ಮಡಿಕೇರಿ ಮೇ 18 NEWS DESK : ಹಾಡಹಗಲೇ ನಿರಾತಂಕವಾಗಿ ಕಾಡಾನೆಯೊಂದು ವಸತಿ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದ ಘಟನೆ ಸುಂಟಿಕೊಪ್ಪ ಬಳಿಯ ಕಂಬಿಬಾಣೆಯಲ್ಲಿ ನಡೆದಿದೆ.
ಕಂಬಿಬಾಣೆ ಗ್ರಾಮದ ಮುಖ್ಯ ರಸ್ತೆಯ ಇಕ್ಕೆಲಗಳು ಜನವಸತಿಯ ಪ್ರದೇಶವಾಗಿದ್ದು, ಶನಿವಾರ ಬೆಳಗ್ಗೆ ಅಚಾನಕ್ ಕಾಡಾನೆಯೊಂದು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡಿತು. ಇದರಿಂದ ಕಂಗಾಲಾದ ಅಲ್ಲಿನ ನಿವಾಸಿಗಳು ತಕ್ಷಣ ಸ್ಥಳದಿಂದ ದೂರಕ್ಕೆ ತೆರಳಿದರು.
ಕಾಡಾನೆ ಮುಖ್ಯ ರಸ್ತೆಯ ಉದ್ದಕ್ಕೂ ಸಾಗಿ ಕೆಲ ಕಾಲ ಆತಂಕವನ್ನುಂಟುಮಾಡಿತಾದರು, ಬಳಿಕ ಗ್ರಾಮದ ಅಂಚಿನಿಂದ ಅgಣ್ಯ ಪ್ರದೇಶದತ್ತ ಸಾಗಿತು. ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಹಗಲಿನಲ್ಲೆ ಇದೀಗ ಕಾಡಾನೆಗಳು ಬರುತ್ತಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ.










