ಮಡಿಕೇರಿ ಏ.27 NEWS DESK : ನೂರಾರು ಏಕರೆ ಕೃಷಿ ಭೂಮಿಗೆ ವರದಾನವಾಗಿದ್ದ ಕೂಡಿಗೆ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ದಂಡಿನಮ್ಮ ಕೆರೆ ಅಭಿವೃದ್ಧಿಯಿಲ್ಲದೆ ಈಗ ಬರಡು ಭೂಮಿಯಾಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಪುನಶ್ಚೇತನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬೆಳೆಗಾರರು ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ನೀರಿನಿಂದ ಕಂಗೊಳಿಸುತ್ತಿದ್ದ ಶ್ರೀ ದಂಡಿನಮ್ಮ ಕೆರೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು, ಕೆರೆಯು ಬರಡುಭೂಮಿಯಂತಾಗಿದೆ. ವಿಶಾಲವಾದ ಈ ಕೆರೆಯ ದಂಡದ ಮೇಲೆ ಮುಳ್ಳಿನ ಪೊದೆ, ಗಿಡಗಂಟಿ ಬೆಳೆದುಕೊಂಡಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಇದನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ತಕ್ಷಣವೇ ಒತ್ತುವರಿ ಆಗಿರುವ ಈ ಕೆರೆಯನ್ನು ಸರ್ವೆ ಮಾಡಿಸಿ ಬಿಡಿಸಿಕೊಡಬೇಕು ಹಾಗೂ ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಬೇಕೆಂದು ದಂಡಿನಮ್ಮ ಹಾಗೂ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಹಾಗೂ ಪ್ರಮುಖರಾದ ಸೋಮಶೇಖರ್ ಆಗ್ರಹಿಸಿದ್ದಾರೆ. (ವರದಿ : ಗಣೇಶ್ ಕೂಡಿಗೆ)