ಮಡಿಕೇರಿ ಏ.29 NEWS DESK : ಕೊಡಗಿನ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಿಂಬರ್ಲಿ ಕೂರ್ಗ್ ಸಂಸ್ಥೆ ವತಿಯಿಂದ ಮೇ 4 ಮತ್ತು 5 ರಂದು ಮಡಿಕೇರಿಯಲ್ಲಿ ಕೂರ್ಗ್ ಕಾರ್ನೀವಲ್ ನಡೆಯಲಿದೆ ಎಂದು ಸಂಸ್ಥೆಯ ಪ್ರಮುಖರಾದ ಕೆ.ಜಿ.ಮದನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನ, ರುಚಿಕರವಾದ ಆಹಾರ, ಫ್ಲೀ ಮಾರುಕಟ್ಟೆ, ಮೋಜಿನ ಆಟಗಳು, ಮನರಂಜನೆ, ಕಾರ್ಯಾಗಾರಗಳು ನಡೆಯಲಿದೆ ಎಂದರು.
ಮೇ 4 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಪ್ರವೇಶ ಶುಲ್ಕ ರೂ.99 ನಿಗಧಿಪಡಿಸಲಾಗಿದೆ. ದೇಶ ವಿದೇಶಗಳಿಂದ ಕಲಾವಿದರು ಪಾಲ್ಗೊಂಡು ನೋಟ್ ಸಿಕ್, ನಾಯಮಯ, ಲೌಡ್ ಸೈಲೆನ್ಸ, ಬಿ ಸೈಡ್ ಟೇಪ್ಸ್, ಸವಾರಿ, ರಾ ಪ್ಲೋಸ್, ಸಾಥ್ವಿಕ್ ಗುಪ್ತಾ, ಡಿಪ್ಟಿಕ್, ಟ್ರೆಮೆಂಟ್, ಸೌಂಡ್ ಒಫ್ ಹಿಮಾಲಯಾಸ್ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿಂಬರ್ಲಿ ಸಂಸ್ಥೆಯ ಪ್ರಮುಖರಾದ ಬಿ.ಎಂ.ಗರುಡ, ಲಿಖಿತ ಸಿಂಗ್, ವಿನಯ್ ಬಿ.ಕೃಷ್ಣ, ಪ್ರಣಬ್ ಭಟ್ ಉಪಸ್ಥಿತರಿದ್ದರು.