ಮಡಿಕೇರಿ ಏ.29 NEWS DESK : ಮತ್ತಿಕಾಡು ಅತ್ತೂರು ನಲ್ಲೂರು ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ಏ.30 ರಂದು ನಡೆಯಲಿದೆ. ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ ಕಲಶ ಪೂಜೆ, ಗಣಪತಿ ಹೋಮ, ದುರ್ಗಾಹೋಮ, ಮಹಾ ಕಲಶಾಭಿಷೇಕ ಜರುಗಲಿದ್ದು, ಮಧ್ಯಾಹ್ನ ಮಹಾಪೂಜೆ, ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆಯಾಗಲಿದೆ. ಸಂಜೆ ಮಹಾರಂಗ ಪೂಜೆ ಮತ್ತು ಪ್ರಸಾದ ವಿತರಣೆಯಾಗಲಿದೆ.










