ಮಡಿಕೇರಿ ಮೇ 3 NEWS DESK : ಮರಗೋಡು ಶ್ರೀ ಶಿವ ಪಾರ್ವತಿ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಪಾಂಡನ ಮನೆಯಿಂದ ಭಂಡಾರ ತರುವ ಮೂಲಕ ಪ್ರಾರಂಭವಾಯಿತು. ಪಟ್ಟಣಿಯಂದು ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿ ಕೀಳುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ಸಂಜೆ ದೇವರ ಜಳಕದ ನಂತರ 11 ಸುತ್ತು ದೇವರ ನೃತ್ಯ ಬಲಿಯು ನಡೆದು ಉತ್ಸವ ಸಂಪನ್ನಗೊಂಡಿತು.
ಉತ್ಸವ ಸಂದರ್ಭದಲ್ಲಿ ದೇವರಿಗೆ ಕುಂಕುಮರ್ಚನೆ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಅರ್ಚಕರಾದ ಮಹೇಶ್ ಶಗ್ರಿತ್ತಾಯ ಹಾಗೂ ಕಾಸರಗೋಡಿನ ತಂತ್ರಿಗಳಾದ ಗೋಪಾಲಕೃಷ್ಣ ಕೆದಿಲಾಯ ಅವರು ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರು. ಬ್ರಹ್ಮವಾಹಕರಾದ ಸತ್ಯಮೂರ್ತಿ ಸರಳಾಯ ಮತ್ತು ಕೃಷ್ಣ ಪ್ರಸಾದ್ ಕೆದಿಲಾಯ ಅವರು ಉತ್ಸವ ಮೂರ್ತಿಯನ್ನು ಹೊತ್ತು ದೇವರ ಸೇವೆಯನ್ನು ನೆರೆವೇರಿಸಿದರು.
ಉತ್ಸವದಲ್ಲಿ ವಿವಿಧ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.











