ಮಡಿಕೇರಿ ಮೇ 28 NEWS DESK : 2023-24 ನೇ ಸಾಲಿನಲ್ಲಿ ಆರ್‍ಎಸ್‍ಪಿಡಿ ಲೆಕ್ಕ ಶೀರ್ಷಿಕೆಯಡಿ ಬೆಳೆಸಿರುವ ಸಸಿಗಳನ್ನು 2024 ನೇ ಸಾಲಿನ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಚಾಲ್ತಿಯಲ್ಲಿರುವ ಕಾನೂನು ನಿಯಮಗಳಿಗೆ ಅನುಸಾರವಾಗಿ ವಿತರಿಸಲು ಉದ್ದೇಶಿಸಿದೆ.
ಅದರಂತೆ, ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ಮಜ್ಜಿಗೆಹಳ್ಳ ಸಸ್ಯ ಕ್ಷೇತ್ರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲು ಬೆಳೆಸಲಾದ 6*9 ಗಾತ್ರದ 75 ಸಾವಿರ ಹಾಗೂ 8*12 ಗಾತ್ರದ 5 ಸಾವಿರ ಒಟ್ಟು 80 ಸಾವಿರ ಸಸಿಗಳು ದಾಸ್ತಾನಿರುತ್ತದೆ.
ಆಸಕ್ತ ಫಲಾನುಭವಿಗಳು ತಮ್ಮ ವೈಯಕ್ತಿಕ ವಿವರಗಳಾದ ಗುರುತಿನ ಚೀಟಿ, ಆರ್‍ಟಿಸಿ, ಆಧಾರ್ ಕಾರ್ಡ್ ಮತ್ತಿತರ ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಜೂ.1 ರಿಂದ ವಲಯ ಅರಣ್ಯಾಧಿಕಾರಿ, ತಿತಿಮತಿ ವಲಯ, ತಿತಿಮತಿಯವರ ಕಚೇರಿಗೆ ತೆರಳಿ ನಗದು ಪಾವತಿಸಿ ರಶೀದಿ ಪಡೆದುಕೊಂಡು ಸಸಿಗಳನ್ನು ಪಡೆದುಕೊಳ್ಳಬಹುದು ಎಂದು ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.