
ಮೂರ್ನಾಡು ಮೇ 29 NEWS DESK : ಕಾಂತೂರು ಗ್ರಾಮದ ಕೆರೆಮನೆ ಸ್ಥಳದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಮೇ 30 ಮತ್ತು 31ರಂದು ನಡೆಯಲಿದೆ.
ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶಿಲಾವಿಗ್ರಹ ಪ್ರತಿಷ್ಠಾಪನೆಯು ಇರಿಟ್ಟಿಯ ನಾಗರಾಜ ಮಹೇಶ್‍ಭಟ್ ಮತ್ತು ಗಣಪತಿಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ.
ಮೇ 30 ರಂದು ಬೆಳಗ್ಗೆ 10ಗಂಟೆಗೆ ಮಹಾಸಂಕಲ್ಪ, ಗಣಪತಿ ಪೂಜೆ, ದೀಪಲಕ್ಷಿಪೂಜೆ, ಪುಣ್ಯಾಹವಾಚನ, ದೇವನಾಂದಿ, ಮಾತೃಕಾ ಪೂಜೆ, ರಕ್ಷಾಬಂಧನ, ಅಂಕುರಾರ್ಪಣೆ, ಬ್ರಹ್ಮಕೂರ್ಚಹವನ, ಮಧುಪರ್ಕ ಪೂಜೆ, ಅಷ್ಠಮೂರ್ತಿಪ್ರಾರ್ಥನೆ, ಸಂಜೆಯ ವೇಳೆಗೆ ಕಲಶ ಸ್ಥಾಪನೆ, ಮೂರ್ತಿ ಪರಿಗ್ರಹಣ, ದೇವಾಲಯ ಪರಿಗ್ರಹಣ, ಗಣಹೋಮ, ವಾಸ್ತುಹೋಮ, ರಾಕ್ಷೋಘ್ನ ಹೋಮ, ಅಧಿವಾಸ ಹೋಮಪೂಜೆ, ಮಹಮಂಗಳಾರತಿ ಮತ್ತು ದಿಗ್ಭಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ನಸಂತರ್ಪಣೆ ನೆರವೇರಲಿದೆ.
ಮೇ 31 ರಂದು ಬೆಳಗ್ಗೆ 6.30ಗಂಟೆಗೆ ಗಣಪತಿಹೋಮ, ವಿಗ್ರಹಪ್ರತಿ ಷ್ಠಾಪನೆ, ರತ್ನನ್ಯಾಸ, ಪೀಠನ್ಯಾಸ ಹೋಮ, ಪಂಚಸೂಕ್ತ ಹೋಮ, ಪ್ರತಿಷ್ಠಾಹೋಮ, ಕಲಾಹವನಾದಿಗಳು, ಪೂರ್ಣಾಹುತಿ, ಕಲಶಕುಂಭಾಭಿಷೇಕ, ಪಂಚಾಮೃತಾಭಿಷೇಕ, ಅಲಂಕಾರಸೇವೆ, ಮಹಾನೈವೇದ್ಯ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.










