ಮಡಿಕೇರಿ ಮಾ.10 NEWS DESK : ನಿಸ್ವಾಥ೯ದ ನೆಲೆವೀಡಾಗಿ ಹೆಸರಾಗಿದ್ದ ಭಾರತದಲ್ಲಿಇತ್ತೀಚಿಗೆ ಸ್ವಾಥ೯ಪರತೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಾಥ೯ ಮನೋಭಾವನೆ ದೂರಮಾಡಿ ನಿಸ್ವಾಥ೯ವಾಗಿ ಸೇವೆ ಮಾಡುವ ಮೂಲಕ ವಿಶ್ವಾತ್ಮ ಪದವಿಯನ್ನು ಹೊಂದುವಂತೆ ನಾಡಿನ ಖ್ಯಾತ ವಿದ್ವಾಂಸ ಶಿವಮೊಗ್ಗದ ಜಿ.ಎಸ್. ನಟೇಶ್ ಹೇಳಿದರು.
ಮಡಿಕೇರಿ ಬಳಿಯ ಕಗ್ಗೋಡ್ಲು ಗ್ರಾಮದ ಕೂಗ್೯ ಅಂಬರ ರೆಸಾಟ್೯ನಲ್ಲಿ ಆಯೋಜಿತ ಲಯನ್ಸ್ ಸಂಸ್ಥೆಯ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ನಟೇಶ್, ಸೇವೆ ಮಾಡುವವರಲ್ಲಿ ನಗುವಿನ ಮನೋಭಾವ ಮುಖ್ಯವಾಗಿರಬೇಕು. ಸಂತೋಷದ ಭಾವನೆಯಿಂದ ಸೇವೆಗೆ ಮುಂದಾಗಬೇಕು. ಗಂಟು ಮುಖ ಹೊತ್ತು ಸೇವೆ ಮಾಡಲು ಮುಂದಾದರೆ ಯಾರೂ ಮೆಚ್ಚಲಾರರು. ಸೇವೆ ಮಾಡುವವರು ಮನಸ್ಸಿನಾಳದಿಂದ ಸಮಧಾನಚಿತ್ತರಾಗಿ ಇತರರಿಗೆ ಉಪಕಾರ ಮಾಡಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟರು. ಲಯನ್ಸ್ ನಂಥ ಸೇವಾ ಸಂಸ್ಥೆಗಳು ಜೀವನದಲ್ಲಿ ಸೇವಾ ಮನೋಭಾವನೆ ಹೆಚ್ಚಿಸಲು ನೆರವಾಗುತ್ತದೆ ಎಂದೂ ಅವರು ಹೇಳಿದರು.
ಪ್ರಕೖತ್ತಿಯನ್ನು ಮಾನವ ಸೂರೆ ಮಾಡುತ್ತಿದ್ದಾನೆ. ದೇವರಿಗೆ ಪ್ರಿಯವಾಗಿದೆ ಎಂದು ಪ್ರಕೖತ್ತಿಯಲ್ಲಿ ನಳನಳಿಸುವ ಪುಪ್ಪಗಳನ್ನು ಬೇಕಾಬಿಟ್ಟಿ ಹಾಳು ಮಾಡಿ, ಗಿಡಗಳು ಭಣಗುಟ್ಟುವಂತೆ ಮಾಡುತ್ತಿದ್ದಾನೆ. ಹಬ್ಬಗಳು ಬಂತೆಂದರೆ ಮಾವು, ಬಿಲ್ವ, ಬೇವಿನ ಮರಗಳು ಬೋಳಾಗುವಂಥ ಪರಿಸ್ಥಿತಿಯಿದೆ. ಪ್ರಕೖತ್ತಿ ನಳನಳಿಸುತ್ತಿದ್ದರೆ ದೇವರಿಗೆ ಇಷ್ಟ ಎಂಬುದು ಮರೆತೇ ಹೋಗುತ್ತದೆ. ಗಿಡ ಬೆಳೆಸುವ ಪ್ರವೖತ್ತಿ ಮರೆತೇಹೋಗುತ್ತಿದೆ ಎಂದೂ ನಟೇಶ್ ವಿಷಾಧಿಸಿದರು.
ಭಾರತದ ಭದ್ರತೆ ಚೆನ್ನಾಗಿದ್ದರೆ ದೇಶದೊಳಗಿನ ಸಂಸ್ಕೖತಿಯುತ ಸಮಾಜವು ಸುಭದ್ರವಾಗಿರುತ್ತದೆ. ಹೀಗಾಗಿ ದೇಶದ ಬೇಲಿಯನ್ನು ಭದ್ರವಾಗಿ ಸಂರಕ್ಷಿಸಿಕೊಳ್ಳಬೇಕು. ಬುದ್ದಿವಂತಿಕೆಯಿಂದ ಮಾತ್ರ ಯಾರಿಗೆ ಆದರೂ ಶ್ರೇಯಸ್ಸು ಲಭಿಸುತ್ತದೆ. ಬುದ್ದಿ ಇದೆ ಎಂದಾದರೆ ಎಲ್ಲವೂ ಲಭಿಸಿದಂತಾಗುತ್ತದೆ, ಬುದ್ದಿಗೆ ಅಧಿದೇವತೆಯಾಗಿರುವ ಸೂಯ೯ನೇ ಎಲ್ಲರ ಜೀವನಕ್ಕೆ ಆದಶ೯ವಾಗಿದ್ದಾನೆ. ಯಾಕೆಂದರೆ, ಪ್ರತೀದಿನವೂ ಸಮಯ ಮೀರದಂತೆ ಸೂಯ೯ ಉದಯಿಸುತ್ತಾ, ಅಸ್ತಂಗತನಾಗುತ್ತಾ ತನ್ನ ಕಾಯಕ ತೋರುತ್ತಾನೆ. ಸೂಯ೯ ತನ್ನ ಕಾಯ೯ದಲ್ಲಿ ವಿಳಂಭ ಮಾಡಿದ ಉದಾಹರಣೆಯೇ ಇಲ್ಲ. ಹೊಗಳಿಕೆ, ತೆಗಳಿಕೆಗಳನ್ನು ಪಡೆಯುತ್ತಲೇ ಸೂಯ೯ ತನ್ನ ಕಾಯಕ ನಿಷ್ಟೆ ತೋರುತ್ತಾನೆ. ಇಂಥ ಸೂಯ೯ ಪ್ರತೀಯೋವ೯ರ ಜೀವನದಲ್ಲಿಯೂ ಸೇವಾ ಗುಣಕ್ಕೆ ಮಾದರಿಯಾಗಬೇಕು ಎಂದೂ ನಟೇಶ್ ಹೇಳಿದರು. ಲಯನ್ಸ್ ಸಂಸ್ಥೆಯ ಮಾಜಿ ಗವನ೯ರ್ ಜಿ.ಶ್ರೀನಿವಾಸ್ ಮಾತನಾಡಿ, ಭಾರತೀಯರು ಸೇವಾಮನೋಭಾವನೆಯನ್ನು ಇತ್ತೀಚಿನ ವಷ೯ಗಳಲ್ಲಿ ಹೆಚ್ಚುಹೆಚ್ಚಾಗಿ ಬೆಳೆಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಭಾರತೀಯರ ಸೇವಾ ಗುಣ ಪ್ರಶಂಸೆಗೆ ಪಾತ್ರವಾಗುತ್ತಿದೆ. ಲಯನ್ಸ್ ಸಂಸ್ಥೆ ಕೂಡ ವಿಶ್ವವ್ಯಾಪಿ ಸಾವಿರಾರು ಸೇವಾ ಯೋಜನೆಗಳ ಮೂಲಕ ಜನರ ಶ್ರೇಯೋಭಿವೖದ್ದಿಗೆ ಕಾರಣವಾಗಿದೆ ಎಂದರು. ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, 1917 ರಲ್ಲಿ ಅಮೇರಿಕಾದಲ್ಲಿ ಪ್ರಾರಂಭವಾದ ಲಯನ್ಸ್ ಸಂಸ್ಥೆಯು ಭಾರತ ಸೇರಿದಂತೆ 210 ದೇಶಗಳಲ್ಲಿ 14 ಲಕ್ಷ ಸದಸ್ಯರನ್ನು ಹೊಂದಿದೆ. 100 ವಷ೯ ಪೂರೈಸಿದ ವಿಶ್ವದ ಪ್ರಮುಖ ಸೇವಾ ಸಂಸ್ಥೆಗಳಲ್ಲಿ ಲಯನ್ಸ್ ಕೂಡ ಒಂದು ಎನಿಸಿಕೊಂಡಿದೆ. ಮಡಿಕೇರಿಯ ಲಯನ್ಸ್ ಸಂಸ್ಥೆಗೆ 59 ವಷ೯ಗಳ ಇತಿಹಾಸವಿದ್ದು, ಲಯನ್ಸ್ ವಲಯದಲ್ಲಿ 14 ಕ್ಲಬ್ ಗಳ ಮೂಲಕ 507 ಸದಸ್ಯರಿದ್ದಾರೆ. ಕೊಡಗು ಜಿಲ್ಲೆ ಲಯನ್ಸ್ ಸಂಸ್ಥೆಗೆ ಮೂರು ಗವನ೯ರ್ ಗಳನ್ನು ನೀಡಿದೆ ಎಂದು ಮಾಹಿತಿ ನೀಡಿದರು. ಲಯನ್ಸ್ ವಲಯದ ಪ್ರಥಮ ಮಹಿಳೆ ಪ್ರಿಯಾನವೀನ್ ಸಮಾವೇಶ ಉದ್ಘಾಟಿಸಿದರು. ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಎ.ನಿರಂಜನ್ ಸ್ವಾಗತಿಸಿ, ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಠ್ ವಂದಿಸಿದರು. ಕೆ.ಮಧುಕರ್, ಮಾಧುಯ೯ ನಿರೂಪಿಸಿದ ಕಾಯ೯ಕ್ರಮದಲ್ಲಿ ಮಡಿಕೇರಿ ಲಯನ್ಸ್ ಸಂಸ್ಥೆಯ ಮಹಿಳೆಯರು ಸ್ವಾಗತ ಗೀತೆ ಹಾಡಿದರು. ಲಯನ್ಸ್ ಸಂಸ್ಥೆಯ ಗವನ೯ರ್ ಮೆಲ್ವಿನ್ ಡಿಸೋಜ, ಮಡಿಕೇರಿ ಲಯನ್ಸ್ ಸಂಸ್ಥೆಯ ಕಾಯ೯ದಶಿ೯ ನಟರಾಜ್ ಕೆಸ್ತೂರ್, ಖಜಾಂಜಿ ಎನ್.ಬಿ.ರವಿ, ಸಮ್ಮೇಳನ ಸಮಿತಿ ಖಜಾಂಜಿ ಕೆ.ಎ.ಬೊಳ್ಳಪ್ಪ ಸೇರಿದಂತೆ ಲಯನ್ಸ್ ಸಂಸ್ಥೆಯ ವಿವಿಧ ಪದಾಧಿಕಾರಿಗಳು, ವಲಯ ಮುಖಂಡರು ವೇದಿಕೆಯಲ್ಲಿದ್ದರು. ರಾಜ್ಯ ಸಕಾ೯ರದ ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮೆಹರೂಜ್ ಖಾನ್ ಸೇರಿದಂತೆ ಅನೇಕ ಗಣ್ಯರು ಸಮ್ಮೇಳನ ಸಾಕ್ಷೀಕರಿಸಿದರು. ಇದೇ ಸಂದಭ೯ ಮಡಿಕೇರಿಯ ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್, ಬಾಲಾಜಿ ಕಶ್ಯಪ್, ಪೊಲೀಸ್ ಸಿಬ್ಬಂದಿ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.
Breaking News
- *ಭಾಗಮಂಡಲ : ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು : ಸಿಎಂ*
- *ರೂ.1.50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಗೆ ಮನವಿ ಸಲ್ಲಿಸಿದ ಮುದ್ದಂಡ ಹಾಕಿ ಉತ್ಸವ ಸಮಿತಿ*
- *ಅರ್ಚಕರ ಮೇಲೆ ಹಲ್ಲೆ : ಹೋರಾಟದ ಎಚ್ಚರಿಕೆ ನೀಡಿದ ವಿಶ್ವ ಹಿಂದು ಪರಿಷತ್ ಮಠ-ಮಂದಿರ್ ಘಟಕ*
- *ಫೆ.7 ರ ಪಾದಯಾತ್ರೆಗೆ ಸಿಎನ್ಸಿ ಬೆಂಬಲ*
- *ಕೊಡಗು : ಕಾರ್ಮಿಕರ ಸಾಮಾಜಿಕ ಭದ್ರತಾ ಕುರಿತು ಜನಜಾಗೃತಿ : ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ*
- *ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಟ್ ಬಿಡುಗಡೆ*
- *ಕೊಡಗಿಗೆ ಸಚಿವ ಸ್ಥಾನ ನೀಡಲು ಒತ್ತಾಯ*
- *ಮರಗೋಡಿನಲ್ಲಿ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್*
- *ತಲಕಾವೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ : ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ : ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ*