
ಮಡಿಕೇರಿ ಏ.18 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗಳ ಗೈರು ಮತದಾರರ (AVES) ವರ್ಗದ ಮತದಾರರಿಗೆ ಸ್ಥಾಪಿಸಲಾದ ಅಂಚೆ ಮತ ಕೇಂದ್ರ (PVC) ಗಳನ್ನು ಸ್ಥಾಪಿಸಲು ಚುನಾವಣಾ ಆಯೋಗದಿಂದ ನಿರ್ದೇಶನ ನೀಡಲಾಗಿದೆ.
ಅದರಂತೆ 21-ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ, 208-ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 107 ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಅಂಚೆ ಮತಪತ್ರದ ಸೌಲಭ್ಯವನ್ನು ಒದಗಿಸಬೇಕಾಗಿದ್ದು, ಮತದಾರರಿಗೆ ಅನುಕೂಲವಾಗುವಂತೆ ಅಂಚೆ ಮತ ಕೇಂದ್ರವನ್ನು (Postal Voting Center) ಜಿಲ್ಲಾಧಿಕಾರಿಗಳ ಹೊಸ ಕಛೇರಿ, ನೆಲ ಮಹಡಿ ಕೊಠಡಿ ಸಂಖ್ಯೆ-10 ಬನ್ನೂರು ರಸ್ತೆ ಸಿದ್ದಾರ್ಥ ನಗರ, ಮೈಸೂರು ಸ್ಥಾಪಿಸಲಾಗಿದೆ.
ಅಗತ್ಯ ಸೇವೆಗಳಡಿ ಕೆಲಸ ನಿರ್ವಹಿಸುತ್ತಿರುವ ಮತದಾರರು ಏ.19, 20 ಹಾಗೂ 21 ರಂದು (AVES) ವರ್ಗದ ಮತದಾರರು ಮೇಲ್ಕಂಡ ಸ್ಥಳದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿರುವುದರಿಂದ ಎಲ್ಲಾ (AVES) ವರ್ಗದ ಮತದಾರರು ತಪ್ಪದೆ ಮತ ಚಲಾಯಿಸಲು ಮಡಿಕೇರಿ ಉಪವಿಭಾಗಾಧಿಕಾರಿ ಕೋರಿದ್ದಾರೆ.
