಕಲಬೆರೆಕೆ ಎಲ್ಲೆಡೆ ಹೆಚ್ಚಿರುವುದರಿಂದ ಕಲಬೆರೆಕೆಯ ವಿಷವನ್ನು ಚೆನ್ನಾಗಿ ಅಗಿಯುವುದರಿಂದ ಗುರುತಿಸಬಹುದು.

* ಆಹಾರ ಜೀರ್ಣಕ್ರಿಯೆಗೆ ಅತ್ಯಗತ್ಯವಾದ ನೀರಿನ ಪ್ರಮಾಣವನ್ನು ಚೆನ್ನಾಗಿ ಅಗಿಯುವುದರ ಮೂಲಕ ಕಾಯ್ದುಕೊಳ್ಳಬಹುದು.

* ಅಗಿಯುವಿಕೆಯಿಂದ ಲಾಲಾರಸ ಹೆಚ್ಚುವುದರ ಜೊತೆಗೆ ಪ್ಯಾರೋಟಿಡ್ ಗ್ರಂಥಿಗಳಿಂದ ಉತ್ಪಾದನೆ ಯಾಗುವ ಪ್ಯಾರೋಟಿನ್ ಹಾರ್ಮೊನುಗಳ ಸ್ವಲ್ಪ ಭಾಗ ಬಾಯಿ ಮೂಲಕ ಲಿಂಪ್ ಸೆಲ್ಸ್‌ನಿಂದ ಹೀರಲ್ಪಟ್ಟು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ಶರೀರವನ್ನು ಚೈತನ್ಯ ಶೀಲವಾಗಿ ಮಾಡುತ್ತದೆ. ಹೀಗೆ ವಯಸ್ಕರೂ ಅಗಿಯುವುದರಿಂದ ಯುವ ಚೈತನ್ಯ ಪಡೆಯಬಹುದು .ಅಲ್ಲದೆ ಸೊಂಕು ತಡೆಗಟ್ಟುವ ಬಿಳಿರಕ್ತಕಣಗಳು (ಟಿ-ಸೆಲ್ಸ್) ಹೆಚ್ಚಾಗುತ್ತದೆ. ಅಗಿಯುವುದರಿಂದ ಶರೀರ ಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಂಡು ಆಟೋಇಮ್ಯುನ್ ಕಾಯಿಲೆ ಬರುವುದು ಕಡಿಮೆ ಆಗುತ್ತವೆ.

ಅಗಿಯುವುದು ಹೇಗೆ?
ಆಹಾರ ಅಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದಾಗ ಹೇಗೆ ಅಗಿಯುವುದೆಂದು ತಿಳಿಯಲೇಬೇಕಾಗಿದೆ.
* ಆಹಾರವನ್ನು ಒಮ್ಮೆಲೇ ಬಾಯಿಗೆ ತುರುಕಬೇಡಿ
* ಸಣ್ಣ ಸಣ್ಣ ತಂಡುಗಳಿಂದ ಪ್ರಾರಂಭಿಸಿ ನಂತರ ನಿಧಾನವಾಗಿ ಅಗಿದು ಅಗಿದು ತಿನ್ನಿರಿ
* ಮೆತ್ತಗಿನ ಆಹಾರವನ್ನು ಹಣ್ಣು ತರಕಾರಿಗಳನ್ನು 8 ರಿಂದ 10 ಬಾರಿ ಅಗೆಯಬೇಕು.
* ಗಟ್ಟಿ ಆಹಾರವಾದರೆ 25ರಿಂದ 30 ಬಾರಿ ಅಗಿಯಿರಿ.
* ನಿಧಾನವಾಗಿ ಅಗಿದು ಆಹಾರವನ್ನು ನೀರನ್ನಾಗಿ ಮಾಡಿ. ನಿಧಾನವಾಗಿ ನುಂಗಿ ಚೆನ್ನಾಗಿ ಅಗಿದು ನುಂಗಿದ ಮೇಲೆ ಇನ್ನೊಂದು ತುಂಡು ಆಹಾರವನ್ನು ಸೇವಿಸಿ. ಇಡೀ ಜೀರ್ಣಾಂಗವ್ಯೂಹದ ಕ್ರಿಯೆ ಸುಲಿಲಿತವಾಗಿ ನಡೆದು ಹೋಗುವುದು. ಅದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿಯೂ ‘ಘನಾಹಾರವನ್ನು ಕುಡಿಯಿರಿ, ದ್ರವಾಹಾರವನ್ನು ತಿನ್ನಿರಿ’ (drink the solid and eat the liquid) ಎಂದು ಹೇಳಿದ ಹರ್ಬರ್ಟ್ ಫಿಲ್ಟನ್‌ನ ಮಾತನ್ನು ಸಮರ್ಥಿಸಿರುವುದು.
* ಹೀಗೆ ಅಗಿದು ಅಗಿದು ತಿಂದಾಗ ಶೇಕಡಾ 75ರಷ್ಟು ಜೀರ್ಣಕ್ರಿಯೆಯ ತೊಂದರೆಗಳು ಕಡಿಮೆಯಾಗುತ್ತದೆ.
* ಹೀಗೆ ಕನಿಷ್ಟ ಊಟ ತಿಂಡಿಗೆ 20–25 ನಿಮಿಷಗಳನ್ನಾದರೂ ಅಗಿಯಲು ವ್ಯಯ ಮಾಡಿದರೆ ಜೊತೆಗೆ ಟಿ.ವಿ ನೋಡುತ್ತಾ, ವೃತ್ತ ಪತ್ರಿಕೆ, ನಿಯತಕಾಲಿಕೆಗಳನ್ನು ಓದುತ್ತಾ, ನಡೆದಾಡುತ್ತಾ ತಿನ್ನದೇ, ತಿನ್ನುವ ಆಹಾರದ ಮೇಲೆ ಗಮನವಿಟ್ಟು, ನುಣ್ಣಗೆ ಅಗಿದು ನುಂಗಿದರೆ ನೀವು ಸಂಪೂರ್ಣ ಆರೋಗ್ಯವಾಗಿ, ಆನಂದಮಯವಾಗಿ ಇರಬಹುದಲ್ಲವೇ.

ಮೂಲ :ಪ್ರಜಾವಾಣಿ 

ಕೃಪೆ : ವಿಕಾಸ್ ಪೀಡಿಯ 

Follow us Follow us
Share. WhatsApp Facebook Twitter Email Telegram Copy Link

Related Posts

ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರ ಉದ್ಘಾಟನೆ

ಸೆಪ್ಟೆಂಬರ್ 18, 2026

ಪರೀಕ್ಷೆ ದಿನಗಳು : ರಾತ್ರಿ ಜಾಗರಣೆ ಹಾನಿಕಾರಕ : ಡಾ.ಕೆ.ಬಿ.ಸೂರ್ಯಕುಮಾರ್* 

ಫೆಬ್ರವರಿ 22, 2026

ಪಲಾವ್-ಪರೋಟಗೆ ಈ ಮೂಲಂಗಿ ರೈತಾನೇ ಬಾಸ್! ಒಮ್ಮೆ ಟ್ರೈ ಮಾಡಿದ್ರೆ ಹೋಟೆಲ್ ರುಚಿಯನ್ನೂ ಮರೆತುಬಿಡ್ತೀರಾ!

ಫೆಬ್ರವರಿ 15, 2026

ಕೊಡ್ಲಿಪೇಟೆಯಲ್ಲಿ ಅ.17ರಂದು ಕಾವೇರಿ ಆರತಿ, ಬಾಗಿನ ಅರ್ಪಣೆ

ಅಕ್ಟೋಬರ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ, NEWS DESK ಅ.15: ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಕೊಡ್ಲಿಪೇಟೆಯ ನಂದಿಪುರ ಕೆರೆ ಆವರಣದ ನೇಸರ ಉದ್ಯಾನದಲ್ಲಿ ಅಕ್ಟೋಬರ್ 17ರಂದು…

ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆಗೆ ಪೂರ್ವಸಿದ್ಧತೆ; ಡಿಸೆಂಬರ್ 22ರಂದು ಹನುಮ ಜಯಂತಿ ಆಚರಣೆ; ದಶಮಂಟಪಗಳ ಸಮಿತಿಯಿಂದ ಸಿದ್ಧತೆ

ಅಕ್ಟೋಬರ್ 15, 2026

ನಾಪೋಕ್ಲುವಿನಲ್ಲಿ ಅ. 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜೆ; ಅಲಂಕೃತ ವಾಹನಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ; ನಿವೃತ್ತ ವೈದ್ಯ ಡಾ. ಹೆಚ್.ವಿ. ದೇವದಾಸ್ ಅವರಿಗೆ ಸನ್ಮಾನ

ಅಕ್ಟೋಬರ್ 15, 2026

ಮಡಿಕೇರಿ ದಸರಾ ದೀಪಾಲಂಕಾರ : ಅಲಂಕಾರ ಸಮಿತಿಗೆ ಪೂರ್ಣ ಜವಾಬ್ದಾರಿ ನೀಡಿಲ್ಲ : ಮುನೀರ್ ಮಾಚಾರ್ ಸ್ಪಷ್ಟನೆ : ಮುಂದಿನ ದಸರಾ ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಸಮಿತಿಗಳ ಅಭಿಪ್ರಾಯ ಪಡೆಯಲು ಒತ್ತಾಯ

ಅಕ್ಟೋಬರ್ 15, 2026

ರಜನಿ ರೈ ಅವರಿಗೆ ಡಾಕ್ಟರೇಟ್ ಪದವಿ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ವಲಸಿಗರು ಪತ್ತೆ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾಹಿತಿ

ಅಕ್ಟೋಬರ್ 14, 2026

ಮಡಿಕೇರಿಯಲ್ಲಿ ಅ.16 ಮತ್ತು 17ರಂದು ಸೂರ್ಯ ಘರ್ ಯೋಜನೆಯ ವಿಶೇಷ ಅಭಿಯಾನ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ನಾಲ್ವರು ಬಾಂಗ್ಲಾದೇಶಿ ವಲಸಿಗರು ಪತ್ತೆ; ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆ ಆಗ್ರಹ

ಅಕ್ಟೋಬರ್ 14, 2026

ಮಡಿಕೇರಿ : ಅ.15 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 14, 2026

ಮಡಿಕೇರಿಯಲ್ಲಿ ಕಾಫಿ ದಸರಾ : ಕಾಫಿ ಕೃಷಿಗೆ ಹೆಚ್ಚಿನ ಉತ್ತೇಜನ : ಶಾಸಕ ಡಾ.ಮಂತರ್ ಗೌಡ

ಅಕ್ಟೋಬರ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.