ಮಡಿಕೇರಿ ಮೇ 9 NEWS DESK : ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಾವೈಕ್ಯತಾ ಶಿಬಿರದಲ್ಲಿ ಕೊಡಗಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಎನ್.ಎಸ್.ಎಸ್ ಅಧಿಕಾರಿ ಭಾಗವಹಿಸಿದ್ದಾರೆ.
ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಮೇ 15ರ ವರಗೆ ನಡೆಯುವ ರಾಷ್ಟ್ರೀಯ ಬಾವೈಕ್ಯತಾ ಶಿಬಿರದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ರೀಶು ಕಾವೇರಪ್ಪ, ಕಾವೇರಿ ಕಾಲೇಜು ವಿರಾಜಪೇಟೆ ಸ್ವಯಂ ಸೇವಕ ಕೆ.ಕೆ.ಮುತ್ತಣ್ಣ ಹಾಗೂ ಎನ್.ಎಸ್.ಎಸ್ ಅಧಿಕಾರಿ ಬಿ.ಬಿ.ಸುನಿಲ್ ಕುಮಾರ್, ಸೆಂಟ್ ಆನ್ ವಿದ್ಯಾ ಸಂಸ್ಥೆ ಸ್ವಯಂ ಸೇವಕಿಯರಾದ ಬಿ.ಎನ್.ಲಾವಣ್ಯ, ಜಿ.ಎಂ.ಜನಿತಾ ಭಾಗವಹಿಸಿದ್ದಾರೆ.
ಕೊಡಗು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಶೀನಾಪ್ಪ ಮತ್ತು ಎನ್.ಎಸ್.ಎಸ್ ಸಂಯೋಜನಾಧಿಕಾರಿ ಬಿ.ಎಸ್.ಗುಣಶ್ರೀ ಅವರ ಮಾರ್ಗದರ್ಶನದಲ್ಲಿ ಕೊಡಗು ಎನ್.ಎಸ್.ಎಸ್ ನೊಡಲ್ ಅಧಿಕಾರಿ ಎಂ.ಎನ್.ವನಿತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶಿಬಿರಕ್ಕೆ ಕಳುಹಿಸಿ ಕೊಡಲಾಯಿತು.
ಕೊಡಗು ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ ಕೊಡಗು ಎನ್.ಎಸ್.ಎಸ್ ಪ್ರತ್ಯೇಕಗೊಂಡ ಮೇಲೆ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಬಾವೈಕ್ಯತಾ ಶಿಬಿರದಲ್ಲಿ ಕೊಡಗಿನ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದಾಗಿ ಎಂ.ಎನ್.ವನಿತ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.